Redmi Smart TV X43: ಧೂಳೆಬ್ಬಿಸುತ್ತಿದೆ ನಂಬರ್ ಒನ್ ಸ್ಮಾರ್ಟ್​ ಟಿವಿ ಬ್ರ್ಯಾಂಡ್​ ಶವೋಮಿಯ ರೆಡ್ಮಿ ಸ್ಮಾರ್ಟ್‌ ಟಿವಿ X43: ಇದರ ಬೆಲೆ ಕೇವಲ …

TV9 Digital Desk

| Edited By: Vinay Bhat

Updated on: Feb 17, 2022 | 2:57 PM

ರೆಡ್ಮಿ ಸ್ಮಾರ್ಟ್​ ಟಿವಿ X43 ಬೆಲೆ 28,999 ರೂ.ಗಳಾಗಿದ್ದು, ಅಮೆಜಾನ್ ಮತ್ತು ಎಂಐ.ಕಾಮ್ ಮೂಲಕ ಭಾರತದಲ್ಲಿ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ ಟಿವಿಯು ಸ್ಲಿಮ್ ಬೆಜೆಲ್‌ಗಳನ್ನು ಸಹ ಒಳಗೊಂಡಿದೆ. ರೆಡ್ಮಿ ಸ್ಮಾರ್ಟ್‌ ಟಿವಿ X43 ಆಂಡ್ರಾಯ್ಡ್‌ ಟಿವಿ 10 ನಲ್ಲಿ ಕಾರ್ಯ ನಿರ್ವಹಿಸುತ್ತದೆ

Redmi Smart TV X43: ಧೂಳೆಬ್ಬಿಸುತ್ತಿದೆ ನಂಬರ್ ಒನ್ ಸ್ಮಾರ್ಟ್​ ಟಿವಿ ಬ್ರ್ಯಾಂಡ್​ ಶವೋಮಿಯ ರೆಡ್ಮಿ ಸ್ಮಾರ್ಟ್‌ ಟಿವಿ X43: ಇದರ ಬೆಲೆ ಕೇವಲ …
Redmi Smart TV X43

ಭಾರತದ ಸ್ಟಾರ್ಟ್​ಫೋನ್ ಮಾರುಕಟ್ಟೆಯನ್ನು ನಂಬರ್ ಒನ್ ಸ್ಥಾನದಲ್ಲಿ ನಿಂತು ಆಳುತ್ತಿರುವ ಶವೋಮಿ (Xiaomi) ಕಂಪನಿ ಸ್ಮಾರ್ಟ್​ ಟಿವಿ ಲೋಕಕ್ಕೂ ಕಾಲಿಟ್ಟು ನಂಬರ್ ಒನ್ ಪಟ್ಟ ಅಲಂಕರಿಸಿದೆ. ಇತ್ತೀಚೆಗಷ್ಟೆ ಶವೋಮಿ ತನ್ನ ರೆಡ್ಮಿ ನೋಟ್ 11s ಹಾಗೂ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್‌ ಪ್ರೊ ಡಿವೈಸ್‌ ಜೊತೆಗೆ ರೆಡ್ಮಿ ಸ್ಮಾರ್ಟ್​ ಟಿವಿ X43 (Redmi Smart TV X43) ಅನ್ನು ಅನಾವರಣ ಮಾಡಿತ್ತು. ಇದೀಗ ಖರೀದಿಗೆ ಸಿಗುತ್ತಿದೆ. G52 MP2 ಜೊತೆಗೆ 64 ಬಿಟ್ ಕ್ವಾಡ್ ಕೋರ್ A55 CPU ಜೊತೆಗೆ ಆಂಡ್ರಾಯ್ಡ್‌ ಟಿವಿ 10 ನಿಂದ ಚಾಲಿತವಾಗಿರಿವ ಈ ಸ್ಮಾರ್ಟ್​ ಟಿವಿ ಗೂಗಲ್ ಅಸಿಸ್ಟಂಟ್ ಮತ್ತು ಅಂತರ್ನಿರ್ಮಿತ ಕ್ರೋಮ್‌ಕಾಸ್ಟ್‌ ಅನ್ನು ಸಹ ಹೊಂದಿದೆ. ಇದರೊಂದಿಗೆ ಮಿ ಹೋಮ್ (Mi Home) ಅಪ್ಲಿಕೇಶನ್‌ ಸೌಲಭ್ಯ ಸಹ ಲಭ್ಯವಿದೆ. ರೆಡ್ಮಿ ಸ್ಮಾರ್ಟ್​ ಟಿವಿ X43 ಬೆಲೆ 28,999 ರೂ.ಗಳಾಗಿದ್ದು, ಅಮೆಜಾನ್ ಮತ್ತು ಎಂಐ.ಕಾಮ್ ಮೂಲಕ ಭಾರತದಲ್ಲಿ ಮಾರಾಟವಾಗುತ್ತಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಮತ್ತು ಇಎಂಐ ಪಾವತಿ ಆಯ್ಕೆಗಳನ್ನು ಆರಿಸಿದರೆ. ಈ ಸ್ಮಾರ್ಟ್ ಟಿವಿ 1,500ರೂ. ಗಳ ತ್ವರಿತ ರಿಯಾಯಿತಿಯೊಂದಿಗೆ ಖರೀದಿಸಹುದು.

ಈ ಟಿವಿಯ ಕುರಿತು ಮಾತನಾಡಿದ ಶವೋಮಿ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಳಿಕೃಷ್ಣನ್ ಬಿ, “ನಾವು Redmi Smart TV X43 ಜೊತೆಗೆ ಲಿವಿಂಗ್ ರೂಮಿನ ಗೋಡೆಗಳೊಳಗೆ ಥಿಯೇಟರ್‌ನ ಐಷಾರಾಮಿಗಳನ್ನು ಮರುಸೃಷ್ಟಿಸಲು ಹೊರಟಿದ್ದೇವೆ ಮತ್ತು ಭಾರತದಲ್ಲಿ ಸ್ಮಾರ್ಟ್ ಟಿವಿ ವಿಭಾಗದಲ್ಲಿ ನಮ್ಮ ಹೆಜ್ಜೆಗುರುತನ್ನು ಮತ್ತಷ್ಟು ವಿಸ್ತರಿಸಲು ಹೊರಟಿದ್ದೇವೆ. ಈ ಬಿಡುಗಡೆಯೂ AIoT (Artificial intelligence of things) ಕ್ಷೇತ್ರದಲ್ಲಿ ರೆಡ್ಮಿ ಇಂಡಿಯಾದ ಕಾರ್ಯತಂತ್ರದ ಹೆಜ್ಜೆಗಳಲ್ಲಿ ಒಂದಾಗಿದೆ,” ಎಂದು ಹೇಳಿದ್ದಾರೆ.

ರೆಡ್ಮಿ ಸ್ಮಾರ್ಟ್‌ ಟಿವಿ X43 43 ಇಂಚಿನ 4K ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ ಟಿವಿಯು ಸ್ಲಿಮ್ ಬೆಜೆಲ್‌ಗಳನ್ನು ಸಹ ಒಳಗೊಂಡಿದೆ. ರೆಡ್ಮಿ ಸ್ಮಾರ್ಟ್‌ ಟಿವಿ X43 ಆಂಡ್ರಾಯ್ಡ್‌ ಟಿವಿ 10 ನಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು TV ಮತ್ತು ಚಲನಚಿತ್ರ ರೇಟಿಂಗ್‌ಗಳಿಗಾಗಿ IMDB ಗಾಗಿ ಸಂಯೋಜಿತ ಬೆಂಬಲದೊಂದಿಗೆ ಕಂಪನಿಯ PatchWall UI ಅನ್ನು ಒಳಗೊಂಡಿದೆ.

ಉತ್ತಮ ಧ್ವನಿ ಅನುಭವಕ್ಕಾಗಿ 30W ಸ್ಟೀರಿಯೋ ಸ್ಪೀಕರ್ ಸೆಟಪನ್ನು ಹೊಂದಿದೆ. ಟಿವಿ ಡಿಟಿಎಸ್ ವರ್ಚುವಲ್: ಎಕ್ಸ್ ಮತ್ತು ಡಾಲ್ಬಿ ಅಟ್ಮಾಸನ್ನು ಎಚ್‌ಡಿಎಂಐ ಇಎಆರ್‌ಸಿ (HDMI eARC) ಮೂಲಕ ಬಾಹ್ಯ ಅಟ್ಮಾಸ್ ಸೌಂಡ್‌ಬಾರ್‌ಗಳು/ಎವಿ ರಿಸೀವರ್‌ಗಳಿಗೆ ಸಹ ಬೆಂಬಲಿಸುತ್ತದೆ. HDMI 2.1 ಸ್ಲಾಟ್ x 3, USB x 2, ಈಥರ್ನೆಟ್, ಆಪ್ಟಿಕಲ್ ಮತ್ತು ಆಲ್-ರೌಂಡ್ ಕನೆಕ್ಟಿವಿಟಿಗಾಗಿ 3.5 mm ಜ್ಯಾಕ್ ಸೇರಿದಂತೆ ಹಿಂಭಾಗದಲ್ಲಿ ಲಭ್ಯವಿರುವ ಕನೆಕ್ಟಿವಿಟಿ ಪೋರ್ಟ್‌ಗಳ  ಶ್ರೇಣಿಯನ್ನು ಸಹ ನೀಡುತ್ತದೆ. ಆಟೋ ಲೋ ಲೇಟೆನ್ಸಿ ಮೋಡ್ (ALLM) ಕನ್ಸೋಲ್‌ಗಳ ಮೂಲಕ ಆಟದ ಸಮಯದಲ್ಲಿ 4K 60fps ನಲ್ಲಿ 5ms ಗಿಂತ ಕಡಿಮೆ ವಿಳಂಬವನ್ನು ಖಾತ್ರಿಗೊಳಿಸುತ್ತದೆ. ಟಿವಿಯ ಕನೆಕ್ಟಿವಿಟಿ ಅಂಶಗಳಲ್ಲಿ ಎತರ್ನೆಟ್ ಪೋರ್ಟ್, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0 ಮತ್ತು AV ಇನ್‌ಪುಟ್ ಸೇರಿವೆ.

Oppo Reno 7 5G: ಒಪ್ಪೋ ರೆನೋ 7 ಸೇಲ್ ಆರಂಭ: ಈ ಫೋನ್ ನೀವು ಏಕೆ ಖರೀದಿಸಬೇಕು?, ಇಲ್ಲಿದೆ 3 ಕಾರಣ

Realme 9 Pro 5G: ರಿಯಲ್‌ ಮಿ 9 ಪ್ರೊ 5G, ರಿಯಲ್‌ ಮಿ 9 ಪ್ರೊ + 5G ಸ್ಮಾರ್ಟ್‌ಫೋನ್‌ ರಿಲೀಸ್: ಇದರಲ್ಲಿದೆ ಅಚ್ಚರಿ ಫೀಚರ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada