ಸರ್ಚ್ ಇಂಜಿನ್ ದೈತ್ಯ ಗೂಗಲ್ (Google) ಇದೀಗ ರಾಜಕೀಯಕ್ಕೆ (Political) ಸಂಬಂಧಿಸಿದ ತಪ್ಪು ಪದಗಳು ಕಂಡುಬಂದಲ್ಲಿ ಎಚ್ಚರಿಕೆಯ ಸಂದೇಶ ರವಾನಿಸುವ ಆಯ್ಕೆಯನ್ನು ತಂದಿದೆ. ದಿ ಸನ್ ಮಾಡಿರುವ ವರದಿಯ ಪ್ರಕಾರ, ಬಳಕೆದಾರರು ಗೂಗಲ್ನಿಂದ ರಾಜಕೀಯವಾಗಿ ತಪ್ಪಾಗಿರುವ ಪದಗಳನ್ನು ಬಳಕೆ ಮಾಡಿದೆ ಎಂಬ ಸಂದೇಶವು ಪಾಪ್ ಅಪ್ ಆಗುತ್ತದೆ. ಈ ಪದ ತಪ್ಪಾಗಿದೆ, ಇದಕ್ಕೆ ಸೂಕ್ತವೆನಿಸುವ ಇತರೆ ಪದಗಳನ್ನು ಬಳಸಿ ಎಂಬ ಸಂದೇಶವನ್ನು (Message) ಬಳಕೆದಾರರಿಗೆ ಕಳುಹಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ಗೂಗಲ್ ಹೆಚ್ಚು ಲಿಂಗ ಸೂಕ್ಷ್ಮ ಭಾಷೆಗಳ ಕಡೆಗೆ ಗಮನ ಹರಿಸುತ್ತಿದೆ. ಅಂದರೆ “ಪೊಲೀಸ್ ಮೆನ್” ಅಥವಾ “ಗೃಹಿಣಿ” ಯಂತಹ ಲಿಂಗ ನಿರ್ದಿಷ್ಟ ಪದಗಳನ್ನು ಬಳಸುವಂತಿಲ್ಲ. ಇದರ ಬದಲಾಗಿ “ಪೊಲೀಸ್ ಅಧಿಕಾರಿಗಳು” ಮತ್ತು “ಮನೆಯಲ್ಲಿಯೇ ಇರುವ ಸಂಗಾತಿ” ಎಂದು ಬರೆಯಬೇಕು.
ಇದು ಹೊಸ ಗೂಗಲ್ನ ಡಾಕ್ಯುಮೆಂಟ್ ಶೈಲಿಯ ನಿಯಮವಾಗಿದೆ. ಹಾಗೆಯೆ “ಭೂಮಾಲೀಕ” ಎಂಬ ಪದವನ್ನು ಬಳಸುವ ಬದಲು “ಆಸ್ತಿ ಮಾಲೀಕರು” ಅಥವಾ “ಮಾಲೀಕರು” ಎಂಬ ಪದವನ್ನು ಬಳಸಲು ಸಲಹೆಯನ್ನು ನೀಡಲಾಗುತ್ತದೆ. “ಮನುಕುಲ” ಬದಲಿಗೆ ಪರ್ಯಾಯ “ಮಾನವಕುಲ” ಎಂದು ಬರೆಯಲು ಸೂಚಿಸುತ್ತದೆ. ಗೂಗಲ್ ಪರಿಚಯಿಸಿರುವ ಈ ಆಯ್ಕೆಯ ಬಗ್ಗೆ ಕೆಲ ವಿಮರ್ಶಕರು ಬೇಸರ ಹೊರಹಾಕಿದ್ದಾರೆ. ಈರೀತಿಯ ಬೆಳವಣಿಗೆಗೆ ಬಳಕೆದಾರರು ಹೆಚ್ಚು ಗಮನ ಹರಿಸುವುದಿಲ್ಲ. ಈ ಎಲ್ಲ ಪದಗಳು ಪ್ರತಿಬಾರಿ ಸರಿ ಎನಿಸುವುದಿಲ್ಲ ಎಂದು ಹೇಳಿದ್ದಾರೆ.
ಬಿಗ್ ಬ್ರದರ್ ವಾಚ್‌ನ ಸಿಲ್ಕಿ ಕಾರ್ಲೊ ಅವರು ಈ ಬಗ್ಗೆ ಬರೆದುಕೊಂಡಿದ್ದು, “ಗೂಗಲ್ ನೀವು ಟೈಪ್ ಮಾಡುವ ಪ್ರತಿಯೊಂದು ಪದವನ್ನು ಓದುವುದು ಮಾತ್ರವಲ್ಲದೆ ಏನು ಟೈಪ್ ಮಾಡಬೇಕೆಂದು ಕೂಡ ಹೇಳುತ್ತದೆ” ಎಂದು ಹೇಳಿದ್ದಾರೆ. ಈ ರೀತಿಯ ತಂತ್ರಜ್ಞಾನವು ಗೌಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹೆಚ್ಚುತ್ತಿರುವ ಚಿಂತನೆಯ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಎಂಬುದು ಕಾರ್ಲೋ ಅಭಿಪ್ರಾಯ. ಇದರ ನಡುವೆ ಗೂಗಲ್ ವಕ್ತಾರರು “ನಮ್ಮ ತಂತ್ರಜ್ಞಾನವು ಯಾವಾಗಲೂ ಸುಧಾರಿಸುತ್ತಿರುತ್ತದೆ. ಎಲ್ಲಾ ಅನಗತ್ಯ ಪದಳನ್ನು ಗುರುತಿಸಲು ಮತ್ತು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಳೆದ ವರ್ಷ ಕೂಡ ಗೂಗಲ್ ಡಾಕ್ಸ್‌ನಲ್ಲಿನ ಹೊಸ ವೈಶಿಷ್ಟ್ಯವನ್ನು ತರಲಾಗಿತ್ತು. ಇದರಲ್ಲಿ ಪ್ರಮುಖವಾಗಿ ಲಿಂಗ-ತಟಸ್ಥ ಭಾಷೆಯಲ್ಲಿ ಬರೆಯಲು ಬಳಕೆದಾರರನ್ನು ಪ್ರೇರೇಪಿಸಿತ್ತು. ಅಂದರೆ “ಚೇರ್ಮೆನ್” ಅಥವಾ “ಫೈರ್‌ಮ್ಯಾನ್” ನಂತಹ ಪದಗಳನ್ನು ಬಳಸುವ ಬದಲಿಗೆ “ಚೇರ್ಪರ್ಸನ್” ಅಥವಾ “ಫೈರ್ಫೈಟರ್” ಎಂಬ ಪದ ಬಳಸಿ ಎಂದು ಪ್ರಚೋದಿಸಲಾಗಿತ್ತು. ಇದು ಗೂಗಲ್ನ ಹೊಸ ಸ್ಮಾರ್ಟ್ ಕ್ಯಾನ್ವಾಸ್‌ನ ಭಾಗವಾಗಿ ಪರಿಚಯಿಸಲಾಗಿದೆ. ಗೂಗಲ್ನ ಪ್ರಮುಖ ಪ್ಲಾಟ್‌ಫಾರ್ಮ್‌ಗಳಾದ ಡಾಕ್ಸ್, ಶೀಟ್ ಮತ್ತು ಸ್ಲೈಡ್‌ಗಳ ನಡುವೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ.
Narzo 50A Prime: ಕೇವಲ 11,499 ರೂ. ಗೆ ಬಿಡುಗಡೆ ಆಯಿತು ರಿಯಲ್ ಮಿ ನಾರ್ಜೋ 50A ಪ್ರೈಮ್: ಏನಿದೆ ಫೀಚರ್ಸ್?
Motorola G52: ಕಡಿಮೆ ಬೆಲೆ-ಭರ್ಜರಿ ಫೀಚರ್: ಭಾರತದಲ್ಲಿ ಮೋಟೋ G52 ಸ್ಮಾರ್ಟ್‌ಫೋನ್ ಬಿಡುಗಡೆ