ಸರ್ವರ್ ಡೌನ್ ಸಮಸ್ಯೆ ಸರಿಪಡಿಸಿದ Gmail, ಸಹಜ ಸ್ಥಿತಿಗೆ ಮರಳಿದ ಮೇಲ್ ಸೇವೆಗಳು

ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ ​(Gmail) ಸರ್ವರ್​​ ಡೌನ್​ ಆಗಿತ್ತು. ಇದೀಗ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಮೈಲ್ ಸೇವೆಗಳು ಸಹಜ ಸ್ಥಿತಿಗೆ ಮರಳಿದೆ.

ಸರ್ವರ್ ಡೌನ್ ಸಮಸ್ಯೆ ಸರಿಪಡಿಸಿದ Gmail, ಸಹಜ ಸ್ಥಿತಿಗೆ ಮರಳಿದ  ಮೇಲ್ ಸೇವೆಗಳು
Gmail (ಜಿಮೇಲ್)Image Credit source: Getty Images
Follow us
TV9 Web
| Updated By: Rakesh Nayak Manchi

Updated on:Dec 11, 2022 | 7:48 AM

ಶನಿವಾರ ಭಾರತ ಸೇರಿದಂತೆ ಜಾಗತಿಕವಾಗಿ ಲಕ್ಷಾಂತರ ಬಳಕೆದಾರರು ಭಾರಿ ಅಡಚಣೆಯನ್ನು ಅನುಭವಿಸಿದ ನಂತರ ಗೂಗಲ್ ಅಂತಿಮವಾಗಿ ಜಿಮೇಲ್ ಸೇವೆಯನ್ನು ಮರುಸ್ಥಾಪಿಸಿದೆ. ಜಿಮೇಲ್ ಬಳಕೆದಾರರು ಮೇಲ್‌ಗಳನ್ನು ಸ್ವೀಕರಿಸದಿರುವ ಹಾಗೂ ಕಳುಹಿಸಲು ಸಾಧ್ಯವಾಗದಿರುವ ಬಗ್ಗೆ ದೂರು ನೀಡಿದ್ದರು. ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡರಲ್ಲೂ ಪ್ರಪಂಚದಾದ್ಯಂತ ಈ ಸಮಸ್ಯೆಯ ಪರಿಣಾಮ ಬೀರಿತ್ತು. ಇದೀಗ ಸರ್ವರ್ ಡೌನ್ (Gmail server down)ಸಮಸ್ಯೆ ಸರಿಪಡಿಸಲಾಗಿದ್ದು, “ಜಿಮೇಲ್​ನಲ್ಲಿನ ಸಮಸ್ಯೆಯನ್ನು ಈಗ ಸಂಪೂರ್ಣವಾಗಿ ತಗ್ಗಿಸಲಾಗಿದೆ. ತಲುಪದ ಸಂದೇಶಗಳ ಎಲ್ಲಾ ಬ್ಯಾಕ್‌ಲಾಗ್ ಅನ್ನು ತೆರವುಗೊಳಿಸಲಾಗಿದೆ ಮತ್ತು ಮೇಲ್ ಸೇವೆಗಳು ಸಹಜ ಸ್ಥಿತಿಗೆ ಮರಳಿದೆ” ಎಂದು ಗೂಗಲ್ ವರ್ಕ್​ಸ್ಪೇಸ್ ಅಪ್‌ಡೇಟ್‌ನಲ್ಲಿ ತಿಳಿಸಿದೆ.

“ನಾವು ಈ ಸಮಸ್ಯೆಯನ್ನು ಪರಿಹರಿಸುವಾಗ ತಾಳ್ಮೆ ವಹಿಸಿದ ನಿಮಗೆ ಧನ್ಯವಾದಗಳು” ಎಂದು ಹೇಳಿದ ಕಂಪನಿ, ಇಮೇಲ್ ವಿತರಣೆಯು ಇನ್ನು ಮುಂದೆ ವಿಫಲಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಅಲ್ಲದೆ, ಗೂಗಲ್ ಇಂಜಿನಿಯರಿಂಗ್ ತಂಡವು ಬ್ಯಾಕ್‌ಲಾಗ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಎಲ್ಲಾ ಸಂದೇಶಗಳನ್ನು ತಲುಪಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಆದಾಗ್ಯೂ, ಜಾಗತಿಕ ಸರ್ವರ್ ಡೌನ್​ ಹಿಂದಿನ ಕಾರಣವನ್ನು ಗೂಗಲ್ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: Google Pixel 6a: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಬೆಲೆ ಕೇಳಿದ್ರೆ ದಂಗಾಗ್ತೀರಾ

ಜಿಮೇಕ್​ನಲ್ಲಿ ಮೇಲ್​ಗಳನ್ನು ಕಳುಹಿಸಲು ಸಾಧ್ಯವಾಗದಿರುವುದು ಮತ್ತು ಸ್ವೀಕರಿಸಲು ಸಾಧ್ಯವಾಗದಿರುವ ಬಗ್ಗೆ ಹಲವರು ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ. “ಎಲ್ಲರಿಗೂ ಜಿಮೇಲ್ ಡೌನ್ ಆಗಿದೆಯೇ ಅಥವಾ ನನ್ನ ಖಾತೆಯಲ್ಲಿ ಏನಾದರೂ ತಪ್ಪಾಗಿದೆಯೇ? ನಾನು ಯಾವುದೇ ಮೇಲ್ ಸ್ವೀಕರಿಸುತ್ತಿಲ್ಲ” ಎಂದು ಜಿಮೇಲ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದರು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:46 am, Sun, 11 December 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ