AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy M04: ಗ್ಯಾಲಕ್ಸಿ M ಸರಣಿಯಲ್ಲಿ ಬಂದಿದೆ ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 8,499 ರೂಪಾಯಿ

ಇದೀಗ ಸ್ಯಾಮ್​ಸಂಗ್ ಕಂಪನಿ ದೇಶದಲ್ಲಿ ಹೊಸ ಗ್ಯಾಲಕ್ಸಿ ಎಮ್​04 (Samsung Galaxy M04) ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಇದು ಬಜೆಟ್ ಬೆಲೆಯ ಫೋನಾಗಿದ್ದರೂ ಅತ್ಯುತ್ತಮ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Samsung Galaxy M04: ಗ್ಯಾಲಕ್ಸಿ M ಸರಣಿಯಲ್ಲಿ ಬಂದಿದೆ ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 8,499 ರೂಪಾಯಿ
Samsung Galaxy M04
TV9 Web
| Updated By: Vinay Bhat|

Updated on:Dec 10, 2022 | 11:49 AM

Share

ಭಾರತದಲ್ಲಿ ಸ್ಯಾಮ್​ಸಂಗ್ (Samsung) ಕಂಪನಿಯ ಮೊಬೈಲ್​ಗಳಿಗೆ ವಿಶೇಷ ಬೇಡಿಕೆ ಇದೆ. ಯಾಕೆಂದರೆ ಸ್ಯಾಮ್​ಸಂಗ್ ಬಜೆಟ್ ಬೆಲೆಯಿಂದ ಹಿಡಿದು ಮಧ್ಯಮ ಹಾಗೂ ಹೈ ರೇಂಜ್ ಮಾದರಿಯ ವರೆಗೆ ಸ್ಮಾರ್ಟ್​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಮುಖ್ಯವಾಗಿ ಕಡಿಮೆ ಬೆಲೆಯ ಸ್ಯಾಮ್​ಸಂಗ್ ಫೋನುಗಳು ದೇಶದಲ್ಲಿ ಭರ್ಜರಿ ಸೇಲ್ ಆಗುತ್ತದೆ. ಇದಕ್ಕಾಗಿ ಭಾರತದಲ್ಲಿ ಹೆಚ್ಚು ಬಜೆಟ್ ಬೆಲೆಗೆವೇ ಫೋನ್ ಅನಾವರಣ ಮಾಡುತ್ತಿದೆ. ಅದರಲ್ಲೂ ತನ್ನ M ಸರಣಿಯ ಫೋನ್​ಗೆ ಅತ್ಯುತ್ತಮ ಪ್ರತಿಕ್ರಿಯೆ ಕೇಳಿಬರುತ್ತದೆ. ಇದಕ್ಕಾಗಿ ಇದೀಗ ಸ್ಯಾಮ್​ಸಂಗ್ ಕಂಪನಿ ದೇಶದಲ್ಲಿ ಹೊಸ ಗ್ಯಾಲಕ್ಸಿ ಎಮ್​04 (Samsung Galaxy M04) ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಇದು ಬಜೆಟ್ ಬೆಲೆಯ ಫೋನಾಗಿದ್ದರೂ ಅತ್ಯುತ್ತಮ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಬಲಿಷ್ಠ ಬ್ಯಾಟರ್ ಸಾಮರ್ಥ್ಯ ನೀಡಲಾಗಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಭಾರತದಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB RAM + 64GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 8,499ರೂ. ಬೆಲೆ ನಿಗದಿ ಮಾಡಲಾಗಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದು, ಸದ್ಯದಲ್ಲೇ ಬರುವ ನಿರೀಕ್ಷೆಯಿದೆ. ಸದ್ಯ ಅನಾವರಣ ಆಗಿರುವ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಡಿಸೆಂಬರ್ 16 ರಂದು ಮೊದಲ ಸೇಲ್‌ ಕಾಣಲಿದೆ. ಫಸ್ಟ್ ಸೇಲ್ ಪ್ರಯುಕ್ತ ಆಫರ್ ಕೂಡ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ
Image
Best Camera Phone: 20 ಸಾವಿರ ರೂ. ಒಳಗಡೆ ಬೊಂಬಾಟ್ ಕ್ಯಾಮೆರಾದ ಫೋನ್ ಹುಡುಕುತ್ತಿದ್ದರೆ ಇದುವೇ ಬೆಸ್ಟ್ ಆಯ್ಕೆ
Image
Shocking News: 6 ಲಕ್ಷ ಭಾರತೀಯರ ವೈಯಕ್ತಿಕ ಡೇಟಾ ಹ್ಯಾಕ್, ಮಾಲ್‌ವೇರ್‌ ಸಾಧನ ತಡೆಯಲು ಹೀಗೆ ಮಾಡಿ
Image
Twitter New Feature: ಟ್ವಿಟರ್​ನಲ್ಲೂ ಲಭ್ಯವಾಗಲಿದೆ ವಿವ್ಸ್ ಕೌಂಟ್; ಎಲಾನ್ ಮಸ್ಕ್ ಘೋಷಣೆ
Image
Airtel: ಹಳೆಯ ಪ್ಲಾನ್ ಮರುಬಿಡುಗಡೆ ಮಾಡಿದೆ ಏರ್ಟೆಲ್: ಈ ಬಾರಿ ಬಂಪರ್ ಪ್ರಯೋಜನ

ಏನು ಫೀಚರ್ಸ್:

ಈ ಸ್ಮಾರ್ಟ್‌ಫೋನ್​ನ ವಿಶೇಷತೆ ಬಗ್ಗೆ ನೋಡುವುದಾದರೆ, ಇದು 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ಅನುಪಾತದಲ್ಲಿದ್ದು ವಾಟರ್‌ ಡ್ರಾಪ್‌ ಶೈಲಿಯ ನಾಚ್‌ ಅನ್ನು ಪಡೆದುಕೊಂಡಿದೆ. ಮೀಡಿಯಾಟೆಕ್‌ ಹಿಲಿಯೋ P35 SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಆಂಡ್ರಾಯ್ಡ್‌ 12 ನಲ್ಲಿ ಒಂದು UI 4.1 ಸ್ಕಿನ್ ಜೊತೆಗೆ ಕಾರ್ಯನಿರ್ವಹಿಸಲಿದೆ.

Tecno POVA 4: ಕಡಿಮೆ ಬೆಲೆ, 6000mAh ಬಲಿಷ್ಠ ಬ್ಯಾಟರಿ: ಭಾರತದಲ್ಲಿ ಟೆಕ್ನೋದಿಂದ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಕೂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಬಲಿಷ್ಠವಾದ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಫೋನ್‌ ಎಷ್ಟು ವೋಲ್ಟ್​ನ ವೇಗದ ಚಾರ್ಜಿಂಗ್‌ ಬೆಂಬಲಿಸುತ್ತದೆ ಎಂಬುದು ತಿಳಿದುಬಂದಿಲ್ಲ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಬೆಂಬಲವನ್ನು ಪಡೆದಿದೆ. ಈ ಫೋನ್ ಮಿಂಟ್ ಗ್ರೀನ್, ಗೋಲ್ಡ್, ವೈಟ್ ಮತ್ತು ನೀಲಿ ಕಲರ್​ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Sat, 10 December 22

ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ನಮ್ಮ ನಿರ್ಮಾಣದ ಎರಡು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ: ಹೆಬ್ಬಾಳ್ಕರ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಮೈಸೂರು ಮಹಾರಾಜರಿಗಿಂತಲೂ ಸಿದ್ದರಾಮಯ್ಯ ಹೆಚ್ಚು:ತಂದೆಗೆ ಮಗ ಬಹುಪರಾಕ್
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದ ಅಪರಾಧಿ ಅಡಗಿಕೊಂಡಿದ್ದೆಲ್ಲಿ ನೋಡಿ
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
ಉತ್ತರ ಗೊತ್ತಾಗದಾಗ ವಿಜಯೇಂದ್ರರಿಂದ ಭಾಷೆ ಬದಲಿಸುವ ತಂತ್ರಗಾರಿಕೆ!
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ
‘ನಡೀರಿ ಹೋಗೋಣ ಎಂದರು’; ವೀರಪ್ಪನ್ ಕಂಡಾಗ ರಾಜ್​ಕುಮಾರ್ ಪ್ರತಿಕ್ರಿಯೆ