ಗೂಗಲ್ ಸಂಸ್ಥೆಯ ಬಹುನಿರೀಕ್ಷಿತ ಗೂಗಲ್ ಪಿಕ್ಸಲ್ 6 ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿವೆ. ಗೂಗಲ್ ಪಿಕ್ಸಲ್ 6 ಫೋನ್ ಸರಣಿಯು ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದ ಈ ಫೋನಿನ ಎಲ್ಲಾ ಮಾಹಿತಿಗಳು ಈಗ ಸೋರಿಕೆಯಾಗಿದೆ. ಇದರ ಫೀಚರ್ಸ್ ಗ್ರಾಹಕರನ್ನು ಅಚ್ಚರಿಗೊಳಿಸಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.
ಹೊಸ ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಫೋನ್‌ಗಳು ಆಕರ್ಷಕ ಕ್ಯಾಮೆರಾ ಸೆನ್ಸರ್ ಜೊತೆಗೆ ಬಲಿಷ್ಠ ಬ್ಯಾಟರಿ ಪವರ್ ಹೊಂದಿರಲಿದೆಯಂತೆ. ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಗೂಗಲ್ ಪಿಕ್ಸಲ್ 6 4,614 mAh ಸಾಮರ್ಥ್ಯದ ಬ್ಯಾಟರಿ ಮತ್ತು ಗೂಗಲ್ ಪಿಕ್ಸಲ್ 6 ಪ್ರೊ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಅಂತೆಯೇ ಪಿಕ್ಸಲ್ 6 ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆನ್ಸರ್ ಇರಲಿದ್ದು, ಪಿಕ್ಸಲ್ 6 ಪ್ರೊ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಒಳಗೊಂಡಿರಲಿದೆಯಂತೆ.
ಗೂಗಲ್ ಪಿಕ್ಸಲ್ 6:
ಗೂಗಲ್ ಪಿಕ್ಸಲ್ 6 ಸ್ಮಾರ್ಟ್‌ಫೋನ್ 6.4 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದ್ದು, ಡಿಸ್‌ಪ್ಲೇಯು ಫ್ಲ್ಯಾಟ್ ಮಾದರಿಯಲ್ಲಿ ಇರಲಿದೆ. ಹಿಂಭಾಗದಲ್ಲಿ ಕೇವಲ ಎರಡು ಕ್ಯಾಮೆರಾ ಮಾತ್ರ ಅಳವಡಿಸಲಾಗಿದ್ದು, ಇದು 50 ಮೆಗಾಪಿಕ್ಸೆಲ್ ಮತ್ತು 12 ಮೆಗಾಪಿಕ್ಸೆಲ್ನಿಂದ ಕೂಡಿದೆ. ಏಕೈಕ 8GB RAM ಆಯ್ಕೆಯೊಂದಿಗೆ ಬರಲಿದ್ದು, 128GB ಮತ್ತು 256GB ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆಯಂತೆ.
ಗೂಗಲ್ ಪಿಕ್ಸಲ್ 6 ಪ್ರೊ:
ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ ದೊಡ್ಡದಾದ 6.71 ಇಂಚಿನ ಫೂರ್ಣ ಎಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇ ಕರ್ವ್ ಮಾದರಿಯನ್ನು ಪಡೆದಿದೆ. ಡಿಸ್‌ಪ್ಲೇಯಲ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿರಲಿದೆ ಎಂಬ ಮಾತುಗಳಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ 12 ಮೆಗಾಫಿಕ್ಸೆಲ್ ನೀಡಲಾಗಿದ್ದು, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ನ ಪ್ರಮುಖ ಕ್ಯಾಮೆರಾ, 48 ಮೆಗಾಪಿಕ್ಸೆಲ್ನ ಟೆಲಿಪೋಟೋ ಹಾಗೂ 12 ಮೆಗಾಪಿಕ್ಸೆಲ್ನ ಆಲ್ಟ್ರಾವೈಡ್ ಕ್ಯಾಮೆರಾ ನೀಡಲಾಗಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದು 12 GB RAM ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಗೂಗಲ್ ಪಿಕ್ಸಲ್ 6 ಮತ್ತು ಗೂಗಲ್ ಪಿಕ್ಸಲ್ 6 ಪ್ರೊ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಒಎಸ್ ಸಪೋರ್ಟ್ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಅಧಿಕ ಬ್ಯಾಟರಿ ಜೊತೆಗೆ ವಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಪಡೆಯುವ ನಿರೀಕ್ಷೆಗಳಿವೆ. ಬ್ಲೂಟೂತ್, ವೈಫೈ, ಯುಎಸ್‌ಬಿ-ಸಿ ಯಿಂದ ಯುಎಸ್‌ಬಿ-ಸಿ ಕೇಬಲ್, ಸೌಲಭ್ಯಗಳನ್ನು ಒಳಗೊಂಡಿರಲಿದೆ.
ಇದನ್ನೂ ಓದಿ: Samsung One UI Watch: ಗೂಗಲ್ ಆಧಾರಿತವಾದ ಸ್ಮಾರ್ಟ್ವಾಚ್ ಸಾಫ್ಟ್ವೇರ್ ಒನ್ UI ಸ್ಯಾಮ್ಸಂಗ್ನಿಂದ ಘೋಷಣೆ
(Google Pixel 6 series mobile phone Google Pixel 6 pro and Pixel 6 full specifications surface online. Here is the more details)