Oppo Reno 9 Series: ಮಾರುಕಟ್ಟೆಗೆ ಬಂದೇ ಬಿಡ್ತು ಬಹುನಿರೀಕ್ಷಿತ ಒಪ್ಪೋ ರೆನೋ 9 ಸರಣಿ: ಏನು ಫೀಚರ್ಸ್, ಬೆಲೆ ಎಷ್ಟು?
ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳು ರಿಲೀಸ್ ಆಗಿದೆ. ಒಪ್ಪೋ ರೆನೋ 9, ರೆನೋ 8 ಪ್ರೊ ಮತ್ತು ರೆನೋ 9 ಪ್ರೊ+ (Oppo Reno 9, Oppo Reno 9 Pro, Oppo Reno 9 Pro+) ಆಗಿದೆ. ಇದರಲ್ಲಿ ಕೂಡ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ.
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಒಪ್ಪೋ ಕಂಪನಿಯ ರೆನೋ ಸರಣಿಯ ಫೋನ್ಗಳಿಗೆ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಇದೆ. ತನ್ನ ಕ್ಯಾಮೆರಾ ಮೂಲಕವೇ ಜನರಿಂದ ಮನ್ನಣೆ ಪಡೆದುಕೊಂಡಿರುವ ಒಪ್ಪೋ ಇದೀಗ ರೆನೋ ಅಡಿಯಲ್ಲಿ ತನ್ನ ಹೊಸ ಒಪ್ಪೋ ರೆನೋ 9 ಸರಣಿಯ ಸ್ಮಾರ್ಟ್ಫೋನ್ಗಳನ್ನು ಅನಾವರಣ ಮಾಡಿದೆ. ಇದರಲ್ಲಿ ಕೂಡ ಆಕರ್ಷಕ ಕ್ಯಾಮೆರಾ ನೀಡಲಾಗಿದ್ದು ಟೆಕ್ ಪ್ರಿಯರಂತು ಫುಲ್ ಫಿದಾ ಆಗಿದ್ದಾರೆ. ಈ ಸರಣಿ ಅಡಿಯಲ್ಲಿ ಒಟ್ಟು ಮೂರು ಫೋನ್ಗಳು ರಿಲೀಸ್ ಆಗಿದೆ. ಒಪ್ಪೋ ರೆನೋ 9, ರೆನೋ 8 ಪ್ರೊ ಮತ್ತು ರೆನೋ 9 ಪ್ರೊ+ (Oppo Reno 9, Oppo Reno 9 Pro, Oppo Reno 9 Pro+) ಆಗಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆಗೊಂಡಿರುವ ಈ ಫೋನ್ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆಗಳಿವೆ? ಎಂಬುದನ್ನು ನೋಡೋಣ.
ಒಪ್ಪೋ ರೆನೋ 9:
ಇನ್ನು ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 13 ಕಲರ್ ಒಎಸ್ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮತ್ತು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಸೂಪರ್ವೂಕ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ. ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 8GB RAM + 256GB ಸ್ಟೋರೇಜ್ ಆಯ್ಕೆಗೆ CNY 2,999 (ಭಾರತದಲ್ಲಿ ಅಂದಾಜು 34,000ರೂ.).
ಒಪ್ಪೋ ರೆನೋ 9 ಪ್ರೊ:
ಇನ್ನು ಒಪ್ಪೋ ರೆನೋ 9 ಪ್ರೊ ಸ್ಮಾರ್ಟ್‌ಫೋನ್ ಕೂಡ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 8100-Max SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 13 ಕಲರ್ ಒಎಸ್ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಸೂಪರ್ವೂಕ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ. ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 16GB RAM + 256GB ಸ್ಟೋರೇಜ್ ಆಯ್ಕೆಗೆ CNY 3,499 (ಭಾರತದಲ್ಲಿ ಅಂದಾಜು 40,000ರೂ.).
ಒಪ್ಪೋ ರೆನೋ 9 ಪ್ರೊ+:
ಒಪ್ಪೋ ರೆನೋ 9 ಪ್ರೊ+ ಸ್ಮಾರ್ಟ್‌ಫೋನ್ ಕೂಡ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080*2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಸ್ನಾಪ್ಡ್ರಾಗನ್ 8+ Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 13 ಕಲರ್ ಒಎಸ್ 13.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಡ್ಯುಯೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಫಿಕ್ಸೆಲ್ನಿಂದ ಕೂಡಿದೆ. 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 4,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್ವೂಕ್ ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS, NFC, ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇದರಲ್ಲಿ ಕೂಡ ಫಿಂಗರ್ಪ್ರಿಂಟ್ ಅನ್ನು ಡಿಸ್‌ಪ್ಲೇಯಲ್ಲೇ ನೀಡಲಾಗಿದೆ. ಒಪ್ಪೋ ರೆನೋ 9 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ 16GB RAM + 256GB ಸ್ಟೋರೇಜ್ ಆಯ್ಕೆಗೆ CNY 3,999 (ಭಾರತದಲ್ಲಿ ಅಂದಾಜು 45,700ರೂ.).