Realme 9 Pro Plus: ಸೋನಿ ಸೆನ್ಸಾರ್ ಕ್ಯಾಮೆರಾ ಇರುವ ರಿಯಲ್ ಮಿ 9 ಪ್ರೊ+ ಖರೀದಿಸಬಹುದೇ?: ಬಹುಜನರ ಪ್ರಶ್ನೆಗೆ ಇಲ್ಲಿದೆ ಉತ್ತರ
Realme 9 Pro Plus Camera: ರಿಯಲ್ ಮಿ 9 ಪ್ರೊ + 5G ಸ್ಮಾರ್ಟ್‌ಫೋನಿನ ಮುಖ್ಯ ಹೈಲೇಟ್ ಕ್ಯಾಮೆರಾ ಆಗಿದೆ. ಇದು 50 ಮೆಗಾಫಿಕ್ಸೆಲ್ನ ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಮೊಬೈಲ್ ಫೋಟೋಗ್ರಫಿಗೆ ಸದ್ಯದ ಆಂಡ್ರಾಯ್ಡ್ ಫೋನ್ನಲ್ಲಿ ಲಭ್ಯಯಿರುವ ಬೆಸ್ಟ್ ಆಯ್ಕೆ ಇದಾಗಿದೆ.
ವಾರಗಳ ಹಿಂದೆಯಷ್ಟೆ ರಿಯಲ್ ಮಿ ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೊಸ ರಿಯಲ್ ಮಿ 9 ಪ್ರೊ 5G (Realme 9 Pro 5G) ಮತ್ತು ರಿಯಲ್ ಮಿ 9 ಪ್ರೊ + 5G (Realme 9 Pro+ 5G) ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿತ್ತು. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಎರಡೂ ಫೋನ್ ಪೈಕಿ ರಿಯಲ್ ಮಿ 9 ಪ್ರೊ + 5G ಈಗ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಈ ಫೋನ್ ಸೇಲ್ ಆರಂಭಿಸಿದೆ. ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಬಲವನ್ನು ಪಡೆದುಕೊಂಡಿರುವ ರಿಯಲ್ ಮಿ 9 ಪ್ರೊ + 5G ಫೋನಿನ ಪ್ರಮುಖ ಹೈಲೇಟ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಾಟ್‌ಬೀಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಅಂದರೆ ಇದು ಹೃದಯ ಬಡಿತ ಪತ್ತೆ ಮತ್ತು ರೆಕಾರ್ಡಿಂಗ್ ಅನ್ನು ಒದಗಿಸುತ್ತದೆ. ಎಂಟು ವಿಭಿನ್ನ ಮಾದರಿಯ ಹಾರ್ಟ್‌ಬೀಟ್ ವಿಶ್ಯುಯಲ್ ಲೇಬಲ್‌ಗಳನ್ನು ಒಳಗೊಂಡಿದೆ. ಈ ಫೋನಿನ ಮತ್ತೊಂದು ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ.
ಏನು ವಿಶೇಷತೆ?:
ರಿಯಲ್ ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಬಲವನ್ನು ಪಡೆಉಕೊಂಡಿದ್ದು, ಆಂಡ್ರಾಯ್ಡ್ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಫೋನಿನ ಮತ್ತೊಂದು ಪ್ರಮುಖ ಹೈಲೇಟ್ ಕ್ಯಾಮೆರಾ. ಇದು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್ f/2.2 ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾ ಹೊಂದಿದೆ.
ಇನ್ನು ಈ ಸ್ಮಾರ್ಟ್‌ಫೋನಿನ ಪ್ರೈಮೆರಿ ಕ್ಯಾಮೆರಾ ಪ್ರೊಲೈಟ್ ಇಮೇಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಉತ್ತಮ ಬೆಳಕಿನ ಸೇವನೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 60W ಫಾಸ್ಟ್ ಚಾರ್ಜರ್ ನೀಡಲಾಗಿದೆ.
ಬೆಲೆ ಎಷ್ಟು?:
ಭಾರತದಲ್ಲಿ ರಿಯಲ್ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್ 6GB RAM ಮತ್ತು 128GB ರೂಪಾಂತರದ ಆಯ್ಕೆಯ ಬೆಲೆ 24,999 ರೂ., 8GB RAM ಮತ್ತು128GB ಸ್ಟೊರೇಜ್ ಸಾಮರ್ಥ್ಯಕ್ಕೆ 26,999 ರೂ. ಇದೆ. ಅಂತೆಯೆ 8GB RAM ಮತ್ತು 256GB ಮಾಡೆಲ್ ಬೆಲೆ 28,999 ರೂ. ಆಗಿದೆ. ರಿಯಲ್ ಮಿ 9 ಪ್ರೊ + ಫೆಬ್ರವರಿ 21 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್, ರಿಯಲ್ ಮಿ.ಕಾಮ್ ಸೈಟ್‌ಗಳಲ್ಲಿ ಖರೀದಿಸಬಹುದು.
ಖರೀದಿಸಬಹುದೇ?:
ರಿಯಲ್ ಮಿ 9 ಪ್ರೊ + 5G ಸ್ಮಾರ್ಟ್‌ಫೋನಿನ ಮುಖ್ಯ ಹೈಲೇಟ್ ಕ್ಯಾಮೆರಾ ಆಗಿದೆ. ಇದು 50 ಮೆಗಾಫಿಕ್ಸೆಲ್ನ ಸೋನಿ IMX766 ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಮೊಬೈಲ್ ಫೋಟೋಗ್ರಫಿಗೆ ಸದ್ಯದ ಆಂಡ್ರಾಯ್ಡ್ ಫೋನ್ನಲ್ಲಿ ಲಭ್ಯಯಿರುವ ಬೆಸ್ಟ್ ಆಯ್ಕೆ ಇದಾಗಿದೆ. ಇದರಲ್ಲಿರುವ ನೈಟ್ ಮೋಡ್ ಆಯ್ಕೆ ಕೂಡ ಅತ್ಯುತ್ತಮವಾಗಿದೆ. ಇದರಲ್ಲಿರುವ ಮೀಡಿಯಾಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಹೊಸ ವರ್ಷನ್ ಆಗಿದ್ದು ಫೋನಿನ ಕಾರ್ಯನಿರ್ವಹಣೆ ಕೂಡ ಬೆಸ್ಟ್ ಆಗಿದೆ. ಗೇಮಿಂಗ್ಗೆ ಕೂಡ ಇದು ಸಪೋರ್ಟ್ ಮಾಡುತ್ತದೆ. ಗೇಮ್ಗೆಂದೇ ಮೊಬೈಲ್ ಕೊಂಡುಕೊಳ್ಳುತ್ತಿದ್ದರೆ ಇದು ಉತ್ತಮ ಆಯ್ಕೆಯಲ್ಲ. 6.4 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದ್ದು ಸಿನಿಮಾ ವೀಕ್ಷಣೆಗೆ ಹೇಳಿ ಮಾಡಿಸಿದ್ದು. ಒಟ್ಟಾರೆಯಾಗಿ ನೀವು ಒಂದು ಮಧ್ಯಮ ಬೆಲೆಗೆ ಅತ್ಯುತ್ತಮ ಕ್ಯಾಮೆರಾ ಫೋನ್ ಖರೀದಿಸುವ ಪ್ಲಾನ್ನಲ್ಲಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.
Redmi Note 11S: 108MP ಕ್ಯಾಮೆರಾ, ಬೆಲೆ ಕೇವಲ 16,499: ಇದೇ ಮೊದಲ ಬಾರಿಗೆ ಸೇಲ್ ಆಗುತ್ತಿದೆ ರೆಡ್ಮಿ ನೋಟ್ 11S