AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Threads: ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಭಾರತದಲ್ಲಿ ಬಿಡುಗಡೆ: 2 ಗಂಟೆಗಳಲ್ಲಿ 2 ಮಿಲಿಯನ್ ಡೌನ್​ಲೋಡ್

ದಿ ವರ್ಜ್ ವರದಿಯ ಪ್ರಕಾರ ಕೇವಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 2 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ನೋಂದಣಿಗೆ ಸಾಕ್ಷಿಯಾಗಿದೆ. ಬಳಕೆದಾರರು ತಮ್ಮ ಇನ್​ಸ್ಟಾಗ್ರಾಮ್ ಆಕೌಂಟ್​ ಮೂಲಕ ಥ್ರೆಡ್ಸ್‌ಗೆ ಲಿಂಕ್ ಮಾಡಬಹುದು.

Threads: ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಭಾರತದಲ್ಲಿ ಬಿಡುಗಡೆ: 2 ಗಂಟೆಗಳಲ್ಲಿ 2 ಮಿಲಿಯನ್ ಡೌನ್​ಲೋಡ್
Threads App
Vinay Bhat
|

Updated on: Jul 06, 2023 | 12:02 PM

Share

ಮೆಟಾ (Meta) ತನ್ನ ಟ್ವಿಟ್ಟರ್ (Twitter) ಪ್ರತಿಸ್ಪರ್ಧಿ ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬುಧವಾರ ಮಧ್ಯರಾತ್ರಿ ಯುಕೆಯಲ್ಲಿ ಥ್ರೆಡ್ಸ್ (Threads) ಅಪ್ಲಿಕೇಶನ್ ಲೈವ್ ಮಾಡಲಾಯಿತು. ಇದೀಗ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಇದು ಕಟ್ಟುನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ದಿ ವರ್ಜ್ ವರದಿಯ ಪ್ರಕಾರ, ಕೇವಲ ಎರಡು ಗಂಟೆಗಳಲ್ಲಿ ಥ್ರೆಡ್ಸ್ ಅಪ್ಲಿಕೇಶನ್ 2 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ ನೋಂದಣಿಗೆ ಸಾಕ್ಷಿಯಾಗಿದೆ.

ಬಳಕೆದಾರರು ತಮ್ಮ ಇನ್​ಸ್ಟಾಗ್ರಾಮ್ ಆಕೌಂಟ್​ ಮೂಲಕ ಥ್ರೆಡ್ಸ್‌ಗೆ ಲಿಂಕ್ ಮಾಡಬಹುದು. ಇನ್​ಸ್ಟಾದ ಯೂಸರ್‌ ನೇಮ್‌ ಥ್ರೆಡ್ಸ್​ನಲ್ಲೂ ಮುಂದುವರೆಸಬಹುದು. ವಿಶೇಷ ಎಂದರೆ, ಬಳಕೆದಾರರ ಇನ್​ಸ್ಟಾಗ್ರಾಮ್ ಅಕೌಂಟ್​ನಲ್ಲಿ ಬ್ಲೂ ಟಿಕ್ ಇದ್ದರೆ ಅದು ಥ್ರೆಡ್ಸ್​ನಲ್ಲಿ ಕಾಣಿಸಲಿದೆ. ಈ ಆ್ಯಪ್ ಥೇಟ್ ಟ್ವಿಟ್ಟರ್ ರೀತಿಯ ವೈಶಿಷ್ಟ್ಯಗಳೊಂದಿಗೆ ಬಂದಿದೆ. ಉದಾಹರಣೆಗೆ, ಬಳಕೆದಾರರು ಟ್ವಿಟ್ಟರ್​ನಂತೆ ಥ್ರೆಡ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಪ್ರಕಟಿಸಬಹುದು. ಇನ್​ಸ್ಟಾಗ್ರಾಮ್ ಗ್ರಾಹಕರನ್ನು ಆಕರ್ಷಿಸಲು, ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಪೋಸ್ಟ್ ಕೂಡ ಇದರಲ್ಲಿ ಶೇರ್ ಆಗಲಿದೆ.

Amazon Prime Day: ಹೊಸ ಫೋನ್​ ಬಿಡುಗಡೆ ಮತ್ತು ವಿಶೇಷ ಆಫರ್ ನೀಡುವ ಪ್ರೈಮ್ ಡೇ ಸೇಲ್

ಇದನ್ನೂ ಓದಿ
Image
OnePlus Nord 3: ಭಾರತದಲ್ಲಿ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
Image
Jio Bharat 4G: ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಪರಿಚಯಿಸಿದ ರಿಲಯನ್ಸ್
Image
OnePlus Nord 3: ಮತ್ತೊಂದು ಸ್ಟೈಲಿಶ್ ಫೋನ್ ತರುತ್ತಿದೆ ಒನ್​ಪ್ಲಸ್ ನಾರ್ಡ್
Image
WhatsApp Ban: ಭಾರತದ ನಿಯಮ ಉಲ್ಲಂಘಿಸಿದ 65 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬಂದ್

ಥ್ರೆಡ್ಸ್​ ಆ್ಯಪ್ ಟ್ವಿಟರ್‌ನ ಹಳೆಯ ಆವೃತ್ತಿಯನ್ನು ಹೋಲುವಂತಿದೆ. ಪ್ರತಿ ಪೋಸ್ಟ್ 500 ಅಕ್ಷರಗಳವರೆಗೆ ಬರೆಯಬಹುದು. ಲಿಂಕ್‌ಗಳು, ಫೋಟೋಗಳು (ಪ್ರತಿ ಪೋಸ್ಟ್‌ಗೆ ಹತ್ತು ಅಕ್ಷರ), ಮತ್ತು 5 ನಿಮಿಷಗಳ ಉದ್ದದ ವಿಡಿಯೋಗಳನ್ನು ಹಂಚಿಕೊಳ್ಳಬಹುದಾಗಿದೆ. ನಿಮ್ಮ ಥ್ರೆಡ್ಸ್​ ಪೋಸ್ಟ್‌ಗೆ ಯಾರು ಪ್ರತ್ಯುತ್ತರ ನೀಡಬಹುದು ಎಂಬುದನ್ನು ಸಹ ಬಳಕೆದಾರರು ನಿಯಂತ್ರಿಸಬಹುದು. ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ನೀವು ಥ್ರೆಡ್ಸ್​ ಪ್ರೊಫೈಲ್​ನಲ್ಲಿ ಸೆಟ್ಟಿಂಗ್ಸ್ ಬದಲಾಯಿಸಬಹುದಾಗಿದೆ.

ಆದರೆ, ಬಳಕೆದಾರರಿಗೆ ಜಿಫ್ ಫೈಲ್​ಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿಲ್ಲ. ಹಾಗೆಯೆ “ಕ್ಲೋಸ್ ಫ್ರೆಂಡ್ಸ್” ವೈಶಿಷ್ಟ್ಯವಿಲ್ಲ. ಬಹು ಮುಖ್ಯವಾಗಿ, ಥ್ರೆಡ್ಸ್​ನಲ್ಲಿ DM ಆಯ್ಕೆ ನೀಡಲಾಗಿಲ್ಲ. ಈ ಫೀಚರ್​ಗಳೆಲ್ಲ ಮುಂದಿನ ಅಪ್ಡೇಟ್​ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಒಂದುವರೆ ಗಂಟೆಯಲ್ಲಿ 21 ಜನರಿಗೆ ಕಚ್ಚಿ ಗಾಯ ಮಾಡಿದ ಬೀದಿ ನಾಯಿ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ