ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ ಫೋಲ್ಡ್ (Google Pixel Fold) ಸ್ಮಾರ್ಟ್ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಗೂಗಲ್ನ (Google) ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023 ಯಲ್ಲಿ ಗೂಗಲ್ ಸಂಸ್ಥೆಯ ಚೊಚ್ಚಲ ಮಡಚುವ ಫೋನ್ ಅನಾವರಣಗೊಂಡಿದೆ. ಸಾಕಷ್ಟು ವಿಶೇಷತೆಗಳಿರುವ ಈ ಫೋನ್ನ ಡಿಸೈನ್ ಅದ್ಭುತವಾಗಿದ್ದು ಟೆಕ್ ಪ್ರಿಯರ ಕಣ್ಣು ಕುಕ್ಕುತ್ತಿದೆ. ಇದು ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಕೂಡ ನೀಡಲಾಗಿದೆ. ಹಾಗಾದರೆ ಗೂಗಲ್ ಪಿಕ್ಸೆಲ್ (Google Pixel) ಫೋಲ್ಡ್ ಫೋನ್ನ ವಿಶೇಷತೆ ಏನು?, ಬೆಲೆ ಎಷ್ಟು ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಗೂಗಲ್ ಪಿಕ್ಸೆಲ್ ಫೋಲ್ಡ್ ಸ್ಮಾರ್ಟ್ಫೋನ್ಗೆ ಜಾಗತಿಕ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ $ 1799 ಇದೆ. ಭಾರತಕ್ಕೆ ಹೋಲಿಸಿದರೆ ಇದರ ಬೆಲೆ 1,47,400 ರೂ. ಎನ್ನಬಹುದು. ಇದು 12GB RAM + 256GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಫೋನ್ ಭಾರತದ ಮಾರುಕಟ್ಟೆಗೆ ಇನ್ನಷ್ಟೆ ಬರಬೇಕಿದದೆ. ಸದ್ಯಕ್ಕೆ ಯುಎಸ್, ಜರ್ಮನಿ, ಜಪಾನ್ ಮತ್ತು ಯುಕೆಗಳಲ್ಲಿ ಲಭ್ಯವಿರುತ್ತದೆ.
WhatsApp New Feature: ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಿ: ವಾಟ್ಸ್ಆ್ಯಪ್ನಲ್ಲಿ ಬಂತು ಅಚ್ಚರಿಯ ಫೀಚರ್
ಫೀಚರ್ಸ್ ಏನಿದೆ?:
ಗೂಗಲ್ ಪಿಕ್ಸೆಲ್ ಫೋಲ್ಡ್ ಫೋನ್ 5.8 ಇಂಚಿನ ಕವರ್ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 7.6-ಇಂಚಿನ ಪ್ರಾಥಮಿಕ ಡಿಸ್ ಪ್ಲೇಯೊಂದಿಗೆ ರಿಲೀಸ್ ಆಗಿದೆ. ಈ ಎರಡೂ ಸ್ಕ್ರೀನ್‌ಗಳು 120Hz ರಿಫ್ರೆಶ್ ದರವನ್ನು ಪಡೆದುಕೊಂಡಿದ್ದು, OLED ಪ್ಯಾನೆನ್ನಿಂದ ಕೂಡಿದೆ. ಬಲಿಷ್ಠವಾದ ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ. ಆಗಸ್ಟ್ ಬಳಿಕ ಈ ಫೋನ್ ಹೊಸದಾಗಿ ಬಿಡುಗಡೆ ಆಗಲಿರುವ ಆಂಡ್ರಾಯ್ಡ್ 14 ಓಎಸ್ನಲ್ಲಿ ಕೆಲಸ ಮಾಡುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಅವುಗಳು ಕ್ರಮವಾಗಿ 48MP + 10.8MP + 10.8MP ಸೆನ್ಸಾರ್ ಸಪೋರ್ಟ್ ಪಡೆದಿವೆ. ಇದರಲ್ಲಿರುವ 48 ಮೆಗಾ ಪಿಕ್ಸಲ್ ಕ್ಯಾಮೆರಾ 5x ಆಪ್ಟಿಕಲ್ ಜೂಮ್ ಸೌಲಭ್ಯ ಪಡೆದಿದೆ. ಹಾಗೆಯೇ ಈ ಫೋನ್ ಕವರ್ ಸ್ಕ್ರೀನ್‌ನಲ್ಲಿ 8.3 ಮೆಗಾ ಪಿಕ್ಸಲ್ ಕ್ಯಾಮೆರಾ ಒಳಗೊಂಡಿದೆ. ಇದರ ಜೊತೆಗೆ ರಿಯಲ್ ಟೋನ್, ನೈಟ್ ಸೈಟ್, ಪೋರ್ಟ್ರೇಟ್ ಫೋಟೋಗ್ರಫಿ ಮತ್ತು 10-ಬಿಟ್ HDR ವಿಡಿಯೋದೊಂದಿಗೆ ಸೂಪರ್ ರೆಸ್ ಜೂಮ್ ಆಯ್ಕೆಯನ್ನು ಹೊಂದಿದೆ.
ಗೂಗಲ್ ಪಿಕ್ಸೆಲ್ ಫೋಲ್ಡ್ ಫೋನ್ 4,800mAh ಬ್ಯಾಟರಿ ಬ್ಯಾಕ್‌ಅಪ್ ಪವರ್ ಪಡೆದಿದ್ದು, ಇದಕ್ಕೆ ಪೂರಕವಾಗಿ 30W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಇದು IPX8 ರೇಟಿಂಗ್ ಹೊಂದಿದ್ದು, ಈ ಮೂಲಕ ನೀರಿಗೆ ಬಿದ್ದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಪಿಕ್ಸೆಲ್ 7a IP67 ರೇಟಿಂಗ್ನಿಂದ ಕೂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ