Airtel: ಹಳೆಯ ಪ್ಲಾನ್ ಮರುಬಿಡುಗಡೆ ಮಾಡಿದೆ ಏರ್ಟೆಲ್: ಈ ಬಾರಿ ಬಂಪರ್ ಪ್ರಯೋಜನ

ಇತ್ತೀಚೆಗಷ್ಟೆ ಸದ್ದಿಲ್ಲದೆ ತನ್ನ ಗ್ರಾಹಕರಿಗೆ ಏರ್ಟೆಲ್ 199ರೂ. ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ. ಏರ್ಟೆಲ್​ನ 199 ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಪಡೆಯಬಹುದು.

TV9 Web
| Updated By: Vinay Bhat

Updated on: Dec 09, 2022 | 2:34 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.

1 / 8
ಇದರ ನಡುವೆ ಎರಡೂ ಕಂಪನಿಗಳು 5ಜಿ ಸೇವೆಯನ್ನು ಕೂಡ ನೀಡುತ್ತಿದೆ. ಜೊತೆಗೆ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಕೂಡ ಯಶಸ್ವಿಯಾಗುತ್ತಿದೆ. ಬೆಲೆ ಹೆಚ್ಚಳ ಮಾಡಿದ್ದರೂ ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಏರ್ಟೆಲ್​ನ ಯೋಜನೆಗಳು ಹೆಚ್ಚಿನವರ ಗಮನ ಸೆಳೆಯುತ್ತಿವೆ.

2 / 8
ಇತ್ತೀಚೆಗಷ್ಟೆ ಸದ್ದಿಲ್ಲದೆ ತನ್ನ ಗ್ರಾಹಕರಿಗೆ ಏರ್ಟೆಲ್ 199ರೂ. ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಬಿಡುಗಡೆ ಮಾಡಿದೆ. ಏರ್ಟೆಲ್​ನ 199 ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ಪಡೆಯಬಹುದು. ಇದರ ಜೊತೆಗೆ ಅನಿಯಮಿತ ವಾಯಿಸ್ ಕರೆ ಹಾಗೂ ದೈನಂದಿನ 100 SMS ಉಚಿತ ಪ್ರಯೋಜನ ಕೂಡ ದೊರೆಯಲಿದೆ.

3 / 8
ಒಂದು ತಿಂಗಳ ವ್ಯಾಲಿಡಿಟಿಯನ್ನು ಎದುರು ನೋಡುತ್ತಿರುವ ಬಳಕೆದಾರರಿಗಾಗಿ ಈ ಯೋಜನೆ ಸಹಕರಿ ಆಗಲಿದೆ. ಈ ಪ್ಲಾನ್​ನಲ್ಲಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್, ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.

4 / 8
ಈ ಹಿಂದೆ ಕೂಡ ಏರ್ಟೆಲ್ 199ರೂ. ಬೆಲೆಯಲ್ಲಿ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿತ್ತು. ಆದರೆ ಅದರಲ್ಲಿ 24 ದಿನಗಳ ವ್ಯಾಲಿಡಿಟಿ ಮಾತ್ರ ಇರುತ್ತಿತ್ತು.

5 / 8
ಅತ್ತ ಜಿಯೋದಲ್ಲಿ ಕೂಡ ಇದೇ 199 ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್ ಇದೆ. ಇದು ದೈನಂದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಇದರಲ್ಲಿ ಕೂಡ ಅನಿಯಮಿತ ಕರೆ ಪ್ರಯೋಜನ ಹಾಗೂ ದಿನನಿತ್ಯ 100 ಉಚಿತ ಎಸ್​ಎಮ್​ಎಸ್​ ಸೌಲಭ್ಯ ಲಭ್ಯವಾಗಲಿದೆ. 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

6 / 8
ಇನ್ನು ಇತ್ತೀಚೆಗಷ್ಟೆ ಏರ್ಟೆಲ್​ನಲ್ಲಿ ಅತಿ ಹೆಚ್ಚುನ ಜನರು ಉಪಯೋಗಿಸುತ್ತಿರುವ 265 ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಪರಿಷ್ಕರಣೆ ಆಗಿದ್ದು, 28 ದಿನಗಳ ಬದಲಾಗಿ 30 ದಿನಗಳ ವ್ಯಾಲಿಡಿಟಿ ಪಡೆದಿದೆ. ಎರಡು ದಿನಗಳ ವ್ಯಾಲಿಡಿಯನ್ನು ಹೆಚ್ಚಿಸಿದೆ.

7 / 8
ಈ ಪ್ಲಾನ್‌ನಲ್ಲಿ ನಿಮಗೆ ಪ್ರತಿದಿನ 1 GB ಹೈ ಸ್ಪೀಡ್ 4G ಡೇಟಾ ಲಭ್ಯವಿದ್ದು, ಒಟ್ಟು ಪೂರ್ಣ ವ್ಯಾಲಿಡಿಟಿ ಅವಧಿಗೆ 45GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್‌ಎಂಎಸ್‌ ಸೇವೆಗಳು ಲಭ್ಯವಾಗಲಿದೆ. ಸದ್ಯಕ್ಕೆ ಆಯ್ದ ಬಳಕೆದಾರರಿಗೆ ಮಾತ್ರ ಈ ಯೋಜನೆ ಜಾರಿಯಲ್ಲಿದೆ.

8 / 8
Follow us