Vivo Y78 5G: ಮಾರುಕಟ್ಟೆಗೆ ಬಜೆಟ್ ಬೆಲೆಯ ಹೊಸ ವಿವೊ Y78 5G ಸ್ಮಾರ್ಟ್​ಫೋನ್ ಎಂಟ್ರಿ

ವಿವೋ ಕಂಪನಿ ಹೊಸ ವಿವೋ ವೈ78 5ಜಿ (Vivo Y78 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ.

Vivo Y78 5G: ಮಾರುಕಟ್ಟೆಗೆ ಬಜೆಟ್ ಬೆಲೆಯ ಹೊಸ ವಿವೊ Y78 5G ಸ್ಮಾರ್ಟ್​ಫೋನ್ ಎಂಟ್ರಿ
Vivo Y78 5G
Follow us
|

Updated on: May 11, 2023 | 2:23 PM

ಜಾಗತಿಕ ಮಾರುಕಟ್ಟೆಯಲ್ಲಿ ಇಂದು ಒಂದರ ಹಿಂದೆ ಒಂದರಂತೆ ಹೊಸ ಹೊಸ ಸ್ಮಾರ್ಟ್​ಫೋನುಗಳು (Smartphone) ಬಿಡುಗಡೆ ಆಗುತ್ತಿದೆ. ಅತ್ಯುತ್ತಮ ಕ್ಯಾಮೆರಾ (Camera), ಬ್ಯಾಟರಿ, ಪ್ರೊಸೆಸರ್ ಇರುವ ಕಡಿಮೆ ಬೆಲೆಯ ಮೊಬೈಲ್​ಗಳು ಭರ್ಜರಿ ಸೇಲ್ ಆಗುತ್ತಿದೆ. ಇದೇ ಸಾಲಿನಲ್ಲಿ ಪ್ರಸಿದ್ಧ ವಿವೋ ಸಂಸ್ಥೆ ಹೊಸ ಮೊಬೈಲ್ ಒಂದನ್ನು ಅನಾವರಣ ಮಾಡಿದೆ. ಕೆಲವು ತಿಂಗಳ ತನ್ನ ವೈ ಸರಣಿಯಲ್ಲಿ ವಿವೋ ವೈ78+ 5G ಫೋನ್ ಪರಿಚಯಿಸಿದ್ದ ಕಂಪನಿ ಇದೀಗ ಇದೇ ವೈ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ವಿವೋ ವೈ78 5ಜಿ (Vivo Y78 5G) ಫೋನನ್ನು ಲಾಂಚ್ ಮಾಡಿದೆ. ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಆಕರ್ಷಕ ಕ್ಯಾಮೆರಾ, ಬಲಿಷ್ಠವಾದ ಬ್ಯಾಟರಿ ಸೇರಿದಂತೆ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್​ ಬಗ್ಗೆ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ವಿವೊ Y78 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ವಿದೇಶದಲ್ಲಿ ಮೂರು ಮಾದರಿಯ ಆಯ್ಕೆಯಲ್ಲಿ ಅನಾವರಣಗೊಂಡಿದೆ. ಇದರ 8GB RAM + 128GB ವೇರಿಯಂಟ್‌ ಬೆಲೆಯು CNY 1,399, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 16,600 ರೂ. ಇರಬಹುದು. 8GB RAM + 256GB ಸ್ಟೋರೇಜ್ ಮಾದರಿಗೆ CNY 1,699 (ಭಾರತದಲ್ಲಿ 20,120 ರೂ.) ಹಾಗೂ 12GB RAM + 256GB ವೇರಿಯಂಟ್​ಗೆ CNY 1,999 (23,675 ರೂ.). ಸದ್ಯಕ್ಕೆ ಚೀನಾದಲ್ಲಿ ಅನಾವರಣಗೊಂಡಿರುವ ಈ ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ
Image
National Technology Day: ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?
Image
Google Pixel Fold: ಗೂಗಲ್ ಸಂಸ್ಥೆಯ ಚೊಚ್ಚಲ ಮಡಚುವ ಫೋನ್ ಗೂಗಲ್ ಪಿಕ್ಸೆಲ್ ಫೋಲ್ಡ್‌ ಬಿಡುಗಡೆ: ಬೆಲೆ ಎಷ್ಟು ನೋಡಿ
Image
Google Pixel 7a: ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ: ಈ ಬಾರಿ ಕ್ಯಾಮೆರಾ ಹೇಗಿದೆ ನೋಡಿ
Image
National Technology Day: ಇಂದು ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ: ಇದರ ಇತಿಹಾಸ, ಮಹತ್ವವೇನು?

WhatsApp New Feature: ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಿ: ವಾಟ್ಸ್​ಆ್ಯಪ್​ನಲ್ಲಿ ಬಂತು ಅಚ್ಚರಿಯ ಫೀಚರ್

ಫೀಚರ್ಸ್ ಏನಿದೆ?:

ಇನ್ನು ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ವಿವೊ Y78 ಸ್ಮಾರ್ಟ್‌ಫೋನ್‌ 1,080 x 2,388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.64 ಇಂಚಿನ ಐಪಿಎಸ್ ಎಲ್​ಸಿಡಿ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು ಮೀಡಿಯಾಟೆಕ್ ಡೈಮ್ಸಿಟಿ 7020 ಪ್ರೊಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 13 ಆಧಾರಿತ ಫನ್​ಟಚ್ 3 OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ವಿವೋ Y78 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಆ ಪೈಕಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್​ನ ಪ್ರೈಮರಿ ಕ್ಯಾಮೆರಾ ಅಳವಡಿಸಲಾಗಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್​ನಲ್ಲಿ ನೈಟ್ ಮೋಡ್, ಪೋರ್ಟ್ರೇಟ್ ಲೈಟ್ ಎಫೆಕ್ಟ್, ವಿಡಿಯೋ ಫೇಸ್ ಬ್ಯೂಟಿ, ಸೇರಿದಂತೆ ಅನೇಕ ಎಡಿಟಿಂಗ್ ಆಯ್ಕೆಗಳನ್ನು ನೀಡಿರುವುದು ವಿಶೇಷ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 44W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದೆ. ಜೊತೆಗೆ ಬ್ಲೂಟೂತ್ 5.0, 4ಜಿ ಎಲ್ ಟಿಇ, ವೈ-ಫೈ, 5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಸೈಡ್-ಮೌಂಟೆಡ್ ಫಿಂಗ್​ಪ್ರಿಂಟ್ ಸ್ಕ್ಯಾನರ್ ಅಳವಡಿಸಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ