ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ವಿಂಟರ್ ಫೆಸ್ಟ್ ಸೇಲ್ (Flipkart Winter Fest sale 2023) ಅನ್ನು ಆಯೋಜಿಸಿದೆ. ಈ ಮಾರಾಟದಲ್ಲಿ ಮೋಟೋರೊಲಾ, ಐಫೋನ್, ರೆಡ್ಮಿ ಕಂಪನಿಯ ಅನೇಕ 5G ಫೋನ್‌ಗಳಿಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ಈ ಸೇಲ್ ಈಗಾಗಲೇ ಇ-ಕಾಮರ್ಸ್ ಸೈಟ್‌ನಲ್ಲಿ ಲೈವ್ ಆಗಿದೆ ಮತ್ತು ಡಿಸೆಂಬರ್ 31 ರವರೆಗೆ ಚಾಲ್ತಿಯಲ್ಲಿರುತ್ತದೆ. ವಿಂಟರ್ ಫೆಸ್ಟ್ ಸೇಲ್ 2023 ರ ಕೊನೆಯ ಮಾರಾಟದ ಈವೆಂಟ್ ಆಗಿರಲಿದೆ. ಹೊಸ ವರ್ಷದ ಪ್ರಯುಕ್ತ ಹೊಸ ಫೋನ್‌ಗಳನ್ನು ಖರೀದಿಸಲು ಬಯಸುವ ಜನರು, ಫ್ಲಿಪ್ಕಾರ್ಟ್ಗೆ ವಿಸಿಟ್ ಮಾಡಬಹುದು. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದಲ್ಲಿ ಸ್ಮಾರ್ಟ್‌ಫೋನ್ ಡೀಲ್‌ಗಳ ವಿವರಗಳು ಇಲ್ಲಿವೆ.
ಐಫೋನ್ 14 ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಸೇಲ್ನಲ್ಲಿ 57,999 ರೂ. ಗೆ ಪಟ್ಟಿ ಮಾಡಲಾಗಿದೆ. ಅಂತೆಯೆ ಕಳೆದ ವರ್ಷ 89,900 ರೂ. ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ ಐಫೋನ್ 14 ಪ್ಲಸ್ ಪ್ರಸ್ತುತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದನ್ನ ಫ್ಲಿಪ್‌ಕಾರ್ಟ್ ಮೂಲಕ 65,999 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಐಫೋನ್ 14 ಪ್ಲಸ್‌ನಲ್ಲಿ 23,901 ರೂ. ಗಳ ಫ್ಲಾಟ್ ರಿಯಾಯಿತಿ ಇದೆ. ಈ ಬೆಲೆ 128GB ಸ್ಟೋರೇಜ್ ಮಾದರಿಗೆ ಆಗಿದೆ.
8,300mAh ಬ್ಯಾಟರಿ, 35W ಫಾಸ್ಟ್ ಚಾರ್ಜರ್: ಬಿಡುಗಡೆ ಆಗಿದೆ ಹಾನರ್ ಕಂಪನಿಯ ಹೊಸ ಟ್ಯಾಬ್ಲೆಟ್ 9
ಇದು ಐಫೋನ್ 14 ಸರಣಿಯ ಮುಖ್ಯ ಆವೃತ್ತಿಯಾಗಿದೆ. ಪ್ರೊಗೆ ಹೋಲಿಸಿದರೆ ಈ ಫೋನ್ ಬೃಹತ್ ಬ್ಯಾಟರಿ ಮತ್ತು ಪ್ರದರ್ಶನವನ್ನು ಹೊಂದಿದೆ. ಇತರ ಮಾದರಿಗಳಿಗೆ ಹೋಲಿಸಿದರೆ ನಾವು ಐಫೋನ್ 14 ಪ್ಲಸ್‌ನಲ್ಲಿ ಅತ್ಯುತ್ತಮ ಬ್ಯಾಟರಿ ಅವಧಿಯನ್ನು ಕಾಣಬಹುದು. ಹೊಸ ಐಫೋನ್ 15 ಅನ್ನು ಖರೀದಿಸಲು ಬಯಸುವ ಜನರು 77,900 ರೂ. ನೀಡಬೇಕು.
ಸ್ಯಾಮ್ಸಂಗ್ ಗ್ಯಾಲಕ್ಸಿ F14 5G ಸಹ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ರೂ. 11,990 ಗೆ ಖರೀದಿಸಬಹುದು. ಇದರ ಮೂಲಬೆಲೆ 12,990 ಇದೆ. ಫ್ಲಿಪ್‌ಕಾರ್ಟ್ ವಿಂಟರ್ ಫೆಸ್ಟ್ ಮಾರಾಟದ ಸಮಯದಲ್ಲಿ ಮಧ್ಯಮ ಶ್ರೇಣಿಯ ಮೋಟೋರೊಲಾ ಎಡ್ಜ್ 40 ನಿಯೋ ರೂ. 22,999 ಕ್ಕೆ ಲಭ್ಯವಿದೆ. ವಿವೋ T2 5G ಅನ್ನು ರೂ. 16,999 ಕ್ಕೆ ಖರೀದಿಸಬಹುದು.
ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರು ಇದನ್ನು 21,999 ರೂ. ಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಅನ್ನು ರೂ. 18,499 ಕ್ಕೆ ಮಾರಾಟ ಮಾಡುತ್ತಿದೆ. ಪೋಕೋ M6 ಪ್ರೊ 5G ರೂ. 10,999 ಆರಂಭಿಕ ಬೆಲೆಯೊಂದಿಗೆ ಲಭ್ಯವಿದೆ. ಪಿಕ್ಸೆಲ್ 7a ಮತ್ತು ಪೋಕೋ X5 ಪ್ರೊ ಕ್ರಮವಾಗಿ ರೂ. 38,999 ಮತ್ತು ರೂ. 16,999 ರ ರಿಯಾಯಿತಿ ಬೆಲೆಯಲ್ಲಿ ಮಾರಾಟ ಕಾಣುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:25 pm, Tue, 26 December 23