iQOO Neo 7 SE: ಒಂದೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಐಕ್ಯೂ ನಿಯೋ 7 SE: ಬೆಲೆ ಎಷ್ಟು?

ಇದೀಗ ಈ ಫೋನಿನ ಮತ್ತೊಂದು ಸರಣಿ ಐಕ್ಯೂ ನಿಯೋ 7 ಎಸ್​ಇ (iQOO Neo 7 SE) ಫೋನನ್ನು ಅನಾವರಣ ಮಾಡಲು ಕಂಪನಿ ಸಜ್ಜಾಗಿದೆ. ಮೀಡಿಯಾ ಟೆಕ್ ಚಿಪ್​ಸೆಟ್​ನಿಂದ ಆವೃತ್ತವಾಗಿರುವ ಈ ಫೋನ್ ಡಿಸೆಂಬರ್ 2 ರಂದು ಬಿಡುಗಡೆ ಆಗಲಿದೆ.

iQOO Neo 7 SE: ಒಂದೇ ದಿನ ಬಾಕಿ: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಐಕ್ಯೂ ನಿಯೋ 7 SE: ಬೆಲೆ ಎಷ್ಟು?
iQOO Neo 7 SE
Follow us
TV9 Web
| Updated By: Vinay Bhat

Updated on:Dec 01, 2022 | 2:59 PM

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಕಳೆದ ಅಕ್ಟೋಬರ್​ನಲ್ಲಿ ಐಕ್ಯೂ ನಿಯೋ 6 ಫೋನಿನ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 7 (iQOO Neo 7) ಸ್ಮಾರ್ಟ್​ಫೋನ್ ರಿಲೀಸ್ ಮಾಡಿತ್ತು. ಇದುಕೂಡ ಬಲಿಷ್ಠವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಅತ್ಯಂತ ವೇಗದ ಚಾರ್ಜರ್​​ನಿಂದ ಕೂಡಿದೆ. ಇದೀಗ ಈ ಫೋನಿನ ಮತ್ತೊಂದು ಸರಣಿ ಐಕ್ಯೂ ನಿಯೋ 7 ಎಸ್​ಇ (iQOO Neo 7 SE) ಫೋನನ್ನು ಅನಾವರಣ ಮಾಡಲು ಕಂಪನಿ ಸಜ್ಜಾಗಿದೆ. ಮೀಡಿಯಾ ಟೆಕ್ ಚಿಪ್​ಸೆಟ್​ನಿಂದ ಆವೃತ್ತವಾಗಿರುವ ಈ ಫೋನ್ ಶುಕ್ರವಾರ ಡಿಸೆಂಬರ್ 2 ರಂದು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟಿರ ಬಹುದು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಐಕ್ಯೂ ನಿಯೋ 7 SE ಸ್ಮಾರ್ಟ್​ಫೋನ್ ಒಟ್ಟು ನಾಲ್ಕು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಯಿದೆ. 8GB RAM + 128GB ವೇರಿಯಂಟ್‌, 8GB RAM + 256GB ವೇರಿಯಂಟ್‌, 12GB RAM + 256GB, 12GB RAM +512GB ಸ್ಟೋರೇಜ್ ಆಯ್ಕೆಯೊಂದಿಗೆ ಬರಲಿದೆ. ಈ ಫೋನಿನ ಆರಂಭಿಕ ಬೆಲೆ 30,000 ರೂ. ಒಳಗಡೆ ಇರಬಹುದು.

ಈ ಸ್ಮಾರ್ಟ್‌ಫೋನ್ 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 8200+ SoC ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಪ್ರಮುಖ SoC 6nm ಪ್ರಕ್ರಿಯೆಯನ್ನು ಆಧರಿಸಿದ್ದು, 3.05GHz ನ ಗರಿಷ್ಠ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್ 13 ಆಧಾರಿತ ಮೂಲ ಓಎಸ್​ನಲ್ಲಿ ರನ್‌ ಆಗಲಿದೆ.

ಇದನ್ನೂ ಓದಿ
Image
Tech Tips: ಫೋನ್ ಪೇ, ಗೂಗಲ್ ಪೇ ಮೂಲಕ ದಿನಕ್ಕೆ ಎಷ್ಟು ಹಣ ಕಳುಹಿಸಬಹುದು?: ಇಲ್ಲಿದೆ ಮಾಹಿತಿ
Image
Top Android Apps 2022: ಈ ವರ್ಷದ ಬೆಸ್ಟ್​​ ಗೇಮ್ಸ್, ಆ್ಯಪ್ಸ್ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ
Image
WhatsApp Ban: ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್: ಯಾಕೆ?
Image
Facebook: ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ತಪ್ಪಿಯೂ ಹೀಗೆ ಮಾಡಬೇಡಿ

Twitter Character Limit: ಟ್ವಿಟರ್​ ಅಕ್ಷರ ಮಿತಿ 1,000ಕ್ಕೆ ಹೆಚ್ಚಳ; ಎಲಾನ್ ಮಸ್ಕ್ ಸುಳಿವು

ಐಕ್ಯೂ ನಿಯೋ 7 SE ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಕ್ಯಾಮೆರಾ ನೀಡಲಾಗಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಆ್ಯಂಗಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಲೆನ್ಸ್ ಇದೆ. 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನಿರೀಕ್ಷಿಸಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಫಾಸ್ಟ್ ಚಾರ್ಜರ್​ಗೆ ಹೆಸರುವಾಸಿಯಾಗಿರುವ ಐಕ್ಯೂ ಕಂಪನಿಯ ಈ ಫೋನ್​ನಲ್ಲಿ 120W ಫ್ಲ್ಯಾಶ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Thu, 1 December 22

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ