ಇ-ಕಾಮರ್ಸ್ ಸೈಟ್‌ಗಳಿಂದ ಆರ್ಡರ್ ಮಾಡಿದ ನಂತರ ಗ್ರಾಹಕರು ಬೇರೆಯದೇ ಪ್ರಾಡಕ್ಟ್ ಸ್ವೀಕರಿಸುವ ವರದಿಗಳು ಹೆಚ್ಚಾಗಿ ಕಂಡುಬರುತ್ತವೆ. ಈಗ ಅಂತಹದ್ದೇ ಪ್ರಕರಣವೊಂದು ಗಾಜಿಯಾಬಾದ್‌ನಿಂದ ಬೆಳಕಿಗೆ ಬಂದಿದೆ. ಇಲ್ಲಿ ವ್ಯಕ್ತಿಯೊಬ್ಬರು ಮಾರ್ಚ್ 28 ರಂದು ಫ್ಲಿಪ್‌ಕಾರ್ಟ್‌ನಿಂದ (Flipkart) 22 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಆರ್ಡರ್ ಮಾಡಿದ್ದರು. ಉತ್ಪನ್ನವನ್ನು ಅದೇ ದಿನ ಡೆಲಿವರಿ ಮಾಡಲಾಗಿದೆ. ಆದರೆ ಬಳಕೆದಾರರು ಪ್ಯಾಕೇಜ್ ಅನ್ನು ಅನ್ಬಾಕ್ಸ್ ಮಾಡಿದಾಗ ಆಘಾತಕ್ಕೊಳಗಾಗಿದ್ದು, ಅದರಲ್ಲಿ ಕಲ್ಲು ಕಂಡುಬಂದಿದೆ.
ವರದಿಗಳ ಪ್ರಕಾರ, ಗ್ರಾಹಕರು ಸ್ಮಾರ್ಟ್‌ಫೋನ್ ಬದಲಿಗೆ ಕಲ್ಲು ಪಡೆದಿದ್ದಾರೆ. ಈ ಕಲ್ಲು ಕೂಡ ಸ್ಮಾರ್ಟ್‌ಫೋನ್‌ನಂತೆ ಪ್ಯಾಕ್ ಮಾಡಲಾಗಿತ್ತು ಎಂಬುದು ವಿಶೇಷ. ಈ ಉತ್ಪನ್ನವನ್ನು ನೋಡಿದ ನಂತರ, ಗ್ರಾಹಕರು ಅದನ್ನು ಹಿಂದಿರುಗಿಸಲು ವಿನಂತಿಯನ್ನು ಮಾಡಿದ್ದಾರೆ. ಆದರೆ, ಕಂಪನಿಯು ಇದನ್ನು ಸ್ವೀಕರಿಸಲು ನಿರಾಕರಿಸಿದೆ. ನಂತರ ಬಳಕೆದಾರರು ತಮ್ಮ ಸಂಪೂರ್ಣ ಸಮಸ್ಯೆಯನ್ನು ‘X’ ನಲ್ಲಿ ಹಂಚಿಕೊಂಡಿದ್ದಾರೆ. ಕೊರಿಯರ್ ಪಾಲುದಾರರು ಪ್ಯಾಕೇಜ್ ಅನ್ನು ಹಿಂತಿರುಗಿಸಲು ನಿರಾಕರಿಸಿದರು ಎಂದು ವ್ಯಕ್ತಿ ಹೇಳಿದ್ದಾರೆ.
ಮೊಬೈಲ್ ಫೋನ್ ಬಳಕೆದಾರರಿಗೆ ಎಚ್ಚರಿಕೆ: ಏಪ್ರಿಲ್ 15 ರಿಂದ ಈ ಸೇವೆ ಸ್ಥಗಿತ
ಬಳಕೆದಾರರು 256GB ಇನ್ಫಿನಕ್ಸ್ ಸ್ಮಾರ್ಟ್ 30 5G ಅನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ಕ್ರೀನ್‌ಶಾಟ್ ಮೂಲಕ ತಿಳಿದುಬಂದಿದೆ. ಆದಾಗ್ಯೂ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆರ್ಡರ್ ವಿವರಗಳನ್ನು ಹಂಚಿಕೊಳ್ಳಲು ಫ್ಲಿಪ್‌ಕಾರ್ಟ್ ಬಳಕೆದಾರರನ್ನು ಕೇಳಿದೆ. ಬಳಕೆದಾರರಿಗೆ ಉಂಟಾದ ತೊಂದರೆಗಾಗಿ ಫ್ಲಿಪ್‌ಕಾರ್ಟ್ ಕ್ಷಮೆ ಕೂಡ ಯಾಚಿಸಿದೆ. ಅಲ್ಲದೆ, ಫ್ಲಿಪ್‌ಕಾರ್ಟ್ ಬಳಕೆದಾರರಿಗೆ ನಕಲಿ ಖಾತೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಕೇಳಿದೆ.
ಗ್ರಾಹಕರು ಈರೀತಿ ತಪ್ಪು ಉತ್ಪನ್ನವನ್ನು ಸ್ವೀಕರಿಸಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಇಂಥ ಘಟನೆ ನಡೆದಿವೆ. ಕಾಶ್ಮೀರದಲ್ಲಿ ವಾಸಿಸುವ ಬಳಕೆದಾರರು ಇತ್ತೀಚೆಗಷ್ಟೆ ನಥಿಂಗ್ ಫೋನ್ 2a ಅನ್ನು ಆರ್ಡರ್ ಮಾಡಿದ್ದರು. ಆದರೆ, ಅನ್ಬಾಕ್ಸ್ ಮಾಡಿ ನೋಡಿದಾಗ ಅದರಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಪಡೆದುಕೊಂಡಿದ್ದರು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ