Google I/O 2023: ಇಂದು ಗೂಗಲ್ ವಾರ್ಷಿಕ ಸಮ್ಮೇಳನ: ಪಿಕ್ಸೆಲ್ 7a, ಪಿಕ್ಸೆಲ್ ಫೋಲ್ಡ್ ಬಿಡುಗಡೆ ಸಾಧ್ಯತೆ: ಲೈವ್ ವೀಕ್ಷಿಸುವುದು ಹೇಗೆ?
Google I/O 2023 ಈವೆಂಟ್ ಅನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗೂಗಲ್ನ ಇತರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಸಹ ಲಭ್ಯವಿರುತ್ತದೆ.
ಗೂಗಲ್ನ (Google) ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023 ಇಂದು (ಮೇ. 10) ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿರುವ ಶೋರ್‌ಲೈನ್ ಆಂಫಿಥಿಯೇಟರ್‌ನಲ್ಲಿ ಆಯೋಜಿಸಲಾಗಿದೆ. ಕೋವಿಡ್-19 ಬಳಿಕ ಆಯೋಜಿಸುತ್ತಿರುವ ಮೊದಲ I/O ಇದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಮಾರಂಭದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7a (Pixel 7a), ಗೂಗಲ್ ಪಿಕ್ಸೆಲ್ ಫೋಲ್ಡ್ (Pixel Fold) ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ. ಇದರ ಜೊತೆಗೆ AI ಗೆ ಸಂಬಂಧಿಸಿದ ಬಗ್ಗೆ ಕೆಲವು ಮಾಹಿತಿ ಹೊರಬೀಳುವ ಸಂಭವವಿದೆ.
Google I/O 2023 ಈವೆಂಟ್ ಅನ್ನು ಗೂಗಲ್ ಕಂಪನಿಯ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಗೂಗಲ್ನ ಇತರ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮ್ ಸಹ ಲಭ್ಯವಿರುತ್ತದೆ. ಭಾರತೀಯ ಕಾಲಮಾನದ ಪ್ರಕಾರ ಈ ಕಾರ್ಯಕ್ರಮ ರಾತ್ರಿ 10:30ಕ್ಕೆ ಆರಂಭವಾಗಲಿದೆ. ಈ ಸಮಾರಂಭದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನ ಹೊಸ ಆವೃತ್ತಿಯನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. ಕಂಪನಿಯು ಈಗಾಗಲೇ ಆಂಡ್ರಾಯ್ಡ್ 14 ರ ಡೆವಲಪರ್ ಹೊರತಂದಿದೆ, ಆದರೆ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.
WhatsApp New Feature: ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಿ: ವಾಟ್ಸ್ಆ್ಯಪ್ನಲ್ಲಿ ಬಂತು ಅಚ್ಚರಿಯ ಫೀಚರ್
ಇನ್ನು ಸಾಕಷ್ಟು ರೋಚಕತೆ ಸೃಷ್ಟಿಸಿರುವ ಗೂಗಲ್ನ ಚೊಚ್ಚಲ ಮಡಚುವ ಫೋನ್ ಪಿಕ್ಸೆಲ್ ಫೋಲ್ಡ್ ಮಾರುಕಟ್ಟೆಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ. ಆದರೆ, ಕಂಪನಿ ಈ ಬಗ್ಗೆ ಯಾವುದೇ ಮಾಹಿತಿ ಹೊರಹಾಕಿಲ್ಲ. ಮೂಲಗಳ ಪ್ರಕಾರ ಈ ಸ್ಮಾರ್ಟ್‌ಫೋನ್ 7.6-ಇಂಚಿನ ಪ್ರಾಥಮಿಕ ಡಿಸ್ ಪ್ಲೇ ಮತ್ತು 5.8-ಇಂಚಿನ ಕವರ್ ಡಿಸ್ ಪ್ಲೇಯೊಂದಿಗೆ ಅನಾವರಣಗೊಳ್ಳುವ ನಿರೀಕ್ಷೆಯಿದೆ.
ಇದರ ಜೊತೆಗೆ ಗೂಗಲ್ ಪಿಕ್ಸೆಲ್ 7 ಸರಣಿಯ ಮುಂದುವರೆದ ಭಾಗವಾಗಿ ಪಿಕ್ಸೆಲ್ 7a ಫೋನ್ ಇಂದು ರಿಲೀಸ್ ಆಗಲಿದೆ. ಭಾರತದಲ್ಲಿ ಇದರ ಬೆಲೆ 46,000 ರೂ. ಇರಬಹುದು ಎಂದು ಹೇಳಲಾಗಿದೆ. ಲೀಕ್ ಆಗಿರುವ ಮಾಹಿತಿ ಪ್ರಕಾರ ಈ ಫೋನ್ 6.1 ಇಂಚಿನ FHC+ ಡಿಸ್‌ಪ್ಲೇ ಜೊತೆಗೆ, 90hz OLED ಡಿಸ್‌ಪ್ಲೇ ಹೊಂದಿರಲಿದೆ. ಟೆನ್ಸರ್ G2 ಚಿಪ್‌ಸೆಟ್‌ನಲ್ಲೇ ಕಾರ್ಯನಿರ್ವಹಿಸುವಸ ಸಾಧ್ಯತೆ ಇದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನ್ 64 ಮೆಗಾ ಪಿಕ್ಸೆಲ್ನ ಸೋನಿ IMX787 ಸೆನ್ಸರ್ ಹಾಗೂ 12 ಮೆಗಾ ಪಿಕ್ಸೆಲ್ನ ಸೆಕೆಂಡರಿ ಸೆನ್ಸರ್ನೊಂದಿಗೆ ರಿಯರ್ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿರಲಿದೆ. ಇದರ ಜೊತೆಗೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮೆರಾ ಆಯ್ಕೆ ಹೊಂದಿರುವುದು ಬಹುತೇಕ ಖಚಿತವಂತೆ. ಈ ಕ್ಯಾಮೆರಾಗಳು ಅನೇಕ ಆಯ್ಕೆಗಳನ್ನ ಹೊಂದಿದೆ. 4,335mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆ ಆಗಬಹುದು. 5W ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿರಬಹುದು. ಇದರ ಜೊತೆಗೆ ಟ್ರೀಮ್ ಬ್ಯಾಟರಿ ಸೇವರ್ ಮೋಡ್ ಎಂಬ ವಿಶೇಷ ಆಯ್ಕೆಯನ್ನು ಅಳವಡಿಸಲಾಗಿದೆ ಎಂಬ ಸುದ್ದಿಯಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ