
ಇಂದಿನ ಜನರಿಗೆ ಎಲ್ಲವೂ ಫ್ರೀ.. ಫ್ರೀ ಇರಬೇಕು. ಎಲ್ಲಿ ಉಚಿತ ಇರುತ್ತದೆ ಅಲ್ಲಿ ಜನ ಮೊದಲು, ಆದರೆ ಈ ಫ್ರೀಯಿಂದ ದೊಡ್ಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಈ ಯುವಕರು ಹೆಚ್ಚು ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಇಂದಿನ ಯುವಕರಿಗೆ ಮೂವಿ ನೋಡುವ ಹುಚ್ಚು ಹೆಚ್ಚು. ಹೊಸ ಹೊಸ ಸಿನಿಮಾ (free movie apps) ಬಂದರೆ ಅದನ್ನು ಥಿಯೇಟರ್ಗಿಂತ ಮೊಬೈಲ್ನಲ್ಲಿ ನೋಡುವವರೇ ಹೆಚ್ಚು. ಅದಕ್ಕಾಗಿ ಬೇರೆ ಬೇರೆ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ವರದಿಗಳ ಪ್ರಕಾರ, ಅನೇಕ ಮೊಬೈಲ್ ಬಳಕೆದಾರರು ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸಲು ಪಿಕಾಶೋನಂತಹ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ ಇದರಿಂದ ವೈಯಕ್ತಿಕ ಡೇಟಾಗಳು ಶೇರ್ ಆಗುತ್ತದೆ ಎಂಬ ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.
ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ದೋಸ್ತ್ I4C ಎಂಬ ಸಂಸ್ಥೆಯು ಉಚಿತ ಚಲನಚಿತ್ರಗಳನ್ನು ನೋಡುವ ಆ್ಯಪ್‌ಗಳು ಅಪಾಯಕಾರಿ ಮತ್ತು ನಿಮ್ಮನ್ನು ಕಾನೂನು ತೊಂದರೆಗೆ ಸಿಲುಕಿಸಬಹುದು ಎಂದು ಎಚ್ಚರಿಸಿದೆ.ಈ ಬಗ್ಗೆ ಸೈಬರ್ ದೋಸ್ತ್ I4C ಎಕ್ಸ್‌ನಲ್ಲಿ ಹೀಗೆ ಪೋಸ್ಟ್ ಮಾಡಿದೆ. ಉಚಿತ ಚಲನಚಿತ್ರಗಳ ಕುರಿತು ಮಾಹಿತಿ ಮತ್ತು ಭದ್ರತೆ ಸಂಬಂಧಿಸಿದ ಒಂದು ಪ್ರಕಟನೆಯನ್ನು ನೀಡಿದೆ. ಅಪರಿಚಿತ ಅಪ್ಲಿಕೇಶನ್ ಅಥವಾ ಗೊತ್ತಿಲ್ಲದ ಅಪ್ಲಿಕೇಶನ್‌ಗಳಲ್ಲಿ ಪೈರೇಟೆಡ್ ಕಂಟೆಂಟ್‌ನ ವಿವರಗಳು ಮತ್ತು ಸೈಬರ್ ಅಪಾಯಗಳು ಮತ್ತು ಕಾನೂನು ತೊಂದರೆಗಳು ಇವೆ. ಉಚಿತ ಚಲನಚಿತ್ರಗಳ ದುರಾಸೆಯಿಂದ ನಿಮ್ಮ ಡೇಟಾ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡಬೇಡಿ. ಅಪರಿಚಿತ ಅಪ್ಲಿಕೇಶನ್‌ಗಳಿಂದ ಪೈರೇಟೆಡ್ ವಿಷಯವನ್ನು ವೀಕ್ಷಿಸುವುದರಿಂದ ನಿಮ್ಮನ್ನು ಸೈಬರ್ ಅಪಾಯ ಮತ್ತು ಕಾನೂನು ತೊಂದರೆಗೆ ಸಿಲುಕಿಸಬಹುದು.
ಇದನ್ನೂ ಓದಿ:ನಿಮಗೂ ಗೂಗಲ್, ಯೂಟ್ಯೂಬ್ ಪೇಜ್ ಲೋಡ್ ಆಗುತ್ತಿಲ್ಲವೇ?
ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೈಬರ್ ದೋಸ್ತ್, ಪಿಕಾಶೋ ಅಪ್ಲಿಕೇಶನ್‌ನಂತಹ ಪೈರೇಟೆಡ್ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ಸುರಕ್ಷಿತವಾಗಿಲ್ಲ ಎಂದು ಹೇಳಿದೆ. ಲಕ್ಷಾಂತರ ಬಳಕೆದಾರರು ಅದನ್ನು ಬಳಸುವ ಮೂಲಕ ತಮ್ಮ ಡೇಟಾವನ್ನು ಅಪಾಯಕ್ಕೆ ಸಿಲುಕಿಕೊಳ್ಳುತ್ತುದ್ದಾರೆ ಎಂದು ಹೇಳಿದೆ. ಉಚಿತ ಚಲನಚಿತ್ರಗಳನ್ನು ಒದಗಿಸುವ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿದ ನಂತರ ನಿಮ್ಮ ಸಾಧನದಲ್ಲಿ ಮಾಲ್‌ವೇರ್ ಮತ್ತು ಸ್ಪೈವೇರ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಸಾಧ್ಯತೆಗಳು ಇದೆ ಎಂದು ಸೈಬರ್ ದೋಸ್ತ್ I4C ಹೇಳಿದೆ. ಇದನ್ನು ಇನ್ಸ್ಟಾಲ್ ಮಾಡಿದ ನಂತರ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳು ಸೇರಿದಂತೆ ನಿಮ್ಮ ಬ್ಯಾಂಕಿಂಗ್ ಮಾಹಿತಿಯನ್ನು ಪ್ರವೇಶಿಸಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರ ಜತೆಗೆ ಸರ್ಕಾರ ಕೂಡ ನಕಲಿ ಚಲನಚಿತ್ರಗಳ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ಕಾನೂನು ಕ್ರಮತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Wed, 24 December 25