AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Update: ಬಳಕೆದಾರರು ಶಾಕ್: ಸದ್ದಿಲ್ಲದೆ ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್

WhatsApp Emoji Features: ಬಳಕೆದಾರರಿಗೆ ಯಾವುದೇ ಸೂಚನೆ ನೀಡದೆ ಅಚ್ಚರಿಯ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ಆ್ಯಡ್ ಮಾಡಲು ಮುಂದಾಗಿದೆ. ಸದ್ದಿಲ್ಲದೆ ವಾಟ್ಸ್​ಆ್ಯಪ್ 21 ಹೊಸ ಎಮೋಜಿಗಳನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ.

WhatsApp Update: ಬಳಕೆದಾರರು ಶಾಕ್: ಸದ್ದಿಲ್ಲದೆ ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಫೀಚರ್
WhatsApp
TV9 Web
| Edited By: |

Updated on: Dec 05, 2022 | 12:32 PM

Share

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಅ್ಯಪ್ (WhatsApp) ಹೊಸ ವರ್ಷ ಆಗಮಿಸುತ್ತಿದ್ದಂತೆ ಹೊಸ ಹೊಸ ಫೀಚರ್​ಗಳನ್ನು ನೀಡುತ್ತಿದೆ. ಯೂಸರ್ ಫ್ರೆಂಡ್ಲಿ ಅಪ್ಡೇಟ್ ಪರಿಚಯಿಸಿ ಬಳಕೆದಾರರ ಮನಗೆದ್ದಿರುವ ವಾಟ್ಸ್​​ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್​ಆ್ಯಪ್​ನಲ್ಲಿ ಈಗಾಗಲೇ ಸಾಲು ಸಾಲು ಅಪ್ಡೇಟ್​ಗಳು ಪರೀಕ್ಷಾ ಹಂತದಲ್ಲಿದ್ದು ಒಂದರ ಹಿಂದೆ ಒಂದರಂತೆ ಬರಲು ತಯಾರಾಗಿ ನಿಂತಿದೆ. ಇದರ ನಡುವೆ ಬಳಕೆದಾರರಿಗೆ ಯಾವುದೇ ಸೂಚನೆ ನೀಡದೆ ಅಚ್ಚರಿಯ ಆಯ್ಕೆಯೊಂದನ್ನು ವಾಟ್ಸ್​ಆ್ಯಪ್ ಆ್ಯಡ್ ಮಾಡಲು ಮುಂದಾಗಿದೆ. ಸದ್ದಿಲ್ಲದೆ ವಾಟ್ಸ್​ಆ್ಯಪ್ 21 ಹೊಸ ಎಮೋಜಿಗಳನ್ನು (Emoji) ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ.

ಬಳಕೆದಾರರಿಗೆ ಮುಂದಿನ ಅಪ್ಡೇಟ್​ನಲ್ಲಿ ಹೊಸ 21 ಎಮೋಜಿಗಳು ಕಾಣಸಿಗುವ ಸಂಭಬವಿದೆ. ಇದು ಮೆಸೇಜ್ ರಿಯಾಕ್ಷನ್​ನಲ್ಲೂ ಲಭ್ಯವಿದೆ. ಇದರ ಜೊತೆಗೆ 8 ಎಮೋಜಿಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಆಯ್ಕೆಗಳು ವಾಟ್ಸ್​ಆ್ಯಪ್ ಬೇಟಾ ವರ್ಷನ್​ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಕಂಪ್ಯಾನಿಯನ್‌ ಮೋಡ್‌ ಆಯ್ಕೆ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಾಗುತ್ತಿದೆ. ವಾಟ್ಸ್​ಆ್ಯಪ್​ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್‌ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಡಿವೈಸ್‌ಗಳಲ್ಲಿ ವಾಟ್ಸ್​ಆ್ಯಪ್ ಅನ್ನು​​ ಬಳಸಬಹುದು. ಅಂದರೆ ನಿಮ್ಮ ವಾಟ್ಸ್​ಆ್ಯಪ್​​ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು.

JIO: ಜಿಯೋ ಧಮಾಕ ಪ್ಲಾನ್: ಈ ಯೋಜನೆ ಹಾಕಿಸಿಕೊಂಡರೆ ಒಂದು ವರ್ಷದ ವರೆಗೆ ಟೆನ್ಶನ್ ಬೇಡ

ಇದನ್ನೂ ಓದಿ
Image
Fake iPhone: ಮಾರುಕಟ್ಟೆಯಲ್ಲಿ ಭರ್ಜರಿ ಸೇಲ್ ಆಗುತ್ತಿದೆ ಡುಪ್ಲಿಕೇಟ್ ಐಫೋನ್​ಗಳು: ಕಂಡುಹಿಡಿಯುವುದು ಹೇಗೆ?
Image
Tech Tips: ಫೋನ್ ಪೇಯಲ್ಲಿ ನಿಮ್ಮ ಪಾಸ್​ವರ್ಡ್ ಬದಲಾಯಿಸುವುದು ಹೇಗೆ?: ಇಲ್ಲಿದೆ ಮಾಹಿತಿ
Image
Redmi Note 11S: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಬೆಲೆಯಲ್ಲಿ ಕಡಿತ
Image
Smartphones: ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿರುವ ಟಾಪ್ ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ವರದಿಯ ಪ್ರಕಾರ, ಬೇಟಾ ಬಳಕೆದಾರರು ಟ್ಯಾಬ್ಲೆಟ್ ಮೂಲಕ ಒಂದೇ ನಂಬರ್​ನ ವಾಟ್ಸ್​ಆ್ಯಪ್ ಅನ್ನು ಎರಡು ಡಿವೈಸ್​ನಲ್ಲಿ ಉಪಯೋಗಿಸಲು ಆಗುತ್ತಿದೆಯಂತೆ. ಇದು ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದ್ದು ನೋಟಿಫಿಕೇಶನ್ ಮೂಲಕ ಮಾಹಿತಿ ನೀಡುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಸಿಗಲಿದೆ ಎಂದು ಹೇಳಲಾಗಿದೆ.

ಇದು ಬಾರ್‌ಕೋಡ್‌ ಸ್ಕ್ಯಾನ್‌ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್‌ ಲಿಂಕ್‌ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ. ಆಯ್ದ ಟ್ಯಾಬ್ಲೆಟ್ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಈ ಆಯ್ಕೆಯನ್ನು ಆನಂದಿಸಬಹುದು. ಇದು ಎಂಡ್‌ ಟು ಎಂಡ್‌ ಎನ್‌ಕ್ರಿಪ್ಯನ್‌ ಮೂಲಕ ಕಾರ್ಯನಿರ್ವಹಿಸಲಿದೆ.

ನಿಮಗೆ ನೀವೇ ಮೆಸೇಜ್ ಮಾಡಬಹುದು:

ವಾಟ್ಸ್​ಆ್ಯಪ್​ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಆಯ್ದ ಬಳಕೆದಾರರಿಗೆ ಕಲ್ಪಿಸಲು ಮುಂದಾಗಿದೆ. ವಾಟ್ಸ್​ಆ್ಯಪ್​ನ ಈ ಹೊಸ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್​​ನಲ್ಲಿ ಕಾಣಲಿದೆ. ವಾಟ್ಸ್​ಆ್ಯಪ್ ತೆರೆದು ನ್ಯೂ ಚಾಟ್​ನಲ್ಲಿ ಕಾಂಟೆಕ್ಟ್ ಲಿಸ್ಟ್​​ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್​ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್​ಗಳನ್ನು ಕಳುಹಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ