ಟೆಕ್ನೋದಿಂದ ಮಹತ್ವದ ಘೋಷಣೆ: ಹೊಸ ವರ್ಷಕ್ಕೆ ಬರುತ್ತಿದೆ ಬಜೆಟ್ ಬೆಲೆಯ 108MP ಕ್ಯಾಮೆರಾ ಫೋನ್
Tecno Spark 20 Pro Plus Launch Date: ಟೆಕ್ನೋ ಸ್ಪಾರ್ಕ್ 20 ಪ್ರೊ+ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ. ಕಂಪನಿಯು ಟಾಪ್-ಆಫ್-ಲೈನ್ ಪ್ರೊ + ಮಾದರಿಯ ಕೆಲವು ಪ್ರಮುಖ ಫೀಚರ್ಸ್ ಅನ್ನು ಸಹ ಘೋಷಿಸಿದೆ. ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಇದೆ.
ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿಯಾದ ಟೆಕ್ನೋ ಹೊಸ ವರ್ಷ 2024ಕ್ಕೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಫೋನ್ ಒಂದನ್ನು ತರುತ್ತಿದೆ. ಮೊನ್ನೆಯಷ್ಟೇ ಟೆಕ್ನೋ ಸ್ಪಾರ್ಕ್ 20 ಪ್ರೊ ಹೆಸರಿನ ಫೋನ್ ಬಿಡುಗಡೆ ಮಾಡಿದ್ದ ಟೆಕ್ನೋ ಕಂಪನಿ ಇದೀಗ ಈ ಫೋನಿನ ಮುಂದುವರಿದ ಭಾಗವಾಗಿ ಟೆಕ್ನೋ ಸ್ಪಾರ್ಕ್ 20 ಪ್ರೊ ಪ್ಲಸ್ ಫೋನ್ ಅನ್ನು ಅನಾವರಣ ಮಾಡಲು ಮುಂದಾಗಿದೆ. ಮುಂದಿನ ಜನವರಿಯಲ್ಲಿ ಈ ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಇದರಲ್ಲಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ಇದೆ.
ಟೆಕ್ನೋ ಸ್ಪಾರ್ಕ್ 20 ಪ್ರೊ+ ಅನ್ನು 2024 ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಅಧಿಕೃತವಾಗಿ ಪ್ರಕಟಿಸಿದೆ. ಕಂಪನಿಯು ಟಾಪ್-ಆಫ್-ಲೈನ್ ಪ್ರೊ + ಮಾದರಿಯ ಕೆಲವು ಪ್ರಮುಖ ಫೀಚರ್ಸ್ ಅನ್ನು ಸಹ ಘೋಷಿಸಿದೆ. ಪತ್ರಿಕಾ ಪ್ರಕಟಣೆಯಲ್ಲಿ, ಟೆಕ್ನೋ ಸ್ಪಾರ್ಕ್ 20 ಪ್ರೊನಲ್ಲಿ ಪ್ಯಾಕ್ ಮಾಡಲಾದ ಅದೇ ಚಿಪ್‌ಸೆಟ್ ಮೀಡಿಯಾ ಟೆಕ್ ಹೆಲಿಯೊ ಜಿ 99 SoC ಯಿಂದ ಈ ಫೋನ್ ಚಾಲಿತವಾಗಲಿದೆ ಎಂದು ಕಂಪನಿಯು ದೃಢಪಡಿಸಿದೆ. ಮುಂಬರುವ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14-ಆಧಾರಿತ HiOS ಸ್ಕಿನ್‌ನೊಂದಿಗೆ ರನ್ ಆಗುತ್ತದೆ.
ಟೆಕ್ನೋ ಸ್ಪಾರ್ಕ್ 20 ಪ್ರೊ + 120Hz AMOLED ಡಿಸ್‌ಪ್ಲೇ, 1,000 nits ನ ಗರಿಷ್ಠ ಬ್ರೈಟ್ನೆಸ್ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕವನ್ನು ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ 32-ಮೆಗಾಪಿಕ್ಸೆಲ್ ಸಂವೇದಕವನ್ನು ಅಳವಡಿಸಲಾಗಿದೆ. ಇದು ಟೆಕ್ನೋ ಸ್ಪಾರ್ಕ್ 20 ಪ್ರೊನಲ್ಲಿನ ಕ್ಯಾಮೆರಾಗಳಿಗೆ ಹೋಲುತ್ತದೆ.
ಹೊಸ ವರ್ಷಕ್ಕೆ ಹೊಸ ಫೋನ್: ಜನವರಿಯಲ್ಲಿ ಬರುತ್ತಿದೆ ಪವರ್ಫುಲ್ ಸ್ಮಾರ್ಟ್ಫೋನ್ಸ್
ಈ ಹ್ಯಾಂಡ್ಸೆಟ್ ಹಸಿರು ಬಣ್ಣದ ಲೆದರ್ ಫಿನಿಶ್ ಆಯ್ಕೆಯಲ್ಲಿ ಕಂಡುಬರುತ್ತದೆ. ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹಿಂದಿನ ಪ್ಯಾನೆಲ್‌ನಲ್ಲಿ ಇರಿಸಲಾಗಿದೆ, ಇದು ಪ್ರತ್ಯೇಕ ಕ್ಯಾಮೆರಾ ಸಂವೇದಕಗಳನ್ನು ಹೊಂದಿದೆ. ಮುಂಭಾಗದಲ್ಲಿ, ಟೆಕ್ನೋ ಸ್ಪಾರ್ಕ್ 20 ಪ್ರೊ + ಎರಡು ಬಾಗಿದ ವಿನ್ಯಾಸವನ್ನು ಹೊಂದಿದ್ದು, ಇದು ಕಂಪನಿಯ ಪ್ರಕಾರ ಬಳಕೆದಾರರು ಆರಾಮವಾಗಿ ಫೋನನ್ನು ಹಿಡಿದುಕೊಳ್ಳಬಹುದಂತೆ. ಡಿಸ್ಪ್ಲೇಯು ತೆಳುವಾದ ಬೆಜೆಲ್‌ಗಳು ಮತ್ತು ಮುಂಭಾಗದ ಕ್ಯಾಮೆರಾಕ್ಕಾಗಿ ಡಿಸ್‌ಪ್ಲೇ ಮೇಲ್ಭಾಗದಲ್ಲಿ ಪಂಚ್-ಹೋಲ್ ಸ್ಲಾಟ್ ನೀಡಲಾಗಿದೆ.
ಟೆಕ್ನೋ ಸ್ಪಾರ್ಕ್ 20 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ನ ಬ್ಯಾಟರಿಗೆ ಸಂಬಂಧಿಸಿದಂತೆ, ಇದು 5000 mAh ಬ್ಯಾಟರಿಯೊಂದಿಗೆ 44 ವ್ಯಾಟ್ಸ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕದ ವಿಚಾರಕ್ಕೆ ಬಂದರೆ, ಇದು ಹಾಟ್‌ಸ್ಪಾಟ್, ಬ್ಲೂಟೂತ್, ವೈ-ಫೈ, ಯುಎಸ್‌ಬಿ ಸಿ ಪೋರ್ಟ್, ಹೆಡ್‌ಫೋನ್ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ರೂ. 12,000 ರಿಂದ ರೂ. 15,000 ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Mon, 25 December 23