Redmi Note 11S: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ 108MP ಕ್ಯಾಮೆರಾದ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತ
Smartphones Price Cut: ಟೆಕ್ ಪ್ರಿಯರ ನಿದ್ದೆ ಕದ್ದು ಮಾರುಕಟ್ಟೆಯಲ್ಲಿ ಧೂಳೆಬ್ಬಸಿದ್ದ ರೆಡ್ಮಿ ನೋಟ್ 11S ನಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವುದು ವಿಶೇಷ. ಇದೀಗ ಈ ಫೋನಿನ ಬೆಲೆಯನ್ನು ಇಳಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಶವೋಮಿ (Xiaomi) ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ರೆಡ್ಮಿ ನೋಟ್ 11 ಮತ್ತು ರೆಡ್ಮಿ ನೋಟ್ 11S (Redmi Note 11S) ಫೋನ್ಗಳನ್ನು ಲಾಂಚ್ ಮಾಡಿತ್ತು. ಟೆಕ್ ಪ್ರಿಯರ ನಿದ್ದೆ ಕದ್ದು ಮಾರುಕಟ್ಟೆಯಲ್ಲಿ ಧೂಳೆಬ್ಬಸಿದ್ದ ರೆಡ್ಮಿ ನೋಟ್ 11S ನಲ್ಲಿ ಬರೋಬ್ಬರಿ 108 ಮೆಗಾಫಿಕ್ಸೆಲ್ ಕ್ಯಾಮೆರಾ ಇರುವುದು ವಿಶೇಷ. ಇದೀಗ ಈ ಫೋನಿನ ಬೆಲೆಯನ್ನು ಇಳಿಸಲಾಗಿದೆ. ಶವೋಮಿಯ ಅಧಿಕೃತ ವೆಬ್ಸೈಟ್ ಮತ್ತು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ (Amazon) ಈ ಫೋನ್ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಇದರಲ್ಲಿ ಅಮೋಲೆಡ್ ಡಿಸ್‌ಪ್ಲೇ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್, 5,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು ಬಜೆಟ್ ಪ್ರಿಯರಂತು ಮನಸೋತಿದ್ದಾರೆ. ಹಾಗಾದರೆ ಈ ಫೋನ್ ಈಗ ಎಷ್ಟು ರೂಪಾಯಿಗೆ ಮಾರಾಟ ಆಗುತ್ತಿದೆ?, ಏನು ಫೀಚರ್ಸ್ ಇದೆ? ಎಂಬುದನ್ನು ನೋಡೋಣ.
ರೆಡ್ಮಿ ನೋಟ್ 11S ಸ್ಮಾರ್ಟ್‌ಫೋನ್ ಮೂರು ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. 6GB RAM ಮತ್ತು 64GB ಮಾದರಿಗೆ 16,499 ರೂ., 6GB RAM ಮತ್ತು 128GB ಮಾದರಿ ಆಯ್ಕೆಗೆ 17,499 ರೂ., 8GB RAM ಮತ್ತು 128GB ಆಯ್ಕೆಯ ಬೆಲೆ 18,499 ರೂ. ಇತ್ತು. ಇದೀಗ 6GB RAM ಮತ್ತು 64GB ಮಾದರಿಯ ಫೋನ್ ಮೇಲೆ 500 ರೂ. ಕಡಿಮೆ ಮಾಅಡಿ 15,999 ರೂ. ಗೆ ಮಾರಾಟ ಮಾಡುತ್ತಿದೆ. ಅಂತೆಯೆ 6GB RAM ಮತ್ತು 128GB, 8GB RAM ಮತ್ತು 128GB ಸ್ಟೋರೇಜ್ ಮೇಲೆ 1,500 ರೂ. ಕಡಿತವಾಗಿದೆ. ಈ ಮಾದರಿಗಳು ಕ್ರಮವಾಗಿ 15,999 ರೂ. ಮತ್ತು 16,999 ರೂ. ಗೆ ಸೇಲ್ ಕಾಣುತ್ತಿದೆ.
iPhone: ಈ ಫೋನಿನ ಬೆಲೆ ಬರೋಬ್ಬರಿ 97 ಕೋಟಿ ರೂಪಾಯಿ: ಅಷ್ಟಕ್ಕೂ ಇದರಲ್ಲೇನಿದೆ ಗೊತ್ತೇ?
ರೆಡ್ಮಿ ನೋಟ್ 11S ಸ್ಮಾರ್ಟ್‌ಫೋನ್ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೋ G96 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ MIUI 13 ನೊಂದಿಗೆ ಆಂಡ್ರಾಯ್ಡ್ 11 ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಈ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ HM2 ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.
ಇದು 16 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದ್ದು 33W ವೇಗದ ಚಾರ್ಜರ್ ನೀಡಲಾಗಿದೆ. ಇದು ಒಂದು ಗಂಟೆಯಲ್ಲಿ ಶೇ. 100 ರಷ್ಟು ಚಾರ್ಜ್ ಫುಲ್ ಆಗುತ್ತದಂತೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:47 pm, Sun, 4 December 22