AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Realme Narzo 60 Pro: 100MP ಕ್ಯಾಮೆರಾ: ಭಾರತದಲ್ಲಿ ಒಂದೇ ದಿನ ಎರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ

Realme Narzo 60: ಭಾರೀ ಕುತೂಹಲ ಕೆರಳಿಸಿದ್ದ ರಿಯಲ್ ಮಿ ನಾರ್ಜೊ 60 5G ಮತ್ತು ನಾರ್ಜೊ 60 ಪ್ರೊ 5G ಸ್ಮಾರ್ಟ್​ಫೋನ್ ಭಾರತದಲ್ಲಿಂದು ಬಿಡುಗಡೆ ಆಗಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

Realme Narzo 60 Pro: 100MP ಕ್ಯಾಮೆರಾ: ಭಾರತದಲ್ಲಿ ಒಂದೇ ದಿನ ಎರಡು ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ರಿಯಲ್ ಮಿ
Narzo 60 and Narzo 60 Pro
Vinay Bhat
|

Updated on:Jul 06, 2023 | 1:53 PM

Share

ಒನ್​ಪ್ಲಸ್ (OnePlus) ಕಂಪನಿ ಬುಧವಾರ ಭಾರತದಲ್ಲಿ ಒನ್​ಪ್ಲಸ್ ನಾರ್ಡ್ 3 ಮತ್ತು ನಾರ್ಡ್ CE 3 ಎಂಬ ಎರಡು ಹೊಸ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು ರಿಯಲ್ ಮಿ ಸಂಸ್ಥೆ ತನ್ನ ಬಹುನಿರೀಕ್ಷಿತ ನಾರ್ಜೊ 60 ಸರಣಿ (Realme Narzo 60 Series) ಅಡಿಯಲ್ಲಿ ಎರಡು ಮೊಬೈಲ್ ಅನಾವರಣ ಮಾಡಿದೆ. ಭಾರೀ ಕುತೂಹಲ ಕೆರಳಿಸಿದ್ದ ರಿಯಲ್ ಮಿ ನಾರ್ಜೊ 60 5G ಮತ್ತು ನಾರ್ಜೊ 60 ಪ್ರೊ 5G ಸ್ಮಾರ್ಟ್​ಫೋನ್ (Smartphone) ಭಾರತದಲ್ಲಿಂದು ಬಿಡುಗಡೆ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು, ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ವಿಶೇಷ ಎಂದರೆ ನಾರ್ಜೊ 6 ಪ್ರೊ ಫೋನ್​ನಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಹಾಗಾದರೆ ಈ ಫೋನುಗಳ ಬೆಲೆ, ಫೀಚರ್ಸ್ ಬಗ್ಗೆ ತಿಳಿದುಕೊಳ್ಳೋಣ.

ರಿಯಲ್ ಮಿ ನಾರ್ಜೊ 60, ನಾರ್ಜೊ 60 ಪ್ರೊ ಬೆಲೆ:

ಈ ಎರಡು ಸ್ಮಾರ್ಟ್​ಫೋನ್​ಗಳು ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಈ ಪೈಕಿ ರಿಯಲ್ ಮಿ ನಾರ್ಜೊ 60 ಫೋನಿನ 8GB RAM + 128GB ವೇರಿಯೆಂಟ್ ಬೆಲೆ 17,999 ರೂ. ಆಗಿದೆ. ಅಂತೆಯೆ 8GB RAM + 256GB ಸ್ಟೋರೇಜ್ ಆಯ್ಕೆಗೆ 19,999 ರೂ. ನಿಗದಿ ಮಾಡಲಾಗಿದೆ. ನಾರ್ಜೊ 60 ಪ್ರೊ ಫೋನಿನ 8GB RAM + 128GB ವೇರಿಯೆಂಟ್​ಗೆ 23,999 ರೂ. ಹಾಗೂ 12GB RAM + ಬರೋಬ್ಬರಿ 1TB ಸ್ಟೋರೇಜ್ ಆಯ್ಕೆಗೆ 29,999 ರೂ. ಇದೆ. ಈ ಎರಡೂ ಸ್ಮಾರ್ಟ್​ಫೋನ್​ಗಳು ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಮಾರಾಟ ಕಾಣಲಿದೆ.

OnePlus Nord 3: ಮತ್ತೊಂದು ಸ್ಟೈಲಿಶ್ ಫೋನ್ ತರುತ್ತಿದೆ ಒನ್​ಪ್ಲಸ್ ನಾರ್ಡ್

ಇದನ್ನೂ ಓದಿ
Image
Xiaomi anniversary sale: ಶೇ. 75 ರಷ್ಟು ಡಿಸ್ಕೌಂಟ್: ಶವೋಮಿ ಆನಿವರ್ಸರಿ ಸೇಲ್​ನಲ್ಲಿ ಹಿಂದೆಂದೂ ಕಾಣದ ರಿಯಾಯಿತಿ
Image
Threads: ಟ್ವಿಟ್ಟರ್ ಪ್ರತಿಸ್ಪರ್ಧಿ ಥ್ರೆಡ್ಸ್ ಭಾರತದಲ್ಲಿ ಬಿಡುಗಡೆ: 2 ಗಂಟೆಗಳಲ್ಲಿ 2 ಮಿಲಿಯನ್ ಡೌನ್​ಲೋಡ್
Image
OnePlus Nord 3: ಭಾರತದಲ್ಲಿ ಬಹುನಿರೀಕ್ಷಿತ ಒನ್​ಪ್ಲಸ್ ನಾರ್ಡ್ 3, ನಾರ್ಡ್ CE 3 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
Image
Jio Bharat 4G: ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಪರಿಚಯಿಸಿದ ರಿಲಯನ್ಸ್

ರಿಯಲ್ ಮಿ ನಾರ್ಜೊ 60 5G ಫೀಚರ್ಸ್:

ಈ ಸ್ಮಾರ್ಟ್​ಫೋನ್ 6.43-ಇಂಚಿನ FHD+ AMOLED ಡಿಸ್ ಪ್ಲೇ ಹೊಂದಿದ್ದು, 90Hz ರಿಫ್ರೆಶ್​ರೇಟ್​ನಲ್ಲಿ ಕಾಣಿಸಿಕೊಂಡಿದೆ. ಮೊಬೈಲ್ 183g ತೂಕವಿದ್ದು, 7.98mm ದಪ್ಪವನ್ನು ಹೊಂದಿದೆ. ಕಾರ್ಯಕ್ಷಮತೆಗಾಗಿ, ಇದು ಮೀಡಿಯಾಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್ ಅನ್ನು ಹೊಂದಿದೆ. Android 13 ಆಧಾರಿತ Realme UI 4.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 33W ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಹೊಂದಿದೆ. 64MP + 2MP ಬ್ಯಾಕ್ ಕ್ಯಾಮೆರಾ ಸೆಟಪ್ ಮತ್ತು 8MP ಫ್ರಂಟ್ ಲೆನ್ಸ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿವೆ.

ರಿಯಲ್ ಮಿ ನಾರ್ಜೊ 60 ಪ್ರೊ 5G ಫೀಚರ್ಸ್:

60 ಪ್ರೊ ಫೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ FHD+ AMOLED ಡಿಸ್ ಪ್ಲೇ ಹೊಂದಿದೆ. ಇದು 183g ತೂಕವಿದ್ದು 8.2mm ದಪ್ಪವಾಗಿದೆ. ಕಾರ್ಯಕ್ಷಮತೆಗಾಗಿ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್ ಅನ್ನು ಹೊಂದಿದೆ. ಮೆಮೊರಿಯ ಕುರಿತು ನೋಡುವುದಾದರೆ, ಇದು 12 LPDDR4X RAM ವರೆಗೆ ಮತ್ತು 1TB UFS 2.2 ಸಂಗ್ರಹಣೆಯನ್ನು ಹೊಂದಿದೆ. ಆಂಡ್ರಾಯ್ಡ್ 13 ನಲ್ಲಿ Realme UI 4.0 ಮೇಲೆ ಕಾರ್ಯನಿರ್ವಹಿಸುತ್ತದೆ.

ಇದು 67W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಆಕರ್ಷಕವಾದ 100MP ಪ್ರಾಥಮಿಕ OIS ಲೆನ್ಸ್ ಅನ್ನು ಹೊಂದಿದೆ. ಜೊತೆಗೆ 8MP ಅಲ್ಟ್ರಾ-ವೈಡ್ ಮತ್ತು 2MP ತೃತೀಯ ಕ್ಯಾಮೆರಾವನ್ನು ನೀಡಲಾಗಿದೆ. ಮುಂಭಾಗದಲ್ಲಿ, ಪಂಚ್ ಹೋಲ್ ಒಳಗೆ 16MP ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:52 pm, Thu, 6 July 23

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು