Xiaomi anniversary sale: ಶೇ. 75 ರಷ್ಟು ಡಿಸ್ಕೌಂಟ್: ಶವೋಮಿ ಆನಿವರ್ಸರಿ ಸೇಲ್​ನಲ್ಲಿ ಹಿಂದೆಂದೂ ಕಾಣದ ರಿಯಾಯಿತಿ

ಶವೋಮಿ 9 ನೇ ವಾರ್ಷಿಕೋತ್ಸವ ಸೇಲ್​ನಲ್ಲಿ 'ಲಕ್ಕಿ 9 ಶಾಪರ್ಸ್ ಕಾಂಟೆಸ್ಟ್' ಇದೆ. ಇದರಲ್ಲಿ ಒಂಬತ್ತು ಗ್ರಾಹಕರು ತಮ್ಮ ಆರ್ಡರ್ ಮೌಲ್ಯದ ಶೇ. 100 ರಷ್ಟನ್ನು ಮರಳಿ ಪಡೆಯಬಹುದು.

Xiaomi anniversary sale: ಶೇ. 75 ರಷ್ಟು ಡಿಸ್ಕೌಂಟ್: ಶವೋಮಿ ಆನಿವರ್ಸರಿ ಸೇಲ್​ನಲ್ಲಿ ಹಿಂದೆಂದೂ ಕಾಣದ ರಿಯಾಯಿತಿ
Xiaomi anniversary sale
Follow us
Vinay Bhat
|

Updated on: Jul 06, 2023 | 12:45 PM

ಚೀನಾ ಮೂಲದ ಪ್ರಸಿದ್ಧ ಕಂಪನಿ ಶವೋಮಿ (Xiaomi) ಭಾರತದಲ್ಲಿ ತನ್ನ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಇದರ ಭಾಗವಾಗಿ, ಕಂಪನಿ ಶವೋಮಿ 9 ನೇ ವಾರ್ಷಿಕೋತ್ಸವ (Xiaomi anniversary sale) ಎಂಬ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ. ಇಂದು ಈ ಸೇಲ್ ಲೈವ್ ಆಗಿದ್ದು ಜುಲೈ 10 ಒಟ್ಟು ಆರು ದಿನಗಳ ವರೆಗೆ ನಡೆಯಲಿದೆ. ಇದರಲ್ಲಿ ಸ್ಮಾರ್ಟ್​ಫೋನ್‌ಗಳು (Smartphones), ಟಿವಿಗಳು ಮತ್ತು ಸ್ಮಾರ್ಟ್ ಹೋಮ್ ಸಾಧನಗಳು ಸೇರಿದಂತೆ ಅನೇಕ ಶವೋಮಿ ಪ್ರಾಡಕ್ಟ್ ಮೇಲೆ ಬರೋಬ್ಬರಿ ಶೇ. 75 ರಷ್ಟು ರಿಯಾಯಿತಿಗಳನ್ನು ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ‘Xiaomi ಟರ್ನ್ಸ್ 9’ ಮಾರಾಟವು ಖರೀದಿದಾರರಿಗೆ ಕೆಲವು ಆಡ್-ಆನ್ ಬೋನಸ್‌ಗಳನ್ನು ಸಹ ನೀಡುತ್ತದೆ.

ವಿಶೇಷವಾಗಿ ಈ ಸೇಲ್​ನಲ್ಲಿ ‘ಲಕ್ಕಿ 9 ಶಾಪರ್ಸ್ ಕಾಂಟೆಸ್ಟ್’ ಇದೆ. ಇದರಲ್ಲಿ ಒಂಬತ್ತು ಗ್ರಾಹಕರು ತಮ್ಮ ಆರ್ಡರ್ ಮೌಲ್ಯದ ಶೇ. 100 ರಷ್ಟನ್ನು ಮರಳಿ ಪಡೆಯಬಹುದು. ಪ್ರತಿ ದಿನ ಮಧ್ಯಾಹ್ನ 12 ಗಂಟೆಯಿಂದ ಒಂದು ಗಂಟೆಯ ವರೆಗೆ ಡೈಲಿ 9 ಸ್ಟೋರ್ ಸೇಲ್ ಲೈವ್ ಆಗಿರುತ್ತದೆ. ಇದರಲ್ಲಿ ಗ್ರಾಹಕರು ಆಯ್ದ ಸಾಧನಗಳ ಮೇಲೆ ಆಕರ್ಷಕ ಆಫರ್ ಪಡೆಯಬಹುದು. ಶವೋಮಿಯ ಕೇನ್ ಪ್ಲಾನ್ಸ್, ಎಂಐ ಎಕ್ಸ್ಟೆಂಡೆಡ್ ವಾರಂಟಿ, ಎಂಐ ಸ್ಕ್ರೀನ್ ಪ್ರೊಟೆಕ್ಟ್ ಮತ್ತು ಎಂಐ ಕಂಪ್ಲೀಟ್ ಪ್ರೊಟೆಕ್ಟ್ ಮೇಲೆ ಶೇ. 25 ರಿಯಾಯಿತಿಯನ್ನು ಸಹ ನೀಡುತ್ತಿದೆ. ಹೆಚ್ಚುವರಿಯಾಗಿ, ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು 8000 ರೂ. ವರೆಗಿನ ಹೆಚ್ಚುವರಿ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಭರ್ಜರಿ ಡಿಸ್ಕೌಂಟ್ ಪಡೆದಿರುವ ಕೆಲ ಪ್ರಾಡಕ್ಟ್​ಗಳ ಮಾಹಿತಿ ಇಲ್ಲಿದೆ.

WhatsApp Ban: ಭಾರತದ ನಿಯಮ ಉಲ್ಲಂಘಿಸಿದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬಂದ್

ಇದನ್ನೂ ಓದಿ
Image
Threads: ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಭಾರತದಲ್ಲಿ ಬಿಡುಗಡೆ: 2 ಗಂಟೆಗಳಲ್ಲಿ 2 ಮಿಲಿಯನ್ ಡೌನ್​ಲೋಡ್
Image
OnePlus Nord 3: ಭಾರತದಲ್ಲಿ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
Image
Jio Bharat 4G: ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಪರಿಚಯಿಸಿದ ರಿಲಯನ್ಸ್
Image
OnePlus Nord 3: ಮತ್ತೊಂದು ಸ್ಟೈಲಿಶ್ ಫೋನ್ ತರುತ್ತಿದೆ ಒನ್​ಪ್ಲಸ್ ನಾರ್ಡ್
  • ಶವೋಮಿ ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಶವೋಮಿ 13 ಪ್ರೊ ಅನ್ನು ಭಾರತದಲ್ಲಿ 89,999 ರೂ. ಗೆ ಅನಾವರಣ ಮಾಡಿತ್ತು. ಆದರೀಗ ಈ ಫೋನ್ ಮೇಲೆ 20,000 ರೂ. ಡಿಸ್ಕೌಂಟ್ ಘೋಷಿಸಲಾಗಿದ್ದು 69,999 ರೂ. ಗೆ ಖರೀದಿಸಬಹುದು.
  • ಅಂತೆಯೆ ಶವೋಮಿ 12 ಪ್ರೊ ಕಳೆದ ವರ್ಷ 79,999 ರೂ. ರಿಲೀಸ್ ಆಗಿತ್ತು. ಇದೀಗ 39,999 ರೂ. ಗೆ ಖರೀದಿಸಬಹುದು.
  • ರೆಡ್ಮಿ ನೋಡ್ 12 ಪ್ರೊ 5G ಸ್ಮಾರ್ಟ್​ಫೋನ್ ಈ ವರ್ಷದ ಆರಂಭದಲ್ಲಿ 27,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಆನಿವರ್ಸರಿ ಸೇಲ್​ನಲ್ಲಿ 20,499 ರೂ. ಗಳಿಗೆ ಲಭ್ಯವಿದೆ.
  • 43-ಇಂಚಿನ ಶವೋಮಿ ಸ್ಮಾರ್ಟ್​ TV X Pro ಅನ್ನು 49,999 ರೂ. ಗೆ ಬಿಡುಗಡೆ ಮಾಡಲಾಗಿತ್ತು. ಈಗ ಇದು 18,500 ರೂ. ಫ್ಲಾಟ್ ರಿಯಾಯಿತಿಯ ನಂತರ ರೂ. 31,499 ಕ್ಕೆ ಖರೀದಿಸಬಹುದು.
  • 32-ಇಂಚಿನ ಶವೋಮಿ ಸ್ಮಾರ್ಟ್ ಟಿವಿ 5A 24,999 ರೂಗಳಲ್ಲಿ ಬಿಡುಗಡೆಯಾಗಿತ್ತು. ಈಗ ಇದರ ಮೇಲೆ 13,750 ರೂ. ರಿಯಾಯಿತಿ ನೀಡಲಾಗಿದೆ. 11,249 ರೂ. ಗೆ ಖರೀದಿಸಬಹುದು.
  • ಶವೋಮಿ Pad 6 ಅನ್ನು ರೂ. 39,999 ಕ್ಕೆ ಬಿಡುಗಡೆ ಮಾಡಲಾಗಿತ್ತು. ಇದೀಗ 15,000 ರೂ. ರಿಯಾಯಿತಿ ಪಡೆದುಕೊಂಡು 24,999 ರೂ. ಗೆ ಸೇಲ್ ಕಾಣುತ್ತಿದೆ.
  • ರೆಡ್ಮಿ ಪ್ಯಾಡ್ 16,000 ರೂಪಾಯಿಗಳ ರಿಯಾಯಿತಿಯಲ್ಲಿ ಲಭ್ಯವಿದೆ. ರೂ. 33,999 ಕ್ಕೆ ಬಿಡುಗಡೆ ಮಾಡಲಾದ ಆಂಡ್ರಾಯ್ಡ್ ಟ್ಯಾಬ್ಲೆಟ್ ಅನ್ನು ರೂ. 17,999 ಕ್ಕೆ ಖರೀದಿಸಬಹುದು. ಅಂತೆಯೆ ಶವೋಮಿ ಗ್ರೂಮಿಂಗ್ ಕಿಟ್ ಪ್ರೊ ಈಗ ರೂ 2,299 ರ ರಿಯಾಯಿತಿಯ ನಂತರ ರೂ 2,700 ಕ್ಕೆ ಮಾರಾಟವಾಗುತ್ತಿದೆ.
  • 14,999 ರೂಗಳಲ್ಲಿ ಬಿಡುಗಡೆಯಾದ ಶವೋಮಿಯ ಸ್ಮಾರ್ಟ್ ಏರ್ ಫ್ರೈಯರ್ ಈಗ ರೂ 9,000 ರಿಯಾಯಿತಿಯಲ್ಲಿ ಲಭ್ಯವಿದೆ. ಏರ್ ಫ್ರೈಯರ್ ಅನ್ನು 5,999 ರೂಗಳಲ್ಲಿ ಖರೀದಿಸಬಹುದು.
  • ರೂ. 39,999 ಕ್ಕೆ ಬಿಡುಗಡೆ ಮಾಡಲಾದ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ಅನ್ನು ರೂ. 14,000 ರಿಯಾಯಿತಿಯ ನಂತರ ರೂ. 25,999 ನಲ್ಲಿ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್