IND vs BAN: ಜಡೇಜಾ, ಶಮಿ ಬದಲು ಯುವ ದೇಶೀ ಪ್ರತಿಭೆಗಳಿಗೆ ಮಣೆ ಹಾಕಿದ ಬಿಸಿಸಿಐ

IND vs BAN: ವರದಿಯ ಪ್ರಕಾರ, ಭಾರತ ಎ ಪರ ಆಡುತ್ತಿರುವ ಎಡಗೈ ಸ್ಪಿನ್ ಆಲ್‌ರೌಂಡರ್ ಸೌರಭ್ ಕುಮಾರ್ ಮತ್ತು ವೇಗದ ಬೌಲರ್ ನವದೀಪ್ ಸೈನಿ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

TV9 Web
| Updated By: ಪೃಥ್ವಿಶಂಕರ

Updated on:Dec 09, 2022 | 12:13 PM

ಟೀಂ ಇಂಡಿಯಾ ಪ್ರಸ್ತುತ ಎರಡು ದೊಡ್ಡ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದೆ. ಒಂದು ಮೈದಾನದಲ್ಲಿ ಕಳಪೆ ಪ್ರದರ್ಶನ. ಎರಡನೆಯದಾಗಿ, ಆಟಗಾರರ ಫಿಟ್ನೆಸ್. ಬಾಂಗ್ಲಾದೇಶ ಪ್ರವಾಸದಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದ್ದು, ಟೀಂ ಇಂಡಿಯಾ ತನ್ನ ಇಬ್ಬರು ಪ್ರಮುಖ ಆಟಗಾರರಿಲ್ಲದೇ ಡಿಸೆಂಬರ್ 14 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಪ್ರವೇಶಿಸಬೇಕಾಗಿದೆ.

1 / 6
ವರದಿಯ ಪ್ರಕಾರ, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಮೊಣಕಾಲು ಗಾಯದಿಂದ ಸೆಪ್ಟೆಂಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಡೇಜಾ ಇನ್ನೂ ಚೇತರಿಸಿಕೊಂಡಿಲ್ಲ. ಹಾಗೆಯೇ ಏಕದಿನ ಸರಣಿ ಆರಂಭಕ್ಕೂ ಮುನ್ನ ಭುಜದ ಗಾಯದಿಂದ ಬಳಲುತ್ತಿದ್ದ ಶಮಿ ಕೂಡ ಟೆಸ್ಟ್ ಸರಣಿಗೆ ಫಿಟ್ ಆಗಿಲ್ಲ.

2 / 6
ಈಗ ಅವರ ಸ್ಥಾನ ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಈಗಾಗಲೇ ಏಕದಿನ ಸರಣಿಯ ಭಾಗವಾಗಿರುವ ಉಮ್ರಾನ್ ಮಲಿಕ್ ಅವರನ್ನು ಶಮಿ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂಬ ವರದಿ ಹರಿದಾಡುತ್ತಿದೆ.

3 / 6
ವರದಿಯ ಪ್ರಕಾರ, ಭಾರತ ಎ ಪರ ಆಡುತ್ತಿರುವ ಎಡಗೈ ಸ್ಪಿನ್ ಆಲ್‌ರೌಂಡರ್ ಸೌರಭ್ ಕುಮಾರ್ ಮತ್ತು ವೇಗದ ಬೌಲರ್ ನವದೀಪ್ ಸೈನಿ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

4 / 6
ಉತ್ತರ ಪ್ರದೇಶದ ಸ್ಪಿನ್ನರ್ ಸೌರಭ್ ಕುಮಾರ್ ಇತ್ತೀಚಿನ ದಿನಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಸಾಕಷ್ಟು ಪ್ರಭಾವ ಬೀರಿದ್ದಾರೆ. ಅಲ್ಲದೆ ಬಾಂಗ್ಲಾದೇಶ ಎ ವಿರುದ್ಧದ ಮೊದಲ ಪಂದ್ಯದಲ್ಲಿ ಸೌರಭ್ 9 ವಿಕೆಟ್ ಪಡೆದಿದ್ದರು. ಹಾಗೆಯೇ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅವರು 39 ಎಸೆತಗಳಲ್ಲಿ 55 ರನ್ ಬಾರಿಸಿದ್ದರು.

5 / 6
ಸುಮಾರು ಎರಡು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನವದೀಪ್ ಸೈನಿ ಕೂಡ ಭಾರತ ಎ ಪರ ಆಡುತ್ತಿದ್ದಾರೆ. ಬಾಂಗ್ಲಾದೇಶ ಎ ವಿರುದ್ಧದ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಸೈನಿ, ಎರಡನೇ ಟೆಸ್ಟ್ ಪಂದ್ಯದಲ್ಲಿ  ಔಟಾಗದೆ 50 ರನ್ ಬಾರಿಸಿದ್ದರು.

6 / 6

Published On - 12:13 pm, Fri, 9 December 22

Follow us