AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme 9 Pro 5G: ರಿಯಲ್‌ ಮಿ 9 ಪ್ರೊ 5G, ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ ರಿಲೀಸ್: ಇದರಲ್ಲಿದೆ ಅಚ್ಚರಿ ಫೀಚರ್ಸ್

Realme 9 Pro+ 5G: ಬಹುನಿರೀಕ್ಷಿತ ಹೊಸ ರಿಯಲ್‌ ಮಿ 9 ಪ್ರೊ 5G ಮತ್ತು ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ ಅನಾವರಣಗೊಂಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಎರಡೂ ಫೋನ್ ಆಕರ್ಷಕ ಕ್ಯಾಮೆರಾ, ಬ್ಯಾಟರಿ ಜೊತೆಗೆ ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಬಲವನ್ನು ಪಡೆದುಕೊಂಡಿದೆ.

Realme 9 Pro 5G: ರಿಯಲ್‌ ಮಿ 9 ಪ್ರೊ 5G, ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ ರಿಲೀಸ್: ಇದರಲ್ಲಿದೆ ಅಚ್ಚರಿ ಫೀಚರ್ಸ್
Realme 9 Pro 5G, Realme 9 Pro 5G
TV9 Web
| Edited By: |

Updated on: Feb 17, 2022 | 12:48 PM

Share

ರಿಯಲ್ ಮಿ ಕಂಪನಿ ಭಾರತದಲ್ಲಿ ತನ್ನ ಬಹುನಿರೀಕ್ಷಿತ ಹೊಸ ರಿಯಲ್‌ ಮಿ 9 ಪ್ರೊ 5G (Realme 9 Pro 5G) ಮತ್ತು ರಿಯಲ್‌ ಮಿ 9 ಪ್ರೊ + 5G (Realme 9 Pro+ 5G) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಎರಡೂ ಫೋನ್ ಆಕರ್ಷಕ ಕ್ಯಾಮೆರಾ, ಬ್ಯಾಟರಿ ಜೊತೆಗೆ ಬಲಿಷ್ಠ ಬ್ಯಾಟರಿ, ಫಾಸ್ಟ್ ಚಾರ್ಜರ್ ಬಲವನ್ನು ಪಡೆದುಕೊಂಡಿದೆ. ಸ್ಟ್ರೀಟ್ ಫೋಟೋಗ್ರಫಿ ಮೋಡ್ 2.0 ನೊಂದಿಗೆ ಪ್ರೀ ಲೋಡ್ ಆಗಿದೆ. ರಿಯಲ್‌ ಮಿ 9 ಪ್ರೊ + 5G ಫೋನಿನ ಪ್ರಮುಖ ಹೈಲೇಟ್ ಇದು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹಾಟ್‌ಬೀಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದು ಹೃದಯ ಬಡಿತ ಪತ್ತೆ ಮತ್ತು ರೆಕಾರ್ಡಿಂಗ್ ಅನ್ನು ಒದಗಿಸುತ್ತದೆ. ಎಂಟು ವಿಭಿನ್ನ ಮಾದರಿಯ ಹಾರ್ಟ್‌ಬೀಟ್‌ ವಿಶ್ಯುಯಲ್‌ ಲೇಬಲ್‌ಗಳನ್ನು ಒಳಗೊಂಡಿದೆ. ಉಳಿದಂತೆ ಈ ಫೋನಿನ (Smartphone) ಬೆಲೆ ಎಷ್ಟು?, ಏನು ವಿಶೇಷತೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD+ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಡಾರ್ಟ್ ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

ಇನ್ನು ರಿಯಲ್‌ ಮಿ 9 ಪ್ರೊ+ 5G ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಇದು 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್‌ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಬೆಂಬಲಿಸಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೋನಿ IMX355 ಸೆನ್ಸಾರ್‌ f/2.2 ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಅನ್ನು ಒಳಗೊಂಡಿದೆ. ಇದಲ್ಲದೆ 16-ಮೆಗಾಪಿಕ್ಸೆಲ್ ಸೋನಿ IMX471 ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಪ್ರೈಮೆರಿ ಕ್ಯಾಮೆರಾ ಪ್ರೊಲೈಟ್‌ ಇಮೇಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದು ಉತ್ತಮ ಬೆಳಕಿನ ಸೇವನೆಯನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 60W ಫಾಸ್ಟ್ ಚಾರ್ಜರ್ ನೀಡಲಾಗಿದೆ.

ಬೆಲೆ ಎಷ್ಟು?:

ಭಾರತದಲ್ಲಿ ರಿಯಲ್‌ ಮಿ 9 ಪ್ರೊ 5G ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ 17,999 ರೂ. ಬೆಲೆ ಹೊಂದಿದೆ. ಇನ್ನು 8GB RAM ಮತ್ತು 128GB ಮಾದರಿಯ ಆಯ್ಕೆಗೆ 20,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಫೆಬ್ರವರಿ 23 ರಂದು ಮಧ್ಯಾಹ್ನ 12 ಗಂಟೆಯಿಂದ ಮಾರಾಟವಾಗಲಿದೆ.  ಇತ್ತ ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ರೂಪಾಂತರದ ಆಯ್ಕೆಯ ಬೆಲೆ 24,999 ರೂ., 8GB RAM ಮತ್ತು128GB ಸ್ಟೊರೇಜ್ ಸಾಮರ್ಥ್ಯಕ್ಕೆ 26,999 ರೂ. ಇದೆ. ಅಂತೆಯೆ 8GB RAM ಮತ್ತು 256GB ಮಾಡೆಲ್ ಬೆಲೆ 28,999 ರೂ. ಆಗಿದೆ. ರಿಯಲ್‌ ಮಿ 9 ಪ್ರೊ + ಫೆಬ್ರವರಿ 21 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ. ಈ ಫೋನ್‌ಗಳನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌, ರಿಯಲ್‌ ಮಿ.ಕಾಮ್‌ ಸೈಟ್‌ಗಳಲ್ಲಿ ಖರೀದಿಸಬಹುದು.

Itel A27: ಕೇವಲ 6 ಸಾವಿರ ರೂ.ಗೆ 4,000mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್​ಫೋನ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್