Galaxy S20 FE: ಹಿಂದೆಂದೂ ಕಾಣದ ಆಫರ್: 74,990 ರೂ. ವಿನ ಈ ಫೋನ್ ಬೆಲೆ ಈಗ ಕೇವಲ 19,690 ರೂ. ಮಾತ್ರ
Samsung Galaxy S20 FE Price Cut: ಅಮೆಜಾನ್ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್ ಮೇಲೆ ಇದೇ ಮೊದಲ ಬಾರಿಗೆ ಎಂಬಂತೆ ಬರೋಬ್ಬರಿ ಶೇ. 56 ರಷ್ಟು ರಿಯಾಯಿತಿ ನೀಡಲಾಗಿದೆ. ಹೀಗಾಗಿ ಈ ಫೋನ್ 32,990 ರೂ. ಗೆ ಸೇಲ್ ಕಾಣುತ್ತಿದೆ.
ದೇಶದಲ್ಲಿ ಹಳೇಯ ಸ್ಮಾರ್ಟ್ಫೋನ್ಗಳ (Smartphone) ಬೆಲೆ ಕಡಿತಗೊಳ್ಳುವ ಕಾರ್ಯ ಮುಂದುವರೆದಿದೆ. ಪ್ರಸಿದ್ಧ ಸ್ಯಾಮ್‌ಸಂಗ್ ಕಂಪನಿ ಒಂದರ ಹಿಂದೆ ಒಂದರಂತೆ ಕಳೆದ ವರ್ಷ ಬಿಡುಗಡೆ ಮಾಡಿದ ತನ್ನ ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತ ಮಾಡಿ ಮಾರಾಟ ಮಾಡುತ್ತಿದೆ. ಸದ್ಯ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಯಾವುದೇ ಮೇಳಗಳು ನಡೆಯುತ್ತಿಲ್ಲ. ಹೀಗಿದ್ದರೂ ಸ್ಯಾಮ್‌ಸಂಗ್ ಕಂಪನಿ ಅಮೆಜಾನ್ನಲ್ಲಿ ತನ್ನ ಗ್ಯಾಲಕ್ಸಿ ಎಸ್20 ಎಫ್ಇ (Samsung Galaxy S20 FE) ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಬೆಲೆ ಇಳಿಕೆ ಮಾಡಿದ್ದು, ಗ್ರಾಹಕರ ಹುಬ್ಬೇರುವಂತೆ ಮಾಡಿದೆ. ಹಾಗಾದರೆ 74,990 ರೂ. ಮೂಲಬೆಲೆ ಹೊಂದಿರುವ ಈ ಫೋನನ್ನು ನೀವು ಕೇವಲ 19,690 ರೂ. ಗೆ ಹೇಗೆ ಖರೀದಿಸಬಹುದು?, ಇದರ ವಿಶೇಷತೆ ಏನೇನು? ಎಂಬುದನ್ನು ನೋಡೋಣ.
ಅಮೆಜಾನ್ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್ ಮೇಲೆ ಇದೇ ಮೊದಲ ಬಾರಿಗೆ ಎಂಬಂತೆ ಬರೋಬ್ಬರಿ ಶೇ. 56 ರಷ್ಟು ರಿಯಾಯಿತಿ ನೀಡಲಾಗಿದೆ. ಹೀಗಾಗಿ ಈ ಫೋನ್ 32,990 ರೂ. ಗೆ ಸೇಲ್ ಕಾಣುತ್ತಿದೆ. ಇದರ ಜೊತೆಗೆ ಭರ್ಜರಿ ಎಕ್ಸ್ಚೇಂಜ್ ಆಫರ್ ಕೂಡ ಘೋಷಿಸಲಾಗಿದ್ದು, ನಿಮ್ಮ ಹಳೆಯ ಮೊಬೈಲ್ ಅನ್ನು 13,300 ರೂ. ವರೆಗೆ ಮಾರಾಟ ಮಾಡಬಹುದು. ಹೀಗಾದಾಗ ಗ್ಯಾಲಕ್ಸಿ S20 FE ಸ್ಮಾರ್ಟ್ಫೋನನ್ನು ನೀವು ಕೇವಲ 19,690 ರೂ. ಗೆ ಖರೀದಿ ಮಾಡಬಹುದು. ಈ ಫೋನ್ ಕ್ಲೌಡ್ ರೆಡ್, ಕ್ಲೌಡ್ ಲ್ಯಾವೆಂಡರ್, ಕ್ಲೌಡ್ ಮಿಂಟ್, ಕ್ಲೌಡ್ ನೇವಿ ಮತ್ತು ಕ್ಲೌಡ್ ವೈಟ್ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್ 1,080*2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಫುಲ್-ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಎಕ್ಸಿನೋಸ್ 990 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್‌ವೈಡ್-ಆಂಗಲ್ ಲೆನ್ಸ್ ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಒಐಎಸ್) ಮತ್ತು ಡ್ಯುಯಲ್ ಫೇಸ್ ಡಿಟೆಕ್ಷನ್ ಆಟೋಫೋಕಸ್ ಅನ್ನು ಬೆಂಬಲಿಸುತ್ತದೆ.
ಈ ಫೋನಿನಲ್ಲಿ ಎರಡನೇ ಕ್ಯಾಮೆರಾ 123 ಡಿಗ್ರಿ ಫೀಲ್ಡ್ ವ್ಯೂ ಜೊತೆಗೆ 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಶೂಟರ್ ಅನ್ನು ನೀಡಲಾಗಿದೆ. ಮೂರನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇನ್ನೂ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಇದರಲ್ಲಿ ವಾಯರ್‌ಲೆಸ್ ಚಾರ್ಜಿಂಗ್-ಬೆಂಬಲಿತ ಡಿವೈಸ್‌ಗಳೊಂದಿಗೆ ಪವರ್ ಹಂಚಿಕೊಳ್ಳಲು ಸ್ಯಾಮ್‌ಸಂಗ್‌ನ ವಾಯರ್‌ಲೆಸ್ ಪವರ್‌ಶೇರ್ ಸಹ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE ವೈ-ಫೈ, ಬ್ಲೂಟೂತ್ V5.0, ಜಿಪಿಎಸ್, NFC, ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.
Published On - 1:44 pm, Fri, 25 November 22