Motorola G52: ಕಡಿಮೆ ಬೆಲೆ-ಭರ್ಜರಿ ಫೀಚರ್: ಭಾರತದಲ್ಲಿ ಮೋಟೋ G52 ಸ್ಮಾರ್ಟ್‌ಫೋನ್ ಬಿಡುಗಡೆ
ಮೋಟೋರೊಲಾ ಕಂಪನಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಮೋಟೋ ಜಿ52 (Moto G52) ಫೋನ್ ಅನ್ನು ಅನಾವರಣ ಮಾಡಿದೆ. ಬಿಡುಗಡೆಗೂ ಮೊದಲೇ ಭರ್ಜರಿ ಸುದ್ದಿಯಲ್ಲಿದ್ದ ಈ ಫೋನ್ ತ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.
ಭಾರತದಲ್ಲಿ ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ ಹಾಗೂ ಒನ್ಪ್ಲಸ್ ನಂತಹ ಘಟಾನುಘಟಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ಗಳು ತಲೆಯೆತ್ತಿ ಮೆರೆಯುತ್ತಿರುವಾಗ ಮೋಟೋರೊಲಾ (Motorola) ಸಂಸ್ಥೆ ತನ್ನದೆಯಾದ ವಿಶೇಷ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ಸು ಸಾಧಿಸುತ್ತಿದೆ. ಇದೀಗ ಮತ್ತೆ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಒಂದನ್ನು ರಿಲೀಸ್ ಮಾಡಿದೆ. ಹೌದು ಮೋಟೋರೊಲಾ ಕಂಪನಿ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಮೋಟೋ ಜಿ52 (Moto G52) ಫೋನ್ ಅನ್ನು ಅನಾವರಣ ಮಾಡಿದೆ. ಬಿಡುಗಡೆಗೂ ಮೊದಲೇ ಭರ್ಜರಿ ಸುದ್ದಿಯಲ್ಲಿದ್ದ ಈ ಫೋನ್ ತ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, 60Hz ಡಿಸ್‌ಪ್ಲೇ ರೀಫ್ರೇಶ್ ರೇಟ್ ಹೊಂದಿದೆ. 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರುವುದು ಮತ್ತೊಂದು ಪ್ರಮುಖ ಹೈಲೈಟ್ ಆಗಿ ಕಾಣಿಸಿಕೊಂಡಿದೆ. ಇದು ಬಜೆಟ್ ಬೆಲೆಯ ಮತ್ತೊಂದು ಸ್ಮಾರ್ಟ್‌ಫೋನ್. ಹಾಗಾದ್ರೆ ಮೋಟೋ G52 ಫೋನಿನ ಫೀಚರ್ಸ್ ಏನೇನು?, ಬೆಲೆ ಎಷ್ಟು ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಮೋಟೋ G52 ಸ್ಮಾರ್ಟ್‌ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB RAM ಮತ್ತು 64GB ವೇರಿಯಂಟ್ ಬೆಲೆಯು 14,499 ರೂ. ಆಗಿದೆ. ಹಾಗೆಯೇ 6GB RAM ಮತ್ತು 128GB ಸ್ಟೋರೆಜ್ ಮಾದರಿಗೆ 16,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಚಾರ್ಕೋಲ್ ಗ್ರೇ ಮತ್ತು ಪಿಂಗಾಣಿ ವೈಟ್ ಸೇರಿದಂತೆ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಮೇ 03 ರಂದು ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್ ಕಾಣಲಿದೆ.
ಏನು ವಿಶೇಷತೆ?:
ಮೋಟೋ G52 ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ವಿಶೇಷವಾಗಿ ಮೋಟೋ G52 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 30W ಟರ್ಬೋಪವರ್ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ IP52 ರೇಟಿಂಗ್ ಅನ್ನು ಹೊಂದಿದ್ದು, ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ವೈಫೈ, ಬ್ಲೂಟೂತ್, ಹೆಡ್‌ಫೋನ್ ಜ್ಯಾಕ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.
Micromax IN2c: ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನಾಳೆ ಅಪ್ಪಳಿಸಲಿದೆ ಬೊಂಬಾಟ್ ಫೀಚರ್ಸ್ನ ದೇಶೀಯ ಫೋನ್
Best Smartphone: ಭರ್ಜರಿ ಸೇಲ್ ಕಾಣುತ್ತಿದೆ 20,000 ರೂ. ಒಳಗಿನ ಈ ಹೊಸ 4 ಸ್ಮಾರ್ಟ್ಫೋನ್ಗಳು