Smartphones: ಡಿಸೆಂಬರ್ನಲ್ಲಿ ಬಿಡುಗಡೆ ಆಗಲಿರುವ ಟಾಪ್ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ ನೋಡಿ
ನೀವು ಈ ಹಿಂದೆ ಬಿಡುಗಡೆ ಆದ ಫೋನನ್ನು ಖರೀದಿಸುವ ಬದಲು ಸ್ವಲ್ಪ ದಿನ ಕಾದು ಈ ಅದ್ಭುತ ಫೀಚರ್ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಹಾಗಾದರೆ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುದು?
ಈ ತಿಂಗಳು ಸ್ಮಾರ್ಟ್ಫೋನ್ (Smartphone) ಪ್ರಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಈ ಡಿಸೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಹೈ-ರೇಂಜ್ ಮಾದರಿಯಿಂದ ಹಿಡಿದು ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗಲಿದೆ. ಹೀಗಾಗಿ ನೀವು ಹೊಸ ಮೊಬೈಲ್ ಅನ್ನು ಖರೀದಿಸುವ ಪ್ಲಾನ್ನಲ್ಲಿದ್ದರೆ ಕೊಂಚ ದಿನ ಕಾಯಿರಿ. ಒನ್ಪ್ಲಸ್, ರಿಯಲ್ ಮಿ, ಸ್ಯಾಮ್ಸಂಗ್ (Samsung), ಮೋಟೋರೊಲಾ, ಐಕ್ಯೂ, ರೆಡ್ಮಿ (Redmi) ಬ್ರ್ಯಾಂಡ್ನ ಫೋನ್ಗಳು ಈ ತಿಂಗಳು ಅನಾವರಣಗೊಳ್ಳಲಿದೆ. ನೀವು ಈ ಹಿಂದೆ ಬಿಡುಗಡೆ ಆದ ಫೋನನ್ನು ಖರೀದಿಸುವ ಬದಲು ಸ್ವಲ್ಪ ದಿನ ಕಾದು ಈ ಅದ್ಭುತ ಫೀಚರ್ಗಳುಳ್ಳ ಹೊಸ ಮೊಬೈಲ್ ಆಯ್ಕೆ ಮಾಡಬಹುದು. ಹಾಗಾದರೆ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್‌ಫೋನ್‌ಗಳು ಯಾವುದು?, ಅದರ ವಿಶೇಷತೆ ಏನು? ಎಂಬುದನ್ನು ನೋಡೋಣ.
ಡಿಸೆಂಬರ್ 8 ರಂದು ಭಾರತೀಯ ಮಾರುಕಟ್ಟೆಗೆ ರಿಯಲ್ ಮಿ 10 ಪ್ರೊ ಸರಣಿಯ ಸ್ಮಾರ್ಟ್‌ಫೋನ್‌ಗಳು ಕಾಲಿಡಲಿದೆ. ಇದರಲ್ಲಿ ರಿಯಲ್ ಮಿ 10 ಪ್ರೊ ಮತ್ತು ರಿಯಲ್ ಮಿ 10 ಪ್ರೊ + ಎಂಬ ಎರಡು ಫೋನುಗಳಿವೆ. ರಿಯಲ್ ಮಿ 10 ಪ್ರೊ + ಬೆಲೆ 25,000 ರೂಪಾಯಿಗಳಿಗಿಂತ ಕಡಿಮೆ ಇರಬಹುದು ಎಂದು ಹೇಳಲಾಗಿದೆ. ಇದು ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈಗಾಗಲೇ ರಿಯಲ್ ಮಿ 10 ಪ್ರೊ ಮತ್ತು ರಿಯಲ್ ಮಿ 10 ಪ್ರೊ + ಸ್ಮಾರ್ಟ್‌ಫೋನ್‌ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಆಂಡ್ರಾಯ್ಡ್ನ ಇತ್ತೀಚಿನ ಆವೃತ್ತಿ 13 ಅನ್ನು ಹೊಂದಿರುವುದು ವಿಶೇಷ.
iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?
ರೆಡ್ಮಿ ನೋಟ್ 12 ಸರಣಿ ಕೂಡ ಇದೇ ತಿಂಗಳಲ್ಲಿ ಭಾರತದಲ್ಲಿ ಅನಾವರಣಗೊಳ್ಳಿಲಿದೆ. ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ ಮತ್ತು ರೆಡ್ಮಿ ನೋಟ್ 12 ಪ್ರೊ+ ಹೀಗೆ ಈ ಸರಣಿಯಲ್ಲಿ ಮೂರು ಫೋನ್‌ಗಳಿವೆ. ಈಗಾಗಲೇ ಶವೋಮಿ ಚೀನಾದಲ್ಲಿ ಈ ಫೋನುಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು 50MP ಕ್ಯಾಮೆರಾವನ್ನು ಹೊಂದಿದ್ದು, MediaTek Dimensity 1080 CPU ನಿಂದ ಚಾಲಿತವಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M04 ಮುಂದಿನ ವಾರ ಭಾರತಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. IANS ವರದಿಯ ಪ್ರಕಾರ ಗ್ಯಾಲಕ್ಸಿ M04 ಬಲಿಷ್ಠವಾದ RAM ಹಾಗೂ ಫೀಚರ್ಸ್ಗಳನ್ನು ಹೊಂದಿದೆಯಂತೆ. ಈ ಫೋನ್‌ನ ಬೆಲೆ 10,000 ರೂ. ಗಿಂತ ಕಡಿಮೆಯಿದೆ ಎಂದು ಹೇಳಲಾಗಿದೆ. ಮೀಡಿಯಾಟೆಕ್ ಪ್ರೊಸೆಸರ್, 5000mAh ಬ್ಯಾಟರಿ ಅಳವಡಿಸಲಾಗಿದೆಯಂತೆ.
ಐಕ್ಯೂ 11 ಸರಣಿಯು ಡಿಸೆಂಬರ್ 8 ರಂದು ಬಿಡುಗಡೆ ಆಗಲಿದೆ ಎಂದು ಕಂಪನಿ ತಿಳಿಸಿದೆ. ಈ ಸರಣಿಯು ಎರಡು ಫೋನ್‌ಗಳನ್ನು ಒಳಗೊಂಡಿದ್ದು ಅದು ಐಕ್ಯೂ 11 ಮತ್ತು ಐಕ್ಯೂ 11 ಪ್ರೊ ಆಗಿದೆ. ಐಕ್ಯೂ 11 ಅನ್ನು ಲೆಜೆಂಡ್ ಆವೃತ್ತಿ ಮತ್ತು ಆಲ್ಫಾ ಎಂಬ ಎರಡು ಬಣ್ಣಗಳಲ್ಲಿ ಬರಲಿದೆ. ಪ್ರೋ ಮಾದರಿಯು ಆಲ್ಫಾ, ಲೆಜೆಂಡ್ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 2 ಪ್ರೊಸೆಸರ್‌ನಿಂದ ಚಾಲಿತವಾಗಲಿವೆ. ಅಚ್ಚರಿ ಎಂಬಂತೆ ಐಕ್ಯೂ 11 ಪ್ರೊ 200W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 5,000mAh ಬ್ಯಾಟರಿ ಇರುವ ಸಾಧ್ಯತೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Sun, 4 December 22