Gmail Down: ಪ್ರಪಂಚದಾದ್ಯಂತ ಜಿಮೇಲ್ ಸರ್ವರ್ ಡೌನ್; ಮೇಲ್ ಕಳುಹಿಸಲು, ಸ್ವೀಕರಿಸಲು ಪರದಾಟ
ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ (Gmail) ಸರ್ವರ್ ಡೌನ್ ಆಗಿದೆ.
ಜಗತ್ತಿನ ಅತಿ ದೊಡ್ಡ ಸಂಪರ್ಕ ಜಾಲ ಜಿಮೇಲ್ (Gmail) ಸರ್ವರ್ ಡೌನ್ ಆಗಿದೆ. ಬಳಕೆದಾರರ ಕಳೆದ ಒಂದು ಗಂಟೆಯಿಂದ ಜಿಮೇಲ್ ಸರ್ವರ್ ಸಮಸ್ಯೆ ಎದುರಿಸುತ್ತಿದ್ದು, ಮೇಲ್ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರದಾಡುತ್ತಿದ್ದಾರೆ ಎಂದು Downdetector.com ತಿಳಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
Google’s email service Gmail is down for several users. Both, app and desktop version of Gmail is affected. pic.twitter.com/F9EB3x6xZU
— ANI (@ANI) December 10, 2022
ಇದರಿಂದ ಭಾರತದಾದ್ಯಂತ ಬಳಕೆದಾರರು ಇಮೇಲ್ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಇದು ಜೀಮೆಲ್ ಎಂಟರ್‌ಪ್ರೈಸ್ ಸೇವೆಗಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಪ್ರಪಂಚದಾದ್ಯಂತ 1.5 ಶತಕೋಟಿ ಬಳಕೆದಾರರನ್ನು ಹೊಂದಿರುವ Gmail, 2022 ರ ಟಾಪ್ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಜಿಮೇಲ್ ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ದೂರಿದ್ದಾರೆ.
Is Gmail service down in India? Not able to send any emails nor receiving them from another end. @gmail
— Avkush Singh Malik (बिजनौरी) (@SaurabhSKU) December 10, 2022
ಈ ಬಗ್ಗೆ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, ಭಾರತದಲ್ಲಿ ಜಿಮೇಲ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆಯೇ? ಎಂದು ಕೇಳಿದ್ದಾರೆ.
Published On - 8:50 pm, Sat, 10 December 22