AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ

Smartphone Tips: ನೀವು ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದರೆ, ಮಾರಾಟ ಮಾಡುವ ಮುನ್ನ ಅನುಸರಿಸಲೇಬೇಕಾದ ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.

Tech Tips: ಸ್ಮಾರ್ಟ್​ಫೋನ್ ಮಾರಾಟ ಮಾಡುವ ಮುನ್ನ ಹೀಗೆ ಮಾಡಲು ಮರೆಯದಿರಿ
Smartphones
TV9 Web
| Updated By: Vinay Bhat|

Updated on: Nov 28, 2022 | 6:45 AM

Share

ಈಗೇನಿದ್ದರು ಸ್ಮಾರ್ಟ್​ಫೋನ್​ಗಳ (Smartphone) ಜಮಾನ. ಮಾರುಕಟ್ಟೆಯಲ್ಲಿ ದಿಕ್ಕೊಂದರಂತೆ ಕಡಿಮೆ ಬೆಲೆಗೆ ಹೊಸ ಹೊಸ ಸ್ಮಾರ್ಟ್​ಫೋನುಗಳು ಬಿಡುಗಡೆ ಆಗುತ್ತಿರುತ್ತದೆ. ಅಗ್ಗದ ಬೆಲೆಗೆ ಆಕರ್ಷಕ ಫೋನುಗಳು (Budget Phones) ಸಿಗುವ ಕಾರಣ ಹಳೆಯ ಫೋನ್ ಕೊಂಚ ಕೆಟ್ಟು ಹೋದರೆ ಸಾಕು ಅದನ್ನು ಸೇಲ್ ಮಾಡಿ ಹೊಸ ಮೊಬೈಲ್ (Mobile) ತೆಗೆದುಕೊಳ್ಳುವವರೇ ಹೆಚ್ಚು. ಆದರೆ, ಹಳೆಯ ಸ್ಮಾರ್ಟ್​ಫೋನನ್ನು ಸೇಲ್ ಮಾಡುವ ಮುನ್ನ ನೀವು ಕೆಲವೊಂದು ಕೆಲಸನ್ನು ತಪ್ಪದೆ ಮಾಡಬೇಕು. ನೀವು ಸ್ಮಾರ್ಟ್‌ಫೋನ್‌ನ್ನು ಮಾರಾಟ ಮಾಡಲು ಯೋಚನೆ ಮಾಡುತ್ತಿದ್ದರೆ, ನಿಮ್ಮ ಫೋನ್‌ ಮಾರಾಟ ಮಾಡುವ ಮುನ್ನ ನೀವು ಅನುಸರಿಸಲೇಬೇಕಾದ ವಿಧಾನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಎಷ್ಟು ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯೋಣ.

ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬೇರೆಯವರಿಗೆ ಮಾರುವ ಅಥವಾ ವಿನಿಮಯ ಮಾಡುವ ಮುನ್ನ, ಅದರಲ್ಲಿರುವ ಫೈಲುಗಳನ್ನು ಅಳಿಸಿಹಾಕಲೇಬೇಕು. ಯಾಕೆಂದರೆ, ಈ ಸ್ಮಾರ್ಟ್‌ಫೋನ್‌ನ್ನು ಅವರು ಬಳಸಲಾರಂಭಿಸಿದಾಗ, ನಿಮ್ಮ ಇಮೇಲ್‌ಗೆ ಲಾಗಿನ್ ಆಗಬಹುದು; ಸಂದೇಶಗಳನ್ನು ನೋಡಬಹುದು ಹಾಗೂ ಇತರ ಫೈಲ್‌ಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಅದನ್ನು ಬೇರೆಯವರಿಗೆ ಹಸ್ತಾಂತರಿಸುವ ಈ ಕ್ರಮಗಳನ್ನು ಅನುಸರಿಸಿ.

ಮೊದಲನೆಯದಾಗಿ, ಅದರಲ್ಲಿರುವ ಎಲ್ಲ ಫೈಲುಗಳು, ಸೆಟ್ಟಿಂಗ್‌ಗಳನ್ನು ನಿಮ್ಮಲ್ಲಿ ಬ್ಯಾಕಪ್ ಇಟ್ಟುಕೊಳ್ಳಬೇಕು. ಕೆಲವು ಫೋನ್‌ಗಳಲ್ಲಿ ಮೆಮೊರಿ ಕಾರ್ಡ್‌ಗೆ ಬ್ಯಾಕಪ್ ಮಾಡಿಕೊಳ್ಳುವ ಆಯ್ಕೆಯಿದ್ದರೆ, ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಸರ್ವರ್‌ನಲ್ಲೇ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿರುತ್ತದೆ. ಇದರ ಜೊತೆಗೆ ಸ್ಮಾರ್ಟ್‌ಫೋನ್‌ ಅನ್ನು ಮಾರುವ ಮುನ್ನ ನಿಮ್ಮ ಸ್ಮಾರ್ಟ್‌ಫೋನಿನ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡುವುದು ಕಡ್ಡಾಯ. ನೀವು ಸ್ಮಾರ್ಟ್‌ಫೋನ್ ಫ್ಯಾಕ್ಟ್ರಿ ಸೆಟ್ಟಿಂಗ್ಸ್ ರೀಸೆಟ್ ಮಾಡಿದರೆ ಫೋನಿನಲ್ಲಿನ ನಿಮ್ಮ ಡೇಟಾ ಸಂಪೂರ್ಣವಾಗಿ ಅಳಿಸಿಹೊಗುತ್ತದೆ, ಹಾಗಾಗಿ, ಮರೆಯದೇ ಫ್ಯಾಕ್ಟ್ರಿ ರೀಸೆಟ್ ಮಾಡಿ.

ಇದನ್ನೂ ಓದಿ
Image
Black Friday Sale: ಕೇವಲ 7999 ರೂ. ಗೆ ನಥಿಂಗ್ ಫೋನ್ (1) ಖರೀದಿಸಿ: ಇಲ್ಲಿದೆ ನೋಡಿ ಟ್ರಿಕ್
Image
Oppo Reno 9 Series: ಭಾರತಕ್ಕೆ ಬರುತ್ತಿದೆ ವಿದೇಶದಲ್ಲಿ ಧೂಳೆಬ್ಬಿಸುತ್ತಿರುವ ಒಪ್ಪೋ ರೆನೋ 9 ಸರಣಿ: ಬೆಲೆ ಎಷ್ಟು?
Image
Tech Tips: ನಿಮಗೆ ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್ ಕಡಿಮೆಯಿದ್ದರೆ ಈ ಟ್ರಿಕ್ ಫಾಲೋ ಮಾಡಿ ನೋಡಿ
Image
Asus ROG Phone 6 Series: ಅಮೆಜಾನ್, ಫ್ಲಿಪ್​ಕಾರ್ಟ್ ಯಾವುದರಲ್ಲೂ ಇಲ್ಲ: ಏಸಸ್ ರಾಗ್ ಫೋನ್ 6 ಸರಣಿ ಎಲ್ಲಿ ಖರೀದಿಗೆ ಸಿಗುತ್ತದೆ?

ಇನ್ನು ಶೋರೂಂನಿಂದ ಸ್ಮಾರ್ಟ್​ಫೋನ್ ಹೊರತಂದರೆ ಸಾಕು ಆ ಮೊಬೈಲ್ ಬೆಲೆ ಶೇ. 40 ರಷ್ಟು ಇಳೆಕೆಯಾಗುತ್ತದೆ ಎನ್ನುತ್ತವೆ ಸೆಕೆಂಡ್‌ ಹ್ಯಾಂಡ್‌ ಬೆಲೆಗಳನ್ನು ಹೇಳುವಂತಹ ಸೈಟ್‌ಗಳು. ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಮಾರಾಟ ಮಾಡುವಾಗ ಅದರ ಮಾರ್ಕೆಟ್ ವ್ಯಾಲ್ಯೂ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಫೋನ್‌ನ ಒಳಭಾಗ ಮತ್ತು ಹೊರಭಾಗವನ್ನು ಚೆನ್ನಾಗಿ ಸ್ವಚ್ಛಮಾಡಿಕೊಳ್ಳಿ. ತಪ್ಪದೆ ಫಿಂಗರ್ ಪ್ರಿಂಟ್ ಕಲೆಗಳನ್ನು ನಿವಾರಿಸಿ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡಿ.

ಆ್ಯಂಡ್ರಾಯ್ಡ್‌ ಫೋನನ್ನು ರೀಸೆಟ್ ಮಾಡುವುದು ಹೇಗೆ?:

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಸೆಟ್ಟಿಂಗ್ಸ್ ಆ್ಯಪ ಅನ್ನು ತೆರೆಯಿರಿ ಮತ್ತು ಈಗಿನ ಎಲ್ಲಾ ಆ್ಯಂಡ್ರಾಯ್ಡ್‌ ಫೋನ್‍ಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸರ್ಚ್ ಬಾರ್ ಅಥವಾ ಐಕಾನ್ ಮೇಲೆ ಟ್ಯಾಪ್ ಮಾಡಿ. ‘ರೀಸೆಟ್’ಅನ್ನು ಹುಡುಕಿರಿ ಮತ್ತು ಫಲಿತಾಂಶಗಳಲ್ಲಿ ಫ್ಯಾಕ್ಟರಿ ಡಾಟಾ ರೀಸೆಟ್ ಆಯ್ಕೆಯನ್ನು ಒತ್ತಿರಿ. ಅನಂತರ ತೆರೆಯುವ ಪರದೆಯಲ್ಲಿ ರೀಸೆಟ್ ಆಯ್ಕೆ ಮಾಡಿ. ಫೋನ್‍ನ ಸಂಪೂರ್ಣ ಕ್ಲೀನಿಂಗ್ ಪ್ರಕ್ರಿಯೆ ನಡೆದು , ರೀಸ್ಟಾರ್ಟ್ ಆಗಲು ಬಿಡಿ. ರೀಸ್ಟಾರ್ಟ್ ಯಶಸ್ವಿಯಾದರೆ, ಆ್ಯಂಡ್ರಾಯ್ಡ್‌ ಫೋನ್ ಪರದೆಯಲ್ಲಿ ವೆಲ್‍ಕಮ್ ಸ್ಕ್ರೀನ್ ಕಾಣಸಿಗುತ್ತದೆ. ಇಲ್ಲಿ ಹೊಸ ಬಳಕೆದಾರರು ಸ್ವಂತ ಖಾತೆಗಳಿಗೆ ಸೈನ್‍ಇನ್ ಆಗಲು ಸಾಧ್ಯವಾಗುತ್ತದೆ.

ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ