AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ

ನಿಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಬಿಲ್‌ಗಳನ್ನು ಪಾವತಿಸಲು, ಡಿಟಿಎಚ್ ಕನೆಕ್ಟಿವಿಟಿ ಮತ್ತು ಫುಡ್‌ ಆರ್ಡರ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಫೋನ್‌ ಪೇ ನಿಮಗೆ ಅನುಮತಿಸುತ್ತದೆ. ಇನ್ನು ಫೋನ್‌ಪೇಯನ್ನು ಹೊಂದಿರುವ ಬಳಕೆದಾರರು ತಮ್ಮದೇ ಆದ ಪಾಸ್‌ವರ್ಡ್‌ ಅನ್ನು ಕ್ರಿಯೆಟ್‌ ಮಾಡಬೇಕಿರುತ್ತದೆ. ಆದರೆ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.

Tech Tips: ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
ಫೋನ್ ಪೇ
TV9 Web
| Edited By: |

Updated on:Apr 01, 2026 | 4:53 PM

Share

ಇಂದು ಭಾರತದಲ್ಲಿ ಡಿಜಿಟಲ್‌ ಪೇಮೆಂಟ್‌ (Digital Payment) ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅದರಲ್ಲೂ ಕೊರೊನಾ ವೈರಸ್ ಬಂದ ಮೇಲೆ ದೇಶದಲ್ಲಿ ಹೆಚ್ಚಿನ ವ್ಯವಹಾರಗಳು ಆನ್​ಲೈನ್ ಮೂಲಕವೇ ನಡೆಯುತ್ತಿದೆ. ಹಣ ಪಾವತಿಗಳಿಗಾಗಿ ಜನರು ಡಿಜಿಟಲ್ ವ್ಯವಸ್ಥೆಯನ್ನೇ ಅವಲಂಬಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮೊಬೈಲ್‌ ವ್ಯಾಲೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಭಾರತದಲ್ಲಿ ಯುಪಿಐ (UPI) ಪಾವತಿ ಸೇವೆಯನ್ನು ಫೋನ್ ಪೇ, ಗೂಗಲ್‌ ಪೇ, ಪೇಟಿಎಂ ನಂತಹ ಆ್ಯಪ್‌ಗಳು ನೀಡುತ್ತಿವೆ. ಇದರಲ್ಲಿ ಫೋನ್‌ ಪೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಹಾಗಾದರೆ ಈ ಫೋನ್‌ ಪೇಯಲ್ಲಿ (PhonePe) ಯುಪಿಐ ಪಿನ್‌ ಅಥವಾ ಪಾಸ್​ವರ್ಡ್ ಬದಲಾಯಿಸುವುದು ಹೇಗೆ? ವಹಿವಾಟು ಮಿತಿ ಹೆಚ್ಚಿಸುವುದು ಹೇಗೆ? ಎಂಬುದನ್ನು ನೋಡೋಣ.

ನಿಮ್ಮ ಫೋನ್‌ಗಳನ್ನು ರೀಚಾರ್ಜ್ ಮಾಡಲು, ಬಿಲ್‌ಗಳನ್ನು ಪಾವತಿಸಲು, ಡಿಟಿಎಚ್ ಕನೆಕ್ಟಿವಿಟಿ ಮತ್ತು ಫುಡ್‌ ಆರ್ಡರ್‌ ಸೇರಿದಂತೆ ಇತರೆ ವಿಷಯಗಳಲ್ಲಿ ಫೋನ್‌ ಪೇ ನಿಮಗೆ ಅನುಮತಿಸುತ್ತದೆ. ಇನ್ನು ಫೋನ್‌ಪೇಯನ್ನು ಹೊಂದಿರುವ ಬಳಕೆದಾರರು ತಮ್ಮದೇ ಆದ ಪಾಸ್‌ವರ್ಡ್‌ ಅನ್ನು ಕ್ರಿಯೆಟ್‌ ಮಾಡಬೇಕಿರುತ್ತದೆ. ಆದರೆ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ವೇಳೆ ನಿಮ್ಮ ಪಾಸ್‌ವರ್ಡ್‌ ಮರೆತು ಹೋಗಿದ್ದರೆ ನೀವು ನಿಮ್ಮ ಯುಪಿಐ ಪಿನ್ ಅನ್ನು ಬದಲಾಯಿಸಬೇಕಾಗುತ್ತದೆ.

ನಿಮ್ಮ ಪಿನ್ ಬದಲಾಯಿಸುವುದು ಹೇಗೆ?:

ಫೋನ್‌ ಪೇಯಲ್ಲಿ ಯುಪಿಐ ಪಿನ್ ಅನ್ನು ಬದಲಾಯಿಸಲು ಮೊದಲು ನೀವು ಪೋನ್‌ ಪೇ ಡಿಸ್‌ಪ್ಲೇ ಮೇಲೆ ಬಲ ಮೂಲೆಯಲ್ಲಿ ಇರುವ ಮೆನುವನ್ನು ತೆರೆಯಬೇಕು. ನಂತರ ನೀವು ಬ್ಯಾಂಕ್‌ ಅಕೌಂಟ್‌ ವಿಭಾಗದ ಮೇಲೆ ಕ್ಲಿಕ್ ಮಾಡಬೇಕು, ಈಗ ವ್ಯಾಲೆಟ್‌ ಜೊತೆಗೆ ಕನೆಕ್ಟ್‌ ಆಗಿರುವ ಬ್ಯಾಂಕ್‌ ಖಾತೆಗಳನ್ನು ಕಾಣಬಹುದು. ನಂತರ, ನೀವು ಪಿನ್ ಬದಲಾಯಿಸಲು ಬಯಸುವ ಬ್ಯಾಂಕ್ ಖಾತೆಯನ್ನು ನೀವು ಆರಿಸಬೇಕಾಗುತ್ತದೆ. ಈ ಸಂದರ್ಭ ಪಾಸ್‌ವರ್ಡ್ ಬದಲಾಯಿಸಲು ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ, ಅಲ್ಲದೆ ಅಲ್ಲಿ ರಿಸೆಟ್‌ ಬಟನ್‌ ಕಂಡುಬರಲಿದೆ.

ನೀವು ರಿಸೆಟ್‌ ಬಟನ್‌ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳ ಕೊನೆಯ ಅಂಕಿಗಳನ್ನು ನಮೂದಿಸಬೇಕು. ಜೊತೆಗೆ ವ್ಯಾಲಿಡಿಟಿ ಡೇಟ್ ಅನ್ನು ಸಹ ನಮೂದಿಸಬೇಕು. ಇದೀಗ ನಿಮ್ಮ ಬ್ಯಾಂಕಿನಿಂದ ನಿಮ್ಮ ಫೋನ್‌ ನಂಬರ್‌ಗೆ OTP ನಂಬರ್‌ ಬರಲಿದೆ ನಂತರ ನೀವು ಹೊಸ ಪಿನ್ ಜೊತೆಗೆ ಒಟಿಪಿಯನ್ನು ನಮೂದಿಸಬೇಕು. ಹೀಗೆ ಹಂತಹಂತವಾಗಿ ಮಾಹಿತಿಯನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ಪೇ ಯುಪಿಐ ಪಿನ್‌ ಅನ್ನು ನೀವು ಯಶಸ್ವಿಯಾಗಿ ಬದಲಾಯಿಸಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:43 am, Mon, 5 December 22

Follow Us
TV9 Web
TV9 Web

TV9 Kannada

Read More
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?