Air Conditioner: ಮಳೆಗಾಲದಲ್ಲಿ ಎಸಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ: ಇಲ್ಲಿದೆ ಟಾಪ್ 5 ಸಲಹೆಗಳು
ಮಳೆಗಾಲದಲ್ಲಿ ನಿಮ್ಮ ಹವಾನಿಯಂತ್ರಣವನ್ನು ಸುಮಾರು 24-26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆನ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಈ ಕೆಳಗಿನ ಸಲಹೆಯನ್ನು ಪಾಲಿಸುವುದು ಕೂಡ ಮುಖ್ಯ.
ಮಳೆಗಾಲ (Rain) ಆರಂಭವಾಗುತ್ತಿದ್ದಂತೆ ಬೇಸಿಗೆಯಿಂದ ಮುಕ್ತಿ ಸಿಗುತ್ತದೆ. ಸೆಕೆಗಾಲದಲ್ಲಿ ಸರಾಗವಾಗಿ ಎಸಿಯನ್ನು ಬಳಸಿದವರು ಮಳೆಗಾಲದಲ್ಲಿ ಅಷ್ಟೊಂದು ಬಳಸುವುದಿಲ್ಲ. ಕೆಲವರು ಅದರ ಹತ್ತಿರ ಕೂಡ ಸುಳಿಯುವುದಿಲ್ಲ. ಆದರೆ, ಮಳೆಗಾಲದಲ್ಲಿ ಕೂಡ ಎಸಿ (Air Conditioner) ಆರೈಕೆಯನ್ನು ಸರಿಯಾಗಿ ಮಾಡದಿದ್ದಲ್ಲಿ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ನಿಮ್ಮ ಕೊಠಡಿಗಳನ್ನು ತೇವಾಂಶದಿಂದ ಮುಕ್ತವಾಗಿಡಲು ಮತ್ತು ತಂಪಾಗಿರಿಸಲು ಸೂಕ್ತವಾದ ತಾಪಮಾನದಲ್ಲಿ AC ಯನ್ನು ಬಳಸಬೇಕು. ನಿಮ್ಮ ಹವಾನಿಯಂತ್ರಣವನ್ನು ಸುಮಾರು 24-26 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಆನ್ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಇದರ ಜೊತೆಗೆ ಈ ಕೆಳಗಿನ ಸಲಹೆಯನ್ನು ಪಾಲಿಸುವುದು ಕೂಡ ಮುಖ್ಯ.
ಸರಿಯಾದ ಮೋಡ್ ಆಯ್ಕೆ ಮಾಡಿ: ಮಳೆಗಾಲದಲ್ಲಿ ಬೀಸುವ ಗಾಳಿ ಹೆಚ್ಚು ತಂಪಾಗಿರುತ್ತದೆ. ಹೀಗಾಗಿ ಎಸಿ ನಿಯಂತ್ರಿಸಲು ನೀವು ಡ್ರೈ ಮೋಡ್ ಅನ್ನು ಬಳಸಬೇಕು. ಇದಲ್ಲದೆ, ಕೂಲ್, ಹೀಟ್ ಮತ್ತು ಫ್ಯಾನ್‌ನಂತಹ ಹಲವಾರು ಆಯ್ಕೆಗಳಿರುತ್ತದೆ. ಇವುಗಳನ್ನು ಕೋಣೆಯಲ್ಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಬಳಸಬೇಕು.
ಫಿಲ್ಟರ್‌ಗಳನ್ನು ಸ್ವಚ್ಚಗೊಳಿಸಿ: ಯಾವುದೇ ಸೀಸನ್ ಇರಲಿ, ಫಿಲ್ಟರ್‌ಗಳನ್ನು ನಿಯಮಿತವಾಗಿ ಸ್ವಚ್ಚಗೊಳಿಸುತ್ತ ಇರಬೇಕು. ನೀವು ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ಇದನ್ನು ಪರಿಶೀಲಿಸಬೇಕು. ಹೀಗೆ ಮಾಡುವುದರಿಂದ ಎಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.
Jio Bharat 4G: ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಪರಿಚಯಿಸಿದ ರಿಲಯನ್ಸ್
ಫ್ಯಾನ್ ಬಳಸಿ: ಎಸಿ ಜೊತೆಗೆ, ನಿಮ್ಮ ಸೀಲಿಂಗ್ ಫ್ಯಾನ್ ಅನ್ನು ಬಳಸಿದರೆ ಅದು ಇಡೀ ಕೋಣೆಯಲ್ಲಿನ ಬಿಸಿ ಗಾಳಿಯನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಮತ್ತು ಬೇಗನೆ ತಂಪಾಗಿಸುತ್ತದೆ. ಅಲ್ಲದೆ, ಇದು ಎಸಿಯ ಹೊರಾಂಗಣ ಘಟಕದ ಮೇಲೆ ಕಡಿಮೆ ಒತ್ತಡವನ್ನು ಬೀರುತ್ತದೆ.
ಎಸಿ ಪಕ್ಕದಲ್ಲೇ ಎಲೆಕ್ಟ್ರಾನಿಕ್ ಉಪಕರಣವನ್ನು ಇಡಬಾರದು: ಎಸಿ ಬಳಿ ಯಾವುದೇ ಬಿಸಿಯನ್ನು ಉತ್ಪಾದಿಸುವ ಎಲೆಕ್ಟ್ರಾನಿಕ್ ಅಥವಾ ಉಪಕರಣವನ್ನು ಇಡಬಾರದು ಎಂದು ಅನೇಕರಿಗೆ ತಿಳಿದಿಲ್ಲ. ಎಸಿ ಬಳಿ ಎಲ್ಇಡಿ ಟಿವಿ, ಕಂಪ್ಯೂಟರ್ ನಂತಹ ಬಿಸಿ ಆಗುವ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಮತ್ತು ವಿದ್ಯುತ್ ಮೂಲಕ ಕೆಲಸ ಮಾಡುವ ಉಪಕರಣಗಳನ್ನು ಇಡಬೇಡಿ.
ಇನ್ನು ಎಸಿ ಏರ್ ಫಿಲ್ಟರ್ ಅನ್ನು ಬದಲಾಯಿಸುವುದು ಸಹ ಬಹಳ ಮುಖ್ಯ. ಅದನ್ನು ಬದಲಾಯಿಸದಿದ್ದರೆ, ಎಸಿ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಅನಿಲ ಸೋರಿಕೆಯಾಗುತ್ತದೆ. ಇದರಿಂದ ಪೈಪ್ಗಳು ಹಾಳಾಗಬಹುದು. ಎಸಿಯ ಒಳಚರಂಡಿ ವ್ಯವಸ್ಥೆಯನ್ನು ಪರಿಶೀಲಿಸದಿದ್ದರೆ ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತೀರಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ