Google Doodle Today: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಟೂರ್ನಿ ಇಂದು ಆರಂಭವಾಗಲಿದ್ದು, ಗೂಗಲ್ ಕೂಡ ಈ ಅದ್ಧೂರಿ ಕ್ರಿಕೆಟ್ ಈವೆಂಟ್ ಅನ್ನು ಆಚರಿಸುತ್ತಿದೆ. ಗೂಗಲ್ ವಿಶೇಷ ಡೂಡಲ್ ಮೂಲಕ, ಐಪಿಎಲ್ ಉದ್ಘಾಟನೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿದೆ. ಕಳೆದ ವರ್ಷದಂತೆ, 90 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ 10 ತಂಡಗಳು ಸ್ಪರ್ಧಿಸುತ್ತಿವೆ. ಉದ್ಘಾಟನಾ ಸಮಾರಂಭವು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದ್ದು, ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆಯಲಿದೆ.
ಗೂಗಲ್‌ನ ಡೂಡಲ್‌ನಲ್ಲಿ ಬ್ಯಾಟ್ಸ್‌ಮನ್ ಚೆಂಡನ್ನು ಹೊಡೆಯುವುದನ್ನು ತೋರಿಸಲಾಗಿದೆ. ಶಾಟ್ ಹೊಡೆದ ತಕ್ಷಣ, ಅಂಪೈರ್ ತನ್ನ ಕೈಯನ್ನು ಮೇಲಕ್ಕೆತ್ತಿ ನಾಲ್ಕು ಫೋರ್ ಎಂದು ಸೂಚಿಸುತ್ತಾರೆ. ಐಪಿಎಲ್‌ನಂತಹ ಹೊಡಿಬಡಿ ಟಿ20 ಲೀಗ್‌ಗಳಲ್ಲಿ, ಬ್ಯಾಟ್ಸ್‌ಮನ್‌ಗಳು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಈ ಪಂದ್ಯಗಳು ಹೆಚ್ಚಾಗಿ ಹೈ ಸ್ಕೋರಿಂಗ್ ಮುಖಾಮುಖಿಗಳಿಗೆ ಸಾಕ್ಷಿಯಾಗುತ್ತವೆ.
ಡೂಡಲ್ ಮೇಲೆ ಕ್ಲಿಕ್ ಮಾಡುವುದರಿಂದ ಪಂದ್ಯದ ವೇಳಾಪಟ್ಟಿ, ತಂಡದ ಲೈನ್-ಅಪ್‌ಗಳು ಮತ್ತು ಸಮಯ ಸೇರಿದಂತೆ ಎಲ್ಲಾ ಐಪಿಎಲ್ ವಿವರಗಳು ತೆರೆದುಕೊಳ್ಳುತ್ತದೆ. ಯಾವ ತಂಡಗಳು ಪಂದ್ಯವನ್ನು ಆಡುತ್ತವೆ ಮತ್ತು ಯಾವ ಸಮಯದಲ್ಲಿ ಪಂದ್ಯವನ್ನು ಆಯೋಜಿಸಲಾಗಿದೆ. ಮುಂದೆ ನಡೆಯಲಿರುವ ಪಂದ್ಯ ಸೇರಿದಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗಿದೆ.
ಕೆಳಭಾಗದಲ್ಲಿ, ಐಪಿಎಲ್ ಸಂಬಂಧಿತ ಸುದ್ದಿಗಳು, ಐಪಿಎಲ್‌ನ ಅಧಿಕೃತ ವೆಬ್‌ಸೈಟ್, ಐಪಿಎಲ್‌ನ ಎಕ್ಸ್ ಹ್ಯಾಂಡಲ್, ಐಪಿಎಲ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮುಂತಾದ ಮಾಹಿತಿಯನ್ನು ನೀಡಲಾಗಿದೆ. ಒಟ್ಟಾರೆಯಾಗಿ, ಗೂಗಲ್ ಡೂಡಲ್ ಐಪಿಎಲ್ ಆರಂಭವನ್ನು ಆಚರಿಸುವುದಲ್ಲದೆ, ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸುವ ಮೂಲಕ ಪ್ರಸ್ತುತಪಡಿಸುತ್ತಿದೆ.
Amazon EPL: ಐಪಿಎಲ್ಗಿಂತ ಮೊದಲೇ ಅಮೆಜಾನ್‌ನಲ್ಲಿ ಇಪಿಎಲ್ ಪ್ರಾರಂಭ: ಸ್ಮಾರ್ಟ್‌ಫೋನ್ಸ್ ಶೇ. 40 ರಷ್ಟು ಅಗ್ಗ
ಐಪಿಎಲ್ ವೀಕ್ಷಿಸಲು ಹೆಚ್ಚಿನವರು ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಅನ್ನು ಬಳಸುತ್ತಾರೆ. ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು, ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೋಡಾ- ಐಡಿಯಾ ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಿಗೆ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸೇರಿಸಿವೆ. ಐಪಿಎಲ್ ಅನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಜಿಯೋ ಸಿನಿಮಾ ಮತ್ತು ಹಾಟ್‌ಸ್ಟಾರ್ ವಿಲೀನದಿಂದ ಈ ಹೊಸ ವೇದಿಕೆ ಹೊರಹೊಮ್ಮಿದೆ.
ನಿಮ್ಮ ಮೊಬೈಲ್‌ನಲ್ಲಿ ಐಪಿಎಲ್ ವೀಕ್ಷಿಸಲು, ನೀವು ಜಿಯೋಹಾಟ್‌ಸ್ಟಾರ್‌ಗೆ ಚಂದಾದಾರರಾಗಬೇಕಾಗುತ್ತದೆ. ನೀವು ಅದನ್ನು ಪ್ರಿಪೇಯ್ಡ್ ರೀಚಾರ್ಜ್‌ನೊಂದಿಗೆ ಜೋಡಿಸಬಹುದು ಅಥವಾ ಜಿಯೋ ಹಾಟ್‌ಸ್ಟಾರ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪ್ರತ್ಯೇಕ ಚಂದಾದಾರಿಕೆಯನ್ನು ಪಡೆಯಬಹುದು. ಜಿಯೋ ಹಾಟ್‌ಸ್ಟಾರ್ ತನ್ನ ಬಳಕೆದಾರರಿಗೆ ಮೊಬೈಲ್ ಮಾತ್ರ ಯೋಜನೆಗಳನ್ನು ಸಹ ನೀಡುತ್ತಿದೆ. ತಮ್ಮ ಫೋನ್‌ನಲ್ಲಿ ಐಪಿಎಲ್ ವೀಕ್ಷಿಸಲು ಬಯಸುವ ಮತ್ತು ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದ ಬಳಕೆದಾರರಿಗೆ ಇದು ಉತ್ತಮವಾಗಿರುತ್ತದೆ. ಇಂದು ಸಂಜೆ 7.30ಕ್ಕೆ ಪ್ರಾರಂಭವಾಗಲಿರುವ ಐಪಿಎಲ್ 2025ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ