AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asus ROG Phone 6 Series: ಅಮೆಜಾನ್, ಫ್ಲಿಪ್​ಕಾರ್ಟ್ ಯಾವುದರಲ್ಲೂ ಇಲ್ಲ: ಏಸಸ್ ರಾಗ್ ಫೋನ್ 6 ಸರಣಿ ಎಲ್ಲಿ ಖರೀದಿಗೆ ಸಿಗುತ್ತದೆ?

Asus ROG Phone 6 Pro: ಕಳೆದ ಜುಲೈನಲ್ಲಿ ಬಿಡುಗಡೆ ಆಗಿದ್ದ ರಾಗ್ ಫೋನ್ 6 ಸರಣಿ ಈಗ ಖರೀದಿಗೆ ಸಿಗುತ್ತಿದೆ. ಅಚ್ಚರಿಗೊಳ್ಳುವಂತಹ ಫೀಚರ್​ಗಳನ್ನು ಪರಿಚಯಿಸಿ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದ್ದ ಈ ಫೋನ್ ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿಲ್ಲ.

Asus ROG Phone 6 Series: ಅಮೆಜಾನ್, ಫ್ಲಿಪ್​ಕಾರ್ಟ್ ಯಾವುದರಲ್ಲೂ ಇಲ್ಲ: ಏಸಸ್ ರಾಗ್ ಫೋನ್ 6 ಸರಣಿ ಎಲ್ಲಿ ಖರೀದಿಗೆ ಸಿಗುತ್ತದೆ?
Asus ROG Phone 6 Series
TV9 Web
| Updated By: Vinay Bhat|

Updated on: Nov 26, 2022 | 1:58 PM

Share

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್​ಫೋನ್ ಬ್ರ್ಯಾಂಡ್ ಏಸಸ್ (Asus) ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆದ ತಕ್ಷಣ ಖರೀದಿಗೆ ಸಿಗುವುದಿಲ್ಲ. ಕೆಲ ತಿಂಗಳ ಬಳಿಕ ಸದ್ದಿಲ್ಲದೆ ಮಾರಾಟ ಶುರು ಮಾಡುತ್ತದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್​ಫೋನ್​ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಕಳೆದ ಜುಲೈನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಿದ್ದ ರಾಗ್ ಫೋನ್ 6 ಸರಣಿಯನ್ನು ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿರುವ ಏಸಸ್ ರಾಗ್ ಫೋನ್ 6 (Asus ROG Phone 6) ಮತ್ತು ರಾಗ್ ಫೋನ್ 6 ಪ್ರೊ (ROG Phone 6 Pro) ಎಂಬ ಎರಡು ಫೋನ್​ಗಳು ಸಾಕಷ್ಟು ಬಲಿಷ್ಠವಾಗಿದೆ. ಅಚ್ಚರಿಗೊಳ್ಳುವಂತಹ ಫೀಚರ್​ಗಳನ್ನು ಪರಿಚಯಿಸಿ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದ್ದ ಈ ಫೋನ್ ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಲಭ್ಯವಿಲ್ಲ.

ಬೆಲೆ- ಲಭ್ಯತೆ:

ಏಸಸ್ ರಾಗ್ ಫೋನ್ 6 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 71,999 ರೂ. ಬೆಲೆಯನ್ನು ನಿಗದಿ ಮಾಡಲಾಗಿದೆ. ಅಂತೆಯೆ ಏಸಸ್ ರಾಗ್ ಫೋನ್ 6 ಪ್ರೊ 18GB RAM + 512GB ಸ್ಟೋರೇಜ್ ರೂಪಾಂತರದ ಆಯ್ಕೆಯ ಬೆಲೆ 89,999 ರೂ. ಆಗಿದೆ. ಈ ಎರಡೂ ಫೋನ್​ಗಳು ವಿಜಯ್ ಸೇಲ್ಸ್​ನಲ್ಲಿ ಮಾತ್ರ ಖರೀದಿಗೆ ಸಿಗುತ್ತಿದೆ. ವಿಜಯ್ ಸೇಲ್ ಸ್ಟೋರ್ ಅಥವಾ ವಿಜಯ್​ಸೇಲ್ಸ್.ಕಾಮ್ ಮೂಲಕ ಈ ಫೋನುಗಳನ್ನು ನಿಮ್ಮದಾಗಿಸಬಹುದು. ನೀವು ಕ್ರೆಡಿಟ್ ಕಾರ್ಟ್, ಡೆಬಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,500 ರೂ. ಗಳ ಡಿಸ್ಕೌಂಟ್ ಸಿಗಲಿದೆ. ಈ ಫೋನುಗಳ ಫೀಚರ್ಸ್ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ
Image
ISRO: ಇಸ್ರೋದಿಂದ ಓಷನ್​ಸ್ಯಾಟ್- 3 ಸೇರಿದಂತೆ 9 ಉಪಗ್ರಹ ಉಡಾವಣೆ
Image
ರೈಲು ಟಿಕೆಟ್ ಕನ್​ಫರ್ಮ್ ಆಗಿಲ್ಲವೇ? ಈ ಆ್ಯಪ್​ನಲ್ಲಿ ಉಚಿತವಾಗಿ ಸಿಗುತ್ತೆ ಫ್ಲೈಟ್ ಟಿಕೆಟ್!

ಏಸಸ್ ರಾಗ್ ಫೋನ್ 6:

ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಫೋನ್‌ಗಳಲ್ಲಿನ ಡಿಸ್‌ಪ್ಲೇ ರಿಫ್ರೆಶ್ ರೇಟ್‌ ಅನ್ನು 60Hz, 90Hz, 120Hz, 144Hz ಮತ್ತು 165Hz ನಡುವೆ ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದು ವಿಶ್ವದ ನಂಬರ್ ಒನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದೆ. ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ.

ಏಸಸ್ ರಾಗ್ ಫೋನ್ 6 ಪ್ರೊ:

ಈ ಸ್ಮಾರ್ಟ್‌ಫೋನ್‌ ಕೂಡ 6.78 ಇಂಚಿನ ಅಮೋಲೆಡ್‌ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಗೆ ಕಾರ್ನಿಂಗ್‌ ಗ್ಲಾಸ್‌ ವಿಕ್ಷಸ್‌ ಪ್ರೊಟೆಕ್ಷನ್‌ ನೀಡಲಾಗಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ವಿಶೇಷವಾಗಿ ರೈಟ್‌ ಸ್ಪೈನ್‌ ಮೇಲೆ ಏರ್‌ಟ್ರಿಗ್ಗರ್ ಅಲ್ಟ್ರಾಸಾನಿಕ್ ಬಟನ್‌ಗಳನ್ನು ನೀಡಿದೆ. ಇದು ಗೇಮ್‌ಳಿಂದ ವಿಭಿನ್ನ ಕಂಟ್ರೋಲ್‌ಗಳನ್ನು ಮ್ಯಾಪ್ ಮಾಡಲು ನಿಮಗೆ ಅನುಮತಿಸುತ್ತದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX766 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6,000mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು (3,000 + 3,000mAh) ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.