Google Pixel 7a: ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ: ಈ ಬಾರಿ ಕ್ಯಾಮೆರಾ ಹೇಗಿದೆ ನೋಡಿ

|

Updated on: May 11, 2023 | 11:25 AM

ಗೂಗಲ್ ಪಿಕ್ಸೆಲ್ 7ಎ (Google Pixel 7a) ಸ್ಮಾರ್ಟ್​ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಸದ್ಯಕ್ಕೆ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ. ಗಳನ್ನು ನಿಗದಿ ಮಾಡಲಾಗಿದೆ.

Google Pixel 7a: ರೋಚಕತೆ ಸೃಷ್ಟಿಸಿದ ಗೂಗಲ್ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ ಬಿಡುಗಡೆ: ಈ ಬಾರಿ ಕ್ಯಾಮೆರಾ ಹೇಗಿದೆ ನೋಡಿ
Google Pixel 7a
Follow us on

ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 7ಎ (Google Pixel 7a) ಸ್ಮಾರ್ಟ್​ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಗೂಗಲ್​ನ (Google) ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023 ಯಲ್ಲಿ ಪಿಕ್ಸೆಲ್ 7a ಫೋನ್ ಲಾಂಚ್ ಆಗಿದೆ. ಅದ್ಭುತ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ 5G ಫೋನ್‌ ಇದಾಗಿದೆ. ಅಚ್ಚರಿ ಎಂದರೆ ಕಳೆದ ವರ್ಷ ಬಿಡುಗಡೆ ಆದ ಪಿಕ್ಸೆಲ್ 6a ಬೆಲೆಯಲ್ಲೇ ಈ ಫೋನ್ ಫೋನ್ ಕೂಡ ಗ್ರಾಹಕರಿಗೆ ಖರೀದಿಗೆ ಸಿಗುತ್ತಿದೆ. ಪಿಕ್ಸೆಲ್ 7a ಗೂಗಲ್‌ನ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಈ ಬಲಿಷ್ಠ ಸ್ಮಾರ್ಟ್​ಫೋನ್​ನ (Smartphone) ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಪಿಕ್ಸೆಲ್‌ 7a ಸ್ಮಾರ್ಟ್​ಫೊನ್ ಭಾರತದಲ್ಲಿ ಸದ್ಯಕ್ಕೆ ಒಂದು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 128GB ಸ್ಟೋರೇಜ್ ಆಯ್ಕೆಗೆ 43,999 ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಫೋನ್‌ ಖರೀದಿಗೆ ವಿಶೇಷ ಆಫರ್‌ ಘೋಷಣೆ ಮಾಡಲಾಗಿದ್ದು, ಹೆಚ್‌ಡಿಎಫ್‌ಸಿ ಕಾರ್ಡ್‌ ಬಳಕೆ ಮಾಡಿಕೊಂಡು ಪಡೆದುಕೊಂಡರೆ ಹೆಚ್ಚುವರಿ 4,000 ರೂ. ಗಳ ರಿಯಾಯಿತಿ ಸಿಗಲಿದೆ. ಇಂದಿನಿಂದಲೇ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮೂಲಕ 39,999 ರೂ. ಗೆ ಸೇಲ್ ಕಾಣುತ್ತಿದೆ.

ಇದನ್ನೂ ಓದಿ
National Technology Day: ಇಂದು ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ: ಇದರ ಇತಿಹಾಸ, ಮಹತ್ವವೇನು?
Pixel 6a: ಪಿಕ್ಸೆಲ್ 7a ಬಿಡುಗಡೆಗೆ ಕ್ಷಣಗಣನೆ: ಪಿಕ್ಸೆಲ್ 6a ಫೋನ್ ಮೇಲೆ ಬಂಪರ್ ಆಫರ್ ಘೋಷಿಸಿದ ಫ್ಲಿಪ್​ಕಾರ್ಟ್
Poco F5 5G: ಭಾರತದಲ್ಲಿ ಬಹುನಿರೀಕ್ಷಿತ ಪೋಕೋ F5 5G ಸ್ಮಾರ್ಟ್​ಫೋನ್ ಬಿಡುಗಡೆ: ಏನು ವಿಶೇಷತೆ?, ಬೆಲೆ ಎಷ್ಟು?
Google I/O 2023: ಇಂದು ಗೂಗಲ್ ವಾರ್ಷಿಕ ಸಮ್ಮೇಳನ: ಪಿಕ್ಸೆಲ್ 7a, ಪಿಕ್ಸೆಲ್ ಫೋಲ್ಡ್ ಬಿಡುಗಡೆ ಸಾಧ್ಯತೆ: ಲೈವ್ ವೀಕ್ಷಿಸುವುದು ಹೇಗೆ?

Tech Tips: ಸೋಲಾರ್ ಚಾರ್ಜರ್​ನಿಂದ ನಿಮ್ಮ ಮೊಬೈಲ್ ಬ್ಯಾಟರಿ ಫುಲ್ ಮಾಡಬಹುದು: ಹೇಗೆ ಗೊತ್ತೇ?

ಫೀಚರ್ಸ್ ಏನಿದೆ?:

ಪಿಕ್ಸೆಲ್‌ 7a ಫೋನ್ 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ ಬೆಂಬಲ ಪಡೆದುಕೊಂಡಿದೆ. 90Hzರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಪಿಕ್ಸಲ್‌ 6aಗೆ ಹೋಲಿಸಿದರೆ ಇದು ಸಾಕಷ್ಟು ಅಪ್‌ಗ್ರೇಡ್ ಹೊಂದಿದೆ. ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್‌ 13 ಓಸ್‌ನೊಂದಿಗೆ ರನ್ ಆಗುತ್ತದೆ. ಆಗಸ್ಟ್‌ ಬಳಿಕ ಈ ಫೋನ್ ಹೊಸದಾಗಿ ಬಿಡುಗಡೆ ಆಗಲಿರುವ ಆಂಡ್ರಾಯ್ಡ್ 14 ಓಎಸ್​ನಲ್ಲಿ ಕೆಲಸ ಮಾಡುತ್ತದೆ.

ಕ್ಯಾಮೆರಾ ಪ್ರಿಯ ನಿದ್ದೆ ಕದ್ದಿರುವ ಈ ಸ್ಮಾರ್ಟ್​ಫೋನ್​ನಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸಲ್​ನಿಂದ ಕೂಡಿದೆ. 13 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮುಂಭಾಗದಲ್ಲಿ ಸಾಮಾನ್ಯ ಪನ್-ಹೋಲ್ ವಿನ್ಯಾಸದ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಪಿಕ್ಸಲ್ 7a ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಅನೇಕ ಪ್ರಮುಖ ಫೀಚರ್ಸ್‌ ಆಯ್ಕೆಯನ್ನು ಪಡೆದುಕೊಂಡಿದೆ.

ಪಿಕ್ಸೆಲ್‌ 7a ಸ್ಮಾರ್ಟ್​ಫೋನ್ 4,410mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. 18W ವೇಗದ ಚಾರ್ಜಿಂಗ್ ತಂತ್ರಜ್ಞಾನ ನೀಡಲಿದೆ. ಜೊತೆಗೆ ವಾಯರ್‌ಲೆಸ್‌ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್‌ ಆಯ್ಕೆ ಸಹ ಇದೆ. IP67 ರೇಟಿಂಗ್‌ ಹೊಂದಿದ್ದು, ಈ ಮೂಲಕ ನೀರಿಗೆ ಬಿದ್ದರೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ