Google I/O virtual event 2021: ಗೂಗಲ್​ನಿಂದ ಮ್ಯಾಜಿಕ್ ವಿಂಡೋ 3D ವಿಡಿಯೋ ಕಾಲ್ ವೈಶಿಷ್ಟ್ಯದ ಪರಿಚಯ

|

Updated on: May 19, 2021 | 4:39 PM

ಗೂಗಲ್​ ಕಂಪೆನಿಯ I/O ವಾರ್ಷಿಕ ಡೆವಪರ್ ಸಮಾವೇಶದಲ್ಲಿ ವಿವಿಧ ಪ್ರಾಡಕ್ಟ್​ಗಳಿಗೆ ಹೊಸ ಫೀಚರ್​ಗಳನ್ನು ಸೇರ್ಪಡೆ ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಈ 3D ವಿಡಿಯೋ ಚಾಟ್ ಆಸಕ್ತಿಕರವಾಗಿದೆ.

Google I/O virtual event 2021: ಗೂಗಲ್​ನಿಂದ ಮ್ಯಾಜಿಕ್ ವಿಂಡೋ 3D ವಿಡಿಯೋ ಕಾಲ್ ವೈಶಿಷ್ಟ್ಯದ ಪರಿಚಯ
ಸಾಂದರ್ಭಿಕ ಚಿತ್ರ
Follow us on

ಗೂಗಲ್​ನ ವರ್ಚುವಲ್ I/O 2021ರ ಕಾರ್ಯಕ್ರಮದಲ್ಲಿ ಅದರ ವಿವಿಧ ಪ್ರಾಡಕ್ಟ್​ಗಳಿಗೆ ಹೊಸ ವೈಶಿಷ್ಟ್ಯಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಮ್ಯಾಪ್ಸ್, ಫೋಟೋಸ್, ಸರ್ಚ್, ವೇರ್​OS ಮತ್ತು ವರ್ಕ್​ಸ್ಪೇಸಸ್ ಇತರ ಪ್ರಾಡಕ್ಟ್​ಗಳಿಗೆ ಹೊಸ ಫೀಚರ್​ಗಳನ್ನು ಸೇರ್ಪಡೆ ಮಾಡಿದೆ. ಅದರಲ್ಲಿ ಹುಸಿ- ವಿಡಿಯೋ ಚಾಟ್ ತಂತ್ರಜ್ಞಾನ ಇದ್ದು, ಅದಕ್ಕೆ ಪ್ರಾಜೆಕ್ಟ್ ಸ್ಟಾರ್​ಲೈನ್ ಎಂದು ಹೆಸರಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಲೈಫ್​ ಸೈಜ್​ನಲ್ಲಿ ಮತ್ತು ಮೂರು ಆಯಾಮದಲ್ಲಿ (ತ್ರೀಡಿ) ನೋಡಬಹುದು ಎಂದು ಗೂಗಲ್ ಹೇಳಿದೆ.

ಆಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ ಮಾತನಾಡಿ, ಪ್ರಾಜೆಕ್ಟ್ ಸ್ಟಾರ್​ಲೈನ್​ ಎಂಬುದು ತಂತ್ರಜ್ಞಾನ ಪ್ರಾಜೆಕ್ಟ್. ಅದರಲ್ಲಿ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್​ಗಳಲ್ಲಿ ಆಧುನಿಕತೆ ಕಾಣಬಹುದು. ಜನರು ದೂರವಿದ್ದರೂ ಹತ್ತಿರ ಇದ್ದಂತೆ ಅನುಭವವಾಗುತ್ತದೆ. ಇದೊಂದು ಪ್ರಯೋಗಾತ್ಮಕವಾದ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್​ ವ್ಯವಸ್ಥೆಯಾಗಿದ್ದು, ಕಂಪ್ಯೂಟರ್ ಸೈನ್ಸ್ ನಿಯಂತ್ರಿತವಾಗಿ ಕೆಲಸ ಮಾಡುತ್ತದೆ. ಹೈ ರೆಸಲ್ಯೂಷನ್ ಕ್ಯಾಮೆರಾಗಳು ಮತ್ತು ಡೆಪ್ತ್ ಸೆನ್ಸರ್​ಗಳು ಜನರ ವಿಡಿಯೋ ಕಾನ್ಫರೆನ್ಸಿಂಗ್​ಗೆ ರಿಯಲ್ ಟೈಮ್ 3D ಮಾಡೆಲ್​ಗಳು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಪ್ರತಿ ವರ್ಷವೂ ಗೂಗಲ್​ ಕಂಪೆನಿಯಿಂದ I/O ವಾರ್ಷಿಕ ಡೆವಪರ್ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಇದು ಪ್ರತಿ ವರ್ಷದ ಕಾರ್ಯಕ್ರಮವಾದರೂ ಬಹಳ ಮುಖ್ಯವಾದ ಸಮಾವೇಶ. ಈ ವರ್ಷದ ಕಾರ್ಯಕ್ರಮ ವರ್ಚುವಲಿ ನಡೆಯುತ್ತಿದ್ದು, ಗುರುವಾರದ ತನಕ ಮುಂದುವರಿಯಲಿದೆ.

ಇದನ್ನೂ ಓದಿ: ಗೂಗಲ್​ ಪೇ ಬಳಕೆದಾರರಿಗೊಂದು ಗುಡ್​ನ್ಯೂಸ್; ಯುಎಸ್​ನಲ್ಲಿದ್ದುಕೊಂಡು, ಭಾರತದಲ್ಲಿದ್ದವರಿಗೂ ಹಣ ವರ್ಗಾವಣೆ ಮಾಡಬಹುದು !

(Google company unveils various new features to it’s products and also 3D video call window in annual event)