ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ಸಂಗತಿ

Interesting fact: ಜಗತ್ತಿನಲ್ಲಿ ತಯಾರಿಸಿದ ಅಥವಾ ಮಾರಾಟವಾದ ಎಲ್ಲಾ ಟಿವಿ ಸೆಟ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಹಾಗೆಯೆ ಎಸಿ ಬಿಳಿ ಬಣ್ಣಗಳಲ್ಲಿ ಮಾತ್ರ ಇರುತ್ತದೆ. ಇದರ ಹಿಂದಿನ ಕಾರಣ ಏನು ಗೊತ್ತಾ..?. ಇದರ ಹಿಂದೆ ಯಾವುದೇ ನಿರ್ದಿಷ್ಟ ವೈಜ್ಞಾನಿಕ ಕಾರಣವಿಲ್ಲ. ಆದರೆ ಒಂದು ಸರಳ ತರ್ಕವಿದೆ. ಅದೇನು?, ಇಲ್ಲಿದೆ ನೋಡಿ.

ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ಸಂಗತಿ
TV and AC
Follow us
Vinay Bhat
|

Updated on:Dec 25, 2023 | 2:04 PM

ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ಟಿವಿ (TV) ಮತ್ತು ಎಸಿ ಇಲ್ಲದೆ ಬದುಕುವುದು ತುಂಬಾ ಕಷ್ಟ. ಮನೆಯ ಹಿರಿಯರಿಗೆ ಟಿವಿಯಲ್ಲಿ ಸೀರಿಯಲ್ ಇಲ್ಲದೆ ದಿನ ಕಳೆಯಲು ಸಾಧ್ಯವೇ ಇಲ್ಲ. ಹಾಗೆಯೆ ಬೇಸಿಗೆಯಲ್ಲಿ ತುಂಬಾ ಬಿಸಿಲಿರುತ್ತದೆ. ಹೀಗಾಗಿ ಇಂದು ಹೆಚ್ಚಿನ ಜನರ ಮನೆಯಲ್ಲಿ ಎಸಿ ಇದೆ. ಟಿವಿ ಬಗ್ಗೆ ಮಾತನಾಡಿದರೆ, ಇಲ್ಲಿಯವರೆಗೆ ಜಗತ್ತಿನಲ್ಲಿ ತಯಾರಿಸಿದ ಅಥವಾ ಮಾರಾಟವಾದ ಎಲ್ಲಾ ಟಿವಿ ಸೆಟ್‌ಗಳು ಕಪ್ಪು ಬಣ್ಣವನ್ನು ಹೊಂದಿವೆ. ಹಸಿರು, ಹಳದಿ, ಕೆಂಪು ಅಥವಾ ನೀಲಿ ಬಣ್ಣದ ಟಿವಿ ಸೆಟ್ ಇರುವುದಿಲ್ಲ. ಹಾಗೆಯೆ ಎಸಿ ಬಿಳಿ ಬಣ್ಣಗಳಲ್ಲಿ ಮಾತ್ರ ಇರುತ್ತದೆ. ಆದರೆ, ಇದರ ಹಿಂದಿನ ಕಾರಣ ಏನು ಗೊತ್ತಾ..?.

ಇದರ ಹಿಂದೆ ಯಾವುದೇ ನಿರ್ದಿಷ್ಟ ವೈಜ್ಞಾನಿಕ ಕಾರಣವಿಲ್ಲ. ಆದರೆ ಒಂದು ಸರಳ ತರ್ಕವಿದೆ. ಅದಕ್ಕಾಗಿಯೇ ಟಿವಿ ಕಪ್ಪು ಬಣ್ಣ ಹೊಂದಿದೆ. ಟಿವಿ ಎಂದ ಮೇಲೆ ಅದು ಬಲವಾದ ಬಾಡಿಯನ್ನು ಹೊಂದಿರುವುದು ಬಹಳ ಮುಖ್ಯ. ಟಿವಿ ಪ್ಲೇ ಆಗುವಾಗ ಅದು ದೊಡ್ಡ ಶಬ್ಧವನ್ನು ಹೊರಹಾಕುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಟಿವಿ ಬಾಡಿ ದುರ್ಬಲವಾಗಿದ್ದರೆ ಅದು ಮುರಿಯುವ ಸಾಧ್ಯತೆ ಇರುತ್ತದೆ.

ಅಂತೆಯೆ ನೀವು ಕಾರಿನ ಟೈರ್‌ಗಳ ಕಪ್ಪು ಬಣ್ಣದಲ್ಲಿ ಇರುವುದು ಗಮನಿಸಿರಬಹುದು. ಮೊದಲಿಗೆ ಟೈರ್‌ಗಳನ್ನು ತಯಾರಿಸಿದಾಗ ಅವು ಬಿಳಿಯಾಗಿದ್ದವು. ಆಗ ವಾಹನದ ತೂಕವನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ. ಅವುಗಳನ್ನು ಬಲಪಡಿಸಲು ಕಪ್ಪು ಇಂಗಾಲವನ್ನು ಬಳಸಲಾಯಿತು. ಟಿವಿಯ ವಿಷಯವೂ ಅದೇ. ಅದರ ತಯಾರಿಕೆಯ ಸಮಯದಲ್ಲಿ ಟಿವಿ ಬಾಡಿಗೆ ಕಪ್ಪು ಇಂಗಾಲವನ್ನು ಬೆರೆಸಿ ಅದನ್ನು ಬಲಪಡಿಸಲಾಗುತ್ತದೆ.

ಇದನ್ನೂ ಓದಿ
Image
8,300mAh ಬ್ಯಾಟರಿ, 35W ಫಾಸ್ಟ್ ಚಾರ್ಜರ್: ಬಿಡುಗಡೆ ಆಗಿದೆ ಹಾನರ್ ಕಂಪನಿಯ
Image
ಬಜೆಟ್ ಬೆಲೆಯ ಬೆಸ್ಟ್ 5G ಸ್ಮಾರ್ಟ್‌ಫೋನ್ ಒಪ್ಪೋ A59 5G ಮಾರಾಟ ಇಂದು ಆರಂಭ
Image
ಭಾರತಕ್ಕೆ ಬರುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G
Image
ಹೊಸ ವರ್ಷಕ್ಕೆ ಹೊಸ ಫೋನ್: ಜನವರಿಯಲ್ಲಿ ಬರುತ್ತಿದೆ ಈ ಸ್ಮಾರ್ಟ್​ಫೋನ್ಸ್

ಹೊಸ ವರ್ಷ 2024ಕ್ಕೆ ಜಿಯೋದಿಂದ ಬಂಪರ್ ಆಫರ್: ಪ್ರಿಪೇಯ್ಡ್ ಬಳಕೆದಾರರು ಫುಲ್ ಖುಷ್

ಎಸಿ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಎಸಿಗಳು ಲಭ್ಯವಿದೆ. ಸ್ಪ್ಲಿಟ್ ಎಸಿ, ವಿಂಡೋ ಎಸಿ, ಪೋರ್ಟಬಲ್ ಎಸಿ ಹೀಗೆ ಅನೇಕ ರೀತಿಯದ್ದಿದೆ. ಈ ಎಲ್ಲಾ ರೀತಿಯ ಎಸಿಗಳು ಹೆಚ್ಚಾಗಿ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಕಚೇರಿ ಮತ್ತು ಮನೆಯಲ್ಲಿ ನಾವು ಹೆಚ್ಚಾಗಿ ಬಿಳಿ ಬಣ್ಣದ ಎಸಿಯನ್ನು ನೋಡುತ್ತೇವೆ. ಏಕೆಂದರೆ ಬಿಳಿ ಬಣ್ಣವು ಕಡಿಮೆ ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತದೆ. ಇದರರ್ಥ ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೆಚ್ಚು ಆಕರ್ಷಿಸುವುದಿಲ್ಲ. ಈ ಕಾರಣದಿಂದಾಗಿ ಬಿಳಿ ಬಣ್ಣದಿಂದ ಕೂಡಿರುತ್ತದೆ.

ಬೇಸಿಗೆಯಲ್ಲಿ ಸೂರ್ಯನ ಕಿರಣಗಳು ಹೆಚ್ಚು ಪರಿಣಾಮಕಾರಿ. ಈ ಕಿರಣಗಳು ಬಿಳಿ ಭಾಗದ ಕಡೆಗೆ ಕಡಿಮೆ ಹೀರಲ್ಪಡುತ್ತವೆ. ಬಿಳಿ ಬಣ್ಣ ಸೂರ್ಯನ ಬೆಳಕಿನಿಂದ ಎಸಿ ಅಧಿಕ ಬಿಸಿಯಾಗುವುದನ್ನು ತಡೆಯುತ್ತವೆ. ಬೇಸಿಗೆಯ ತಾಪವನ್ನು ತಣಿಸಲು ನಾವು ಬಿಳಿ ಬಟ್ಟೆಗಳನ್ನು ಧರಿಸುವುದು ಅದೇ ಕಾರಣಕ್ಕಾಗಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Mon, 25 December 23