Gmail Down: ಪ್ರಪಂಚದಾದ್ಯಂತ ಜಿಮೇಲ್ ಸರ್ವರ್ ಡೌನ್; ಮೇಲ್ ಕಳುಹಿಸಲು, ಸ್ವೀಕರಿಸಲು ಪರದಾಟ

| Updated By: ವಿವೇಕ ಬಿರಾದಾರ

Updated on: Dec 10, 2022 | 9:10 PM

ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ ​(Gmail) ಸರ್ವರ್​​ ಡೌನ್​ ಆಗಿದೆ.

Gmail Down: ಪ್ರಪಂಚದಾದ್ಯಂತ ಜಿಮೇಲ್ ಸರ್ವರ್ ಡೌನ್; ಮೇಲ್ ಕಳುಹಿಸಲು, ಸ್ವೀಕರಿಸಲು ಪರದಾಟ
Gmail
Follow us on

ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ ​(Gmail) ಸರ್ವರ್​​ ಡೌನ್​ ಆಗಿದೆ. ಬಳಕೆದಾರರ ಕಳೆದ ಒಂದು ಗಂಟೆಯಿಂದ ಜಿಮೇಲ್​ ಸರ್ವರ್ ಸಮಸ್ಯೆ ಎದುರಿಸುತ್ತಿದ್ದು, ಮೇಲ್ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರದಾಡುತ್ತಿದ್ದಾರೆ ಎಂದು Downdetector.com ತಿಳಿಸಿದೆ ಎಂದು ದಿ ಇಂಡಿಯನ್​ ಎಕ್ಸ್ಪ್ರೆಸ್​​ ವರದಿ ಮಾಡಿದೆ.

ಇದರಿಂದ ಭಾರತದಾದ್ಯಂತ ಬಳಕೆದಾರರು ಇಮೇಲ್​​ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದು ಜೀಮೆಲ್ ಎಂಟರ್‌ಪ್ರೈಸ್ ಸೇವೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಪ್ರಪಂಚದಾದ್ಯಂತ 1.5 ಶತಕೋಟಿ ಬಳಕೆದಾರರನ್ನು ಹೊಂದಿರುವ Gmail, 2022 ರ ಟಾಪ್ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಜಿಮೇಲ್ ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರಿದ್ದಾರೆ.

ಈ ಬಗ್ಗೆ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, ಭಾರತದಲ್ಲಿ ಜಿಮೇಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆಯೇ? ಎಂದು ಕೇಳಿದ್ದಾರೆ.

Published On - 8:50 pm, Sat, 10 December 22