Redmi Note 11S: 108MP ಕ್ಯಾಮೆರಾ, ಬೆಲೆ ಕೇವಲ 16,499: ಇದೇ ಮೊದಲ ಬಾರಿಗೆ ಸೇಲ್ ಆಗುತ್ತಿದೆ ರೆಡ್ಮಿ ನೋಟ್‌ 11S

108MP Camera Phone: ಬಿಡುಗಡೆ ದಿನವೇ ಟಕ್ ಪ್ರಿಯರ ನಿದ್ದೆ ಕದ್ದಿದ್ದ ರೆಡ್ಮಿ ನೋಟ್‌ 11S ಫೋನ್ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೇಲ್ ಕಾಣುತ್ತಿದೆ. ಇದರ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು 108 ಮೆಗಾಫಿಕ್ಸೆಲ್​ನಿಂದ ಆವೃತ್ತವಾಗಿದೆ.

Redmi Note 11S: 108MP ಕ್ಯಾಮೆರಾ, ಬೆಲೆ ಕೇವಲ 16,499: ಇದೇ ಮೊದಲ ಬಾರಿಗೆ ಸೇಲ್ ಆಗುತ್ತಿದೆ ರೆಡ್ಮಿ ನೋಟ್‌ 11S
Redmi Note 11S
Follow us
TV9 Web
| Updated By: Vinay Bhat

Updated on: Feb 21, 2022 | 3:15 PM

ಇತ್ತೀಚೆಗಷ್ಟೆ ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಶವೋಮಿ (Xiaomi) ಕಂಪನಿಯು ತನ್ನ ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ರೆಡ್ಮಿ ನೋಟ್‌ 11 (Redmi Note 11) ಮತ್ತು ರೆಡ್ಮಿ ನೋಟ್‌ 11S (Redmi Note 11S) ಫೋನ್​ಗಳು ಲಾಂಚ್ ಮಾಡಿತ್ತು. ಇದರಲ್ಲಿ ಬಿಡುಗಡೆ ದಿನವೇ ಟಕ್ ಪ್ರಿಯರ ನಿದ್ದೆ ಕದ್ದಿದ್ದ ರೆಡ್ಮಿ ನೋಟ್‌ 11S ಫೋನ್ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೇಲ್ ಕಾಣುತ್ತಿದೆ. 90Hz ರಿಫ್ರೆಶ್‌ ರೇಟ್‌ ಬಲಪಡೆದಿರುವ ಅಮೋಲೆಡ್‌ ಡಿಸ್‌ಪ್ಲೇ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌, 5,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿರುವ ರೆಡ್ಮಿ ನೋಟ್‌ 11S ಸ್ಮಾರ್ಟ್​ಫೋನ್​ಗೆ ಬಜೆಟ್ ಪ್ರಿಯರಂತು ಮನಸೋತಿದ್ದಾರೆ. ಇದರ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು 108 ಮೆಗಾಫಿಕ್ಸೆಲ್​ನಿಂದ (108MP Camera) ಆವೃತ್ತವಾಗಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.

ರೆಡ್ಮಿ ನೋಟ್‌ 11S ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್‌ ಮೀಡಿಯಾಟೆಕ್‌ ಹಿಲಿಯೋ G96 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ MIUI 13 ನೊಂದಿಗೆ ಆಂಡ್ರಾಯ್ಡ್‌ 11 ಬೆಂಬಲಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ 1TB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಈ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ HM2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಇದು 16 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5,000mAh ಬ್ಯಾಟರಿಯನ್ನು ಒಳಗೊಂಡಿದೆ.

ಬೆಲೆ ಎಷ್ಟು?:

ರೆಡ್ಮಿ ನೋಟ್‌ 11S ಸ್ಮಾರ್ಟ್‌ಫೋನ್‌ ಮೂರು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. 6GB RAM ಮತ್ತು 64GB ಮಾದರಿಗೆ 16,499. ರೂ ಬೆಲೆ ನಿಗದಿ ಪಡಿಸಲಾಗಿದೆ. 6GB RAM ಮತ್ತು 128GB ಮಾದರಿ ಆಯ್ಕೆಗೆ 17,499 ರೂ., 8GB RAM ಮತ್ತು 128GB ಆಯ್ಕೆಯ ಬೆಲೆ 18,499 ರೂ. ಇದೆ. ಈ ಇಂದಿನಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಸೇರಿದಂತೆ ಎಂಐ. ಕಾಮ್, ಎಂಐ ಸ್ಟೋರ್ ಮತ್ತು ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಗೆ ಸಿಗುತ್ತಿದೆ. ಖರೀದಿಸಬಹುದು.

ರೆಡ್ಮಿ ನೋಟ್‌ 11 ಸ್ಮಾರ್ಟ್‌ಫೋನ್‌ ಕೂಡ ಮೂರು ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಇದರ 4GB RAM ಮತ್ತು 64GB ಮಾದರಿಗೆ 13,499. ರೂ ಬೆಲೆ ನಿಗದಿ ಪಡಿಸಲಾಗಿದೆ. 6GB RAM ಮತ್ತು 64GB ಮಾದರಿ ಆಯ್ಕೆಗೆ 14,499 ರೂ. ಹಾಗೆಯೆ 6GB RAM ಮತ್ತು 128GB ಆಯ್ಕೆಯ ಬೆಲೆ 15,499 ರೂ. ಇದೆ.

Vivo V23e 5G: 44MP ಸೆಲ್ಫೀ ಕ್ಯಾಮೆರಾ, 44W ಫಾಸ್ಟ್ ಚಾರ್ಜರ್: ಭಾರತದಲ್ಲಿ ರಿಲೀಸ್ ಆಯ್ತು ವಿವೋ V23e ಸ್ಮಾರ್ಟ್‌ಫೋನ್‌

OnePlus TV Y1S: ಬಿಡುಗಡೆ ದಿನವೇ ಮೋಡಿ ಮಾಡಿದ್ದ ಒನ್​ಪ್ಲಸ್​ನ ಈ ಸ್ಮಾರ್ಟ್​ ಟಿವಿ ಈಗ ಖರೀದಿಗೆ ಲಭ್ಯ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ