AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ನೀವು ಅದೃಷ್ಟಶಾಲಿಯಾಗಿದ್ದರೆ ವಾಟ್ಸ್​ಆ್ಯಪ್​ನ ಈ ಫೀಚರ್ ಈಗ ನಿಮಗೆ ಸಿಗುತ್ತದೆ

Companion Mode: ಅನೇಕ ಸಮಯದಿಂದ ವಾಟ್ಸ್​ಆ್ಯಪ್ ಬಳಕೆದಾರರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಕಂಪ್ಯಾನಿಯನ್‌ ಮೋಡ್‌ ಆಯ್ಕೆ ಇದೀಗ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಾಗುತ್ತಿದೆ.

WhatsApp: ನೀವು ಅದೃಷ್ಟಶಾಲಿಯಾಗಿದ್ದರೆ ವಾಟ್ಸ್​ಆ್ಯಪ್​ನ ಈ ಫೀಚರ್ ಈಗ ನಿಮಗೆ ಸಿಗುತ್ತದೆ
WhatsApp
TV9 Web
| Edited By: |

Updated on:Dec 03, 2022 | 3:14 PM

Share

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಈ ವರ್ಷ ಪರಿಚಯಿಸಿರುವ ಒಂದೊಂದು ಫೀಚರ್ ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅತಿ ಹೆಚ್ಚು ನೂತನ ಫೀಚರ್​ಗಳನ್ನು 2022 ರಲ್ಲಿ ಬಿಡುಗಡೆ ಮಾಡಿರುವ ವಾಟ್ಸ್​ಆ್ಯಪ್​ನಲ್ಲಿ ಇನ್ನೂ 10-15 ಅಪ್ಡೇಟ್​ಗಳು ಪರೀಕ್ಷಾ ಹಂತದಲ್ಲಿದೆ. ತನ್ನ ಅಚ್ಚರಿಯ ಫೀಚರ್ (Features) ಹಾಗೂ ಯೂಸರ್ ಫ್ರೆಂಡ್ಲಿ ಮೂಲಕ ಮನಗೆದ್ದಿರುವ ವಾಟ್ಸ್​​ಆ್ಯಪ್ (WhatsApp) ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾರಕ್ಕೊಂದು ಹೊಸ ಅಪ್ಡೇಟ್​ಗಳನ್ನು ಘೋಷಿಸುವ ವಾಟ್ಸ್​ಆ್ಯಪ್ ಇದೀಗ ತನ್ನ ಬಹುನಿರೀಕ್ಷಿತ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡಿದೆ.

ಸಾಕಷ್ಟು ಜನರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಕಂಪ್ಯಾನಿಯನ್‌ ಮೋಡ್‌ (Companion Mode) ಆಯ್ಕೆ ಇದೀಗ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಾಗುತ್ತಿದೆ. ವಾಟ್ಸ್​ಆ್ಯಪ್​ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಅಥವಾ ಹೆಚ್ಚಿನ ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್​​ ಬಳಸಬಹುದು. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು.

Tech Tips: 5G ಬಳಸುವಾಗ ಡೇಟಾ ಸೇವ್ ಮಾಡುವುದು ಹೇಗೆ?; ಇಲ್ಲಿದೆ ನೋಡಿ ಟ್ರಿಕ್ಸ್

ಇದನ್ನೂ ಓದಿ
Image
iPhone 13: ಕೇವಲ 42,200 ರೂ. ಗೆ ಐಫೋನ್ 13 ಖರೀದಿಸುವ ಅವಕಾಶ: ಈ ಆಫರ್ ಮಿಸ್ ಮಾಡ್ಬೇಡಿ
Image
iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?
Image
Infinix Zero 5G 2023: 50MP ಕ್ಯಾಮೆರಾ, 5000mAh ಬ್ಯಾಟರಿ: ಇನ್ಫಿನಿಕ್ಸ್​ನಿಂದ ಬಜೆಟ್ ಬೆಲೆಗೆ ಹೊಸ 5G ಫೋನ್ ರಿಲೀಸ್
Image
EXPLAINED: ಕಂಪ್ಯೂಟರ್​ಗೆ ವೈರಸ್ ಹೇಗೆ ಅಟ್ಯಾಕ್ ಆಗುತ್ತದೆ?: ಇದರಿಂದ ಎಚ್ಚರ ವಹಿಸುವುದು ಹೇಗೆ?

ವರದಿಯ ಪ್ರಕಾರ, ಬೇಟಾ ಬಳಕೆದಾರರು ಟ್ಯಾಬ್ಲೆಟ್ ಮೂಲಕ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಅನ್ನು ಎರಡು ಡಿವೈಸ್​ನಲ್ಲಿ ಉಪಯೋಗಿಸಲು ಆಗುತ್ತಿದೆಯಂತೆ. ಇದು ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದ್ದು ನೋಟಿಫಿಕೇಶನ್ ಮೂಲಕ ಮಾಹಿತಿ ನೀಡುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಸಿಗಲಿದೆ ಎಂದು ಹೇಳಲಾಗಿದೆ.

ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ. ಆಯ್ದ ಟ್ಯಾಬ್ಲೆಟ್ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಈ ಆಯ್ಕೆಯನ್ನು ಆನಂದಿಸಬಹುದು. ಇದು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಮೂಲಕ ಕಾರ್ಯನಿರ್ವಹಿಸಲಿದೆ.

ನಿಮಗೆ ನೀವೇ ಮೆಸೇಜ್ ಮಾಡಿ

ಕಂಪ್ಯಾನಿಯನ್‌ ಮೋಡ್‌ ಆಯ್ಕೆ ಜೊತೆಗೆ ವಾಟ್ಸ್​ಆ್ಯಪ್​ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಆಯ್ದ ಬಳಕೆದಾರರಿಗೆ ಕಲ್ಪಿಸಿದೆ. ವಾಟ್ಸ್​ಆ್ಯಪ್​ನ ಈ ಹೊಸ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್​​ನಲ್ಲಿ ಕಾಣಲಿದೆ. ವಾಟ್ಸ್​ಆ್ಯಪ್ ತೆರೆದು ನ್ಯೂ ಚಾಟ್​ನಲ್ಲಿ ಕಾಂಟೆಕ್ಟ್ ಲಿಸ್ಟ್​​ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್​ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್​ಗಳನ್ನು ಕಳುಹಿಸಬಹುದು. ಈ ಮೂಲಕ ಅಗತ್ಯ ದಾಖಲೆಗಳನ್ನು ಇಲ್ಲಿ ಸೇವ್ ಮಾಡಿಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Sat, 3 December 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ