iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?

Most Expensive Phone: ಸದ್ಯ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದುಬಾರಿ  ಫೋನ್​ಗಳೆಂದರೆ ಅದು ಐಫೋನ್​ಗಳು ಬಿಟ್ಟರೆ ಗ್ಯಾಲಕ್ಸಿ S22 ಸಿರೀಸ್. ಐಫೋನ್ ಕಡಿಮೆ ದರದಿಂದ ಶುರುವಾಗಿ ಲಕ್ಷಾಂತರ ರೂಪಾಯಿವರೆಗೂ ಇರುತ್ತದೆ.

iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on: Dec 03, 2022 | 6:57 AM

ಇಂದು ಮಾರುಕಟ್ಟೆಯಲ್ಲಿ ಎರಡು ಲಕ್ಷ ರೂಪಾಯಿಯ ಆಸುಪಾಸಿನ ವರೆಗೆ ಸ್ಮಾರ್ಟ್​ಫೋನ್​ಗಳು (Smartphones) ಮಾರಾಟ ಆಗುತ್ತಿದೆ. ಹೆಚ್ಚಿನವರಿಗೆ ಗೊತ್ತಿರುವ ದುಬಾರಿ ಫೋನ್​ಗಳೆಂದರೆ ಅದು ಐಫೋನ್ (iPhone) ಸರಣಿಯ ಪ್ರೊ, ಪ್ರೊ ಮ್ಯಾಕ್ಸ್ ಮತ್ತು ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಗಳು. ಇದುಬಿಟ್ಟರೆ ಎಲ್ಲೋ 10 ಅಥವಾ 20 ಲಕ್ಷದ ಫೋನುಗಳಿವೆ ಎಂಬ ಸುದ್ದಿ ಕೇಳಿರಬಹುದು. ಸಾಮಾನ್ಯವಾಗಿ ಫೋನ್​ನಲ್ಲಿರುವ ಕ್ಯಾಮೆರಾ ಕ್ವಾಲಿಟಿ, ಫೀಚರ್ಸ್​ಗೆ ತಕ್ಕಂತೆ ಅದರ ಬೆಲೆಯನ್ನು ನಿಗದಿ ಮಾಡಿರಲಾಗುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ದುಬಾರಿ  ಫೋನ್​ಗಳೆಂದರೆ ಅದು ಐಫೋನ್​ಗಳು ಬಿಟ್ಟರೆ ಗ್ಯಾಲಕ್ಸಿ S22 ಸಿರೀಸ್ (Galaxy S22 Series). ಐಫೋನ್ ಕಡಿಮೆ ದರದಿಂದ ಶುರುವಾಗಿ ಲಕ್ಷಾಂತರ ರೂಪಾಯಿವರೆಗೂ ಇರುತ್ತದೆ. ಆದರೆ, ಈ ಐಫೋನ್ ಒಂದರ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಅಷ್ಟು ಹಣ ಕೊಡುವಷ್ಟು ಆ ಫೋನಿನಲ್ಲಿ ಏನಿದೆ ಗೊತ್ತಾ?.

ವಿಶ್ವದ ಅತ್ಯಂತ ದುಬಾರಿ ಐಫೋನ್ ಮೊಬೈಲ್ ಮಾರುಕಟ್ಟೆಯಲ್ಲಿದೆ. ಬ್ಲ್ಯಾಕ್ ಡೈಮಂಡ್ ಬಣ್ಣದಲ್ಲಿ 97 ಕೋಟಿ ರೂ. ಬೆಲೆಯ ದುಬಾರಿ ಐಫೋನ್ ಇದಾಗಿದೆ. ವಿಶ್ವದ ಕೆಲವು ದುಬಾರಿ ಮತ್ತು ಐಷಾರಾಮಿ ವಸ್ತುಗಳ ಹೆಸರಾಂತ ಸೃಷ್ಟಿಕರ್ತ ಸ್ಟುವರ್ಟ್ ಹ್ಯೂಸ್ ಅವರು ಈ ವಿಶ್ವದ ದುಬಾರಿ ಐಫೋನ್ ಅನ್ನು ತಯಾರಿಸಿದ್ದಾರೆ. ಐಷಾರಾಮಿ ವೆಬ್​ಸೈಟ್ alux.com ಇದನ್ನು ವಿಶ್ವದ ಅತ್ಯಂತ ದುಬಾರಿ ಐಫೋನ್ ಎಂದು ಹೇಳಿದೆ.

ಸಾಮಾನ್ಯ ಐಫೋನ್ ಆಗಿದ್ದ ಐಫೋನ್ 5 ಅನ್ನು ಚಿನ್ನ ಮತ್ತು ಡೈಮಂಡ್‌ನಿಂದ ಮಾಡಲಾಗಿದ್ದು, ಈ ಐಫೋನಿನ ಪೂರ್ಣ ದೇಹವನ್ನು ಅಲಂಕರಿಸಲಾಗಿವೆ. ಇನ್ನು ಹಿಂಬದಿಯಲ್ಲಿರುವ ಆ್ಯಪಲ್ ಲೋಗೋವನ್ನೂ ವಜ್ರದಿಂದಲೇ ವಿನ್ಯಾಸ ಮಾಡಲಾಗಿರುವುದು ಈ ದುಬಾರಿ ಐಫೋನಿನ ವಿಶೇಷಗಳಲ್ಲಿ ಒಂದು.

ಇದನ್ನೂ ಓದಿ
Image
Infinix Zero 5G 2023: 50MP ಕ್ಯಾಮೆರಾ, 5000mAh ಬ್ಯಾಟರಿ: ಇನ್ಫಿನಿಕ್ಸ್​ನಿಂದ ಬಜೆಟ್ ಬೆಲೆಗೆ ಹೊಸ 5G ಫೋನ್ ರಿಲೀಸ್
Image
EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?
Image
Tech Tips: 5G ಬಳಸುವಾಗ ಡೇಟಾ ಸೇವ್ ಮಾಡುವುದು ಹೇಗೆ?; ಇಲ್ಲಿದೆ ನೋಡಿ ಟ್ರಿಕ್ಸ್
Image
Moto X40: ರಿಲೀಸ್​ಗೂ ಮುನ್ನ ಭರ್ಜರಿ ಸದ್ದು ಮಾಡುತ್ತಿದೆ ಮೋಟೋ X40 ಸ್ಮಾರ್ಟ್‌ಫೋನ್‌: ಏನಿದರ ವಿಶೇಷತೆ?

Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ

4 ಇಂಚಿನ ಸ್ಕ್ರೀನ್ ಹೊಂದಿರುವ ಈ ಫೋನ್, 8 ಮೆಗಾ ಪಿಕ್ಸೆಲ್ನ ರೆಕಾರ್ಡಿಂಗ್ ಕ್ಯಾಮೆರಾ ಕೂಡಾ ಇದೆ. ಈ ದುಬಾರಿ ಐಫೋನ್ 6 ಜಿಬಿ, 32 ಜಿಬಿ ಹಾಗೂ 64 ಜಿಬಿಯ ಮೂರು ವೇರಿಯೆಂಟ್ಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಇದು ಬಿಟ್ಟರೆ ವೆರ್ಟು ಸಿಗ್ನೇಚರ್ ಡೈಮಂಡ್ ಎಂಬ ಫೋನ್ ವಿಶ್ವದ ಅತಿ ದುಬಾರಿ ಮೊಬೈಲ್ ಆಗಿದೆ. ವೆರ್ಟು ಎಂಬ ಕಂಪನಿಯು ಬ್ರಿಟನ್‌ ಮೂಲದ ಹ್ಯಾಂಡ್‌ ಮೇಡ್ ರೀಟೆಲ್‌ ಮೊಬೈಲ್ ತಯಾರಿಕಾ ಕಂಪನಿಯಾಗಿದ್ದು, 2018ರಲ್ಲಿ ನೋಕಿಯಾ ಫಿನಿಶ್ ಮೊಬೈಲ್‌ ಫೋನ್‌ ತಯಾರಕರಿಂದ ಸ್ಥಾಪಿತವಾಗಿದೆ. ಒಟ್ಟು ಎಂಟು ಬಾಹ್ಯ ವೇರಿಯಂಟ್‌ಗಳನ್ನು ಹೊಂದಿದ್ದು, ಅವುಗಳೆಂದರೇ, ಜೆಟ್ ಕ್ಯಾಲ್, ಗಾರ್ನೆಟ್ ಕ್ಯಾಲ್, ಗ್ರೇಪ್ ಲಿಜಾರ್ಡ್, ಶುದ್ಧ ಜೆಟ್ ಲಿಜಾರ್ಡ್, ಜೆಟ್ ಅಲಿಗೇಟರ್, ಶುದ್ಧ ನೇವಿ ಅಲಿಗೇಟರ್, ಕ್ಲಾಸ್ ಡಿ ಪ್ಯಾರಿಸ್ ಅಲಿಗೇಟರ್, ಮತ್ತು ಶುದ್ಧ ಜೆಟ್ ರೆಡ್ ಗೋಲ್ಡ್ ಆಗಿವೆ. ಇದರ ಬೆಲೆ 5,865,067.72 ರೂಪಾಯಿಗಳಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್