AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo V23e 5G: 44MP ಸೆಲ್ಫೀ ಕ್ಯಾಮೆರಾ, 44W ಫಾಸ್ಟ್ ಚಾರ್ಜರ್: ಭಾರತದಲ್ಲಿ ರಿಲೀಸ್ ಆಯ್ತು ವಿವೋ V23e ಸ್ಮಾರ್ಟ್‌ಫೋನ್‌

Vivo V23e 5G Price: 44W ಫಾಸ್ಟ್ ಚಾರ್ಜರ್, ಆಕರ್ಷಕ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್​​ನಿಂದ ವಿವೋ V23e ಆವೃತ್ತವಾಗಿದ್ದು 8GB RAM ರೂಪಾಂತರದಲ್ಲಿ 128GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಾಗಲಿದೆ. ಭಾರತದಲ್ಲಿ ಇದರ ಬೆಲೆ 25,990 ರೂ. ಆಗಿದೆ.

Vivo V23e 5G: 44MP ಸೆಲ್ಫೀ ಕ್ಯಾಮೆರಾ, 44W ಫಾಸ್ಟ್ ಚಾರ್ಜರ್: ಭಾರತದಲ್ಲಿ ರಿಲೀಸ್ ಆಯ್ತು ವಿವೋ V23e ಸ್ಮಾರ್ಟ್‌ಫೋನ್‌
Vivo V23e 5G
TV9 Web
| Updated By: Vinay Bhat

Updated on: Feb 21, 2022 | 2:30 PM

Share

ಸ್ಮಾರ್ಟ್​​ಫೋನ್ (Smartphone) ಮಾರುಕಟ್ಟೆಯ ಬಹುದೊಡ್ಡ ಲಾಭದಾಯಕ ಹೊಂದಿರುವ ಭಾರತದಲ್ಲಿ ಪ್ರಸಿದ್ಧ ವಿವೋ ಕಂಪನಿ ಈಗೀಗ ಹೊಚ್ಚ ಹೊಸ ಆಕರ್ಷಕ ಫೋನ್​ಗಳನ್ನು ಅನಾವರಣ ಮಾಡುತ್ತಿದೆ. ಮೊನ್ನೆಯಷ್ಟೆ ವಿವೋ T1 5G, ವಿವೋ ವೈ Y15s ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಿದ ಬೆನ್ನಲ್ಲೇ ಇದೀಗ ಹೊಸ ವಿವೋ ವಿ23ಇ (VIVO V23e 5G) ಸ್ಮಾರ್ಟ್‌ಫೋನ್‌ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. 44W ಫಾಸ್ಟ್ ಚಾರ್ಜರ್ (Fast Charger), ಆಕರ್ಷಕ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್​​ನಿಂದ ವಿವೋ V23e ಆವೃತ್ತವಾಗಿದೆ. ಇದರ ಬೆಲೆ ಕೂಡ ಗಗನದೆತ್ತರಕ್ಕೆ ಇಲ್ಲದೆ ಕಡಿಮೆ ದರಕ್ಕೆ ಮಾಡುತ್ತಿರುವುದು ವಿಶೇಷ. ಹಾಗಾದ್ರೆ ಈ ಫೋನಿನ ವಿಶೇಷತೆ ಏನು? ಬೆಲೆ ಎಷ್ಟು?, ಯಾವಾಗ ಮಾರಾಟ? ಎಂಬ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ವಿವೋ V23e ಸ್ಮಾರ್ಟ್‌ಫೋನ್‌ ಕಳೆದ ವರ್ಷ ವಿಯೆಟ್ನಾಂನಲ್ಲಿ ಬಿಡುಗಡೆ ಆಗಿತ್ತು. ಅಲ್ಲಿ ಇದರ ಬೆಲೆ 8,490,000 VND. ಈ ಡಿವೈಸ್‌ ಸಿಂಗಲ್‌ 8GB RAM ರೂಪಾಂತರದಲ್ಲಿ 128GB ಆಂತರಿಕ ಸಂಗ್ರಹಣೆಯೊಂದಿಗೆ ಲಭ್ಯವಾಗಲಿದೆ. ಭಾರತದಲ್ಲಿ ಇದರ MRP ಬೆಲೆ 28,990 ರೂ. ಇರಲಿದೆ. ಆದರೆ, ಇದು 25,990 ರೂ. ಗೆ ಸೇಲ್ ಕಾಣಲಿದೆ. ಇದು ಮೂನ್ಲೈಟ್ ಶ್ಯಾಡೋ (ಕಪ್ಪು) ಮತ್ತು ನೀಲಿ ಗುಲಾಬಿ ಕಲರ್‌ ಆಯ್ಕೆಯಲ್ಲಿ ಬರಲಿದೆ. ಇಂದಿನಿಂದಲೇ ಇದು ಖರೀದಿಗೆ ಲಭ್ಯವಾಗುತ್ತಿದ್ದು ವಿವೋ ಕಂಪನಿಯ ಅಧಿಕೃತ ವೆಬ್​ಸೈಟ್ ಮತ್ತು ರಿಟೇಲ್ ಸ್ಟೋರ್​ಗಳನ್ನು ಮಾರಾಟ ಆಗುತ್ತಿದೆ.

ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44-ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 810 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ FunTouch 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 44 ಮೆಗಾಪಿಕ್ಸೆಲ್​ನ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇನ್ನು ಈ ರಿಯರ್‌ ಕ್ಯಾಮೆರಾದಲ್ಲಿ ಐ ಫೋಕಸ್, ನೈಟ್ ಮೋಡ್, ಪೋರ್ಟ್ರೇಟ್ ಎರೇಸರ್, ಲೈವ್ ಫೋಟೋ, ಎಆರ್ ಸ್ಟಿಕ್ಕರ್ ಮತ್ತು ಸ್ಲೋ-ಮೋಷನ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ 4050mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 44W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಇದರ ಮೂಲಕ ಕೇವಲ 30 ನಿಮಿಷಗಳಲ್ಲಿ 69% ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ. ಕನನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.2, ಯುಎಸ್‌ಬಿ ಟೈಪ್-ಸಿ ಮತ್ತು ಜಿಪಿಎಸ್ ಬೆಂಬಲಿಸಲಿದೆ. ಡಿಸ್​ ಪ್ಲೇ  ಒಳಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ. ಇದು 5G  ಬೆಂಬಲ ಕೂಡ ಪಡೆದುಕೊಂಡಿದೆ.

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು