ಈ ಬೇಸಿಗೆಗೆ ಎಸಿ ಖರೀದಿ ಮಾಡಲೇಬೇಕೆಂದು ಯೋಚಿಸುತ್ತಿದ್ದೀರಾ?-ಇಲ್ಲಿವೆ ನೋಡಿ ಕಡಿಮೆ ಬೆಲೆಯ, ಉತ್ತಮ ವಿಂಡೋ ಎಸಿಗಳ ಪಟ್ಟಿ

ಸಣ್ಣ ಸ್ಥಳಗಳಿಗೆ ಹೊಂದಿಕೆಯಾಗುವ ಎಸಿ ಎಂದರೆ ಬ್ಲ್ಯೂ ಸ್ಟಾರ್​ ಬ್ರ್ಯಾಂಡ್​​ನ 0.75 ಟನ್​ 3 ಸ್ಟಾರ್​ ಏರ್​ ಕಂಡೀಶನರ್​. ಬಾಳಿಕೆ ಮತ್ತು ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ.

ಈ ಬೇಸಿಗೆಗೆ ಎಸಿ ಖರೀದಿ ಮಾಡಲೇಬೇಕೆಂದು ಯೋಚಿಸುತ್ತಿದ್ದೀರಾ?-ಇಲ್ಲಿವೆ ನೋಡಿ ಕಡಿಮೆ ಬೆಲೆಯ, ಉತ್ತಮ ವಿಂಡೋ ಎಸಿಗಳ ಪಟ್ಟಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Apr 09, 2021 | 4:23 PM

ಈಗಂತೂ ಬೇಸಿಗೆ ಕಾಲ.. ದಿನದಿನವೂ ಸೆಖೆಯ ಪ್ರಮಾಣ ಹೆಚ್ಚುತ್ತಿದೆ. ಇಡೀ ದಿನ ಫ್ಯಾನ್ ಹಾಕಿಕೊಂಡಿರುವುದಕ್ಕಿಂತ ಮನೆಗೆ ಎಸಿ ಅಳವಡಿಸಿಕೊಳ್ಳೋಣ ಎಂದು ಸ್ವಾಭಾವಿಕವಾಗಿಯೇ ಅನ್ನಿಸುತ್ತಿರಬಹುದು. ಹೀಗೆ Air Conditioner ಖರೀದಿಗೆ ಹೋಗುವ ಮುನ್ನ ಉತ್ತಮ ಯಾವುದು? ಬೆಲೆ ಎಷ್ಟು ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ವಿಂಡೋ ಎಸಿ ಬೇಕೋ, ಸ್ಪ್ಲಿಟ್​ ಎಸಿಯೋ ಎಂಬಿತ್ಯಾದಿ ಗೊಂದಲಕ್ಕೆ ಬೀಳುತ್ತಾರೆ. ಆದರೆ ಬಹುತೇಕರು ಸಾಮಾನ್ಯವಾಗಿ 25000 ಮತ್ತು ಅದಕ್ಕಿಂತ ಕೆಳಗಿನ ಬೆಲೆಯ ವಿಂಡೋ ಎಸಿ ಖರೀದಿಗೇ ಮುಂದಾಗುತ್ತಾರೆ ಮತ್ತು ಅದರಲ್ಲೇ ಅತ್ಯುತ್ತಮ ಬ್ರ್ಯಾಂಡ್ ಯಾವುದು ಎಂದು ಪರಿಶೀಲನೆ ಮಾಡುತ್ತಾರೆ. ವಿಂಡೋ ಎಸಿಗಳು ಪೋರ್ಟೇಬಲ್ ಆಗಿರುವುದರಿಂದ ಹೆಚ್ಚಿನ ಗ್ರಾಹಕರ ಆಯ್ಕೆ ಇದಾಗಿರುತ್ತದೆ. ಹೀಗೆ ಖರೀದಿಗೂ ಮೊದಲು ಎಸಿಯ ಗುಣಮಟ್ಟ, ಬಾಳಿಕೆ, ಅದಕ್ಕೆ ವ್ಯಯವಾಗುವ ವಿದ್ಯುತ್​.. ಹೀಗೆ ಹಲವು ಆಯಾಮಗಳಲ್ಲಿ ಗ್ರಾಹಕರಾದವರು ಪರಿಶೀಲನೆ ಮಾಡಿಕೊಳ್ಳಲೇಬೇಕಾಗುತ್ತದೆ. ಈ ಗೊಂದಲ ಪರಿಹಾರಕ್ಕಾಗಿ 25,000 ರೂಪಾಯಿಯ ಆಸುಪಾಸಲ್ಲೇ ಸಿಗುವ ವಿಂಡೋ ಎಸಿಗಳ ಬಗ್ಗೆ ನಾವಿಲ್ಲಿ ಒಂದಷ್ಟು ಮಾಹಿತಿ ನೀಡಿದ್ದೇವೆ.

ಬ್ಲ್ಯೂ ಸ್ಟಾರ್​ 0.75 ಟನ್​ 3 ಸ್ಟಾರ್​ ವಿಂಡೋ ಎಸಿ (Blue Star 0.75 ton 3 star window AC) ಸಣ್ಣ ಸ್ಥಳಗಳಿಗೆ ಹೊಂದಿಕೆಯಾಗುವ ಎಸಿ ಎಂದರೆ ಬ್ಲ್ಯೂ ಸ್ಟಾರ್​ ಬ್ರ್ಯಾಂಡ್​​ನ 0.75 ಟನ್​ 3 ಸ್ಟಾರ್​ ಏರ್​ ಕಂಡೀಶನರ್​. ಬಾಳಿಕೆ ಮತ್ತು ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ. ಈ 0.75 ಟನ್​ 3 ಸ್ಟಾರ್​ ವಿಂಡೋ ಎಸಿಯಲ್ಲಿ ಒಳಭಾಗದಲ್ಲಿ ಅಕ್ಯುಮುಲೇಟರ್ಸ್​ ಅಳವಡಿಸಿರಲಾಗುತ್ತದೆ. ಹಾಗೇ ಕಡಿಮೆ ವಿದ್ಯುಚ್ಛಕ್ತಿ ಬಳಸಿ, ಹೆಚ್ಚು ತಂಪು ನೀಡುವ ರೀತಿಯಲ್ಲಿ ಇದರಲ್ಲಿನ ಕಂಪ್ರೆಸ್ಸರ್​​ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರಣಕ್ಕೆ ಇಂಥ ಎಸಿಗಳ ದಕ್ಷತೆ ಹೆಚ್ಚಾಗಿದ್ದು, ಇವು ವ್ಯಯ ಮಾಡುವ ವಿದ್ಯುತ್ ಪ್ರಮಾಣ ಕಡಿಮೆ ಇರುತ್ತದೆ. ಇದು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಅನುಕೂಲವಾಗಿರುವ ಏರ್​ ಕಂಡೀಶನರ್​ ಆಗಿದ್ದು, ಇದರಲ್ಲಿ ಇತ್ತೀಚಿನ ಶೀತಕ R410A ವನ್ನು ಬಳಸಲಾಗುತ್ತಿದೆ. ಈ ಎಸಿಗೆ ಅಂದಾಜು 23000 ರೂ.ಗಳಷ್ಟು ಬೆಲೆ ಇರುತ್ತದೆ.

ವೋಲ್ಟಾಸ್​​ನ 0.75 ಟನ್​ 2 ಸ್ಟಾರ್ ವಿಂಡೋ ಎಸಿ (Voltas 0.75 Ton 2 Star Window AC) ಸಣ್ಣ ಕೋಣೆಗೆ ಅಳವಡಿಸಲು ಎಸಿ ಖರೀದಿ ಮಾಡುತ್ತಿದ್ದೀರಿ ಎಂದಾದರೆ ವೋಲ್ಟಾಸ್​​ನ 0.75 ಟನ್​ 2 ಸ್ಟಾರ್ ವಿಂಡೋ ಎಸಿ ಕೊಳ್ಳುವುದು ತುಂಬ ಒಳಿತು. ಬಿಸಲಿನ ತಾಪ 50 ಡಿಗ್ರಿ ಸೆಲ್ಸಿಯಸ್​ ಉಷ್ಣತೆಯಿದ್ದಾಗಲೂ ಈ ಎಸಿಗಳು ತುಂಬ ತಂಪು ನೀಡಬಲ್ಲವು ಹಾಗೇ, ತುಂಬ ಕಡಿಮೆ ಪ್ರಮಾಣದ ವಿದ್ಯುತ್ ಸಾಕು. ಇದರಿಂದ ವಿದ್ಯುತ್ ಬಿಲ್​ ಹೆಚ್ಚು ಬರಬಹುದು ಎಂಬ ತಲೆಬಿಸಿಯೂ ಇರುವುದಿಲ್ಲ. ಈ ವಿಂಡೋ ಎಸಿಯ ಬೆಲೆ 20,000 ರೂಪಾಯಿ. ಇನ್ನು ಇದರ ಪ್ಯಾನೆಲ್​​ನ್ನು ಸುಲಭವಾಗಿ ತೆಗೆಯಬಹುದಾಗಿದ್ದು, ಸ್ವಚ್ಛತೆ, ನಿರ್ವಹಣೆಗೆ ತುಂಬ ಅನುಕೂಲವಾಗಿದೆ. ವೋಲ್ಟಾಸ್​ನ ಈ ಎಸಿಯಲ್ಲಿ ಇನ್ವರ್ಟರ್​ ಕಂಪ್ರೆಸ್ಸರ್​​ಗಳು ಇರುವುದಿಲ್ಲ.

ವೋಲ್ಟಾಸ್​ 0.8ಟನ್​ 3 ಸ್ಟಾರ್​ ವಿಂಡೋ ಎಸಿ (Voltas 0.8 Ton 3 Star Window AC) ವೋಲ್ಟಾಸ್​ ಕಂಪನಿಯ ಈ 0.8 ಟನ್​ 3ಸ್ಟಾರ್​ ವಿಂಡೋ ಎಸಿ ಕೂಡ ತುಂಬ ಒಳ್ಳೆಯದೇ. ಎಲ್ಲ ಹವಾಮಾನಕ್ಕೂ ಸೂಕ್ತವೆನಿಸುವ ಏರ್​ಕಂಡೀಶನರ್ ಇದು. ಈ ಎಸಿ ತನ್ನ ಸುತ್ತಲೂ ತಂಪಾಗಿಡುತ್ತದೆ. ಇದರಲ್ಲಿರುವ ಡಿಹ್ಯೂಮಿಡಿಫೈಯರ್​ ಮನೆಯೊಳಗಿನ ಆರ್ದ್ರತೆಯನ್ನು ಗ್ರಹಿಸುತ್ತದೆ. ಕಡಿಮೆ ವಿದ್ಯುತ್​ ವ್ಯಯಿಸುವ ಜತೆಯಲ್ಲಿ ಹಿತಕರವಾದ ತಂಪು ನೀಡುತ್ತದೆ. ಇದರ ಬೆಲೆ 22,490 ರೂಪಾಯಿ.

ಅಮೆಜಾನ್ ಬೇಸಿಕ್ಸ್ 0.75 ಟನ್ 3 ಸ್ಟಾರ್ ವಿಂಡೋ ಎಸಿ (AmazonBasics 0.75 Ton 3 star Window AC ) ಅಮೆಜಾನ್ ಬೇಸಿಕ್ಸ್ 0.75 ಟನ್ 3 ಸ್ಟಾರ್ ವಿಂಡೋ ಎಸಿಯಲ್ಲಿ ಸ್ವಿಂಗ್ ಮೆಮರಿ ಫಂಕ್ಷನ್​, ಸ್ಲೀಪ್ ಮೋಡ್ ಮತ್ತು ಸ್ವತಂತ್ರ ಡಿಹ್ಯೂಮಿಡಿಫೈಯರ್​ಗಳಿದ್ದು ಸುತ್ತಲೂ ತಂಪು ಹರಡುವಂತೆ ವಿನ್ಯಾಸ ರೂಪಿಸಲಾಗಿದೆ. ಎಲ್ಲ ಕಾಲದ ಹವಾಮಾನಕ್ಕೂ ಸೂಕ್ತವಾಗಿದ್ದು, ಬೆಲೆ 24,999 ರೂ. ಎಸಿಯ ಯಾವುದೇ ಭಾಗಕ್ಕೆ ತೊಂದರೆಯಾದರೆ ಕೂಡಲೇ ಸ್ವಯಂಚಾಲಿತವಾಗಿ ಬಂದ್ ಆಗುತ್ತದೆ. ಇದರಿಂದಾಗಿ ಎಸಿಯ ಮುಖ್ಯ ಸಿಸ್ಟಂ ರಕ್ಷಿಸಲ್ಪಡುತ್ತದೆ. ಹಾಗೇ ಯಾವುದೇ ಸಮಸ್ಯೆ ಆದಾದ ಎರರ್​ ಕೋಡ್​ ಕೂಡ ತೋರಿಸುತ್ತದೆ. ಇದು ಆಟೋ ಮೋಡ್​ ಎಸಿಯಾಗಿದ್ದು, ಆಯಾ ಹವಾಮಾನಕ್ಕೆ ತಕ್ಕಂತೆ ಕೂಲಿಂಗ್​ ಮಟ್ಟವನ್ನು ಬದಲಿಸಿಕೊಳ್ಳುತ್ತದೆ.

ಒ ಜನರಲ್​ ವಿಂಡೊ ಎಸಿ 0.75 ಟನ್ (O’General Window AC 0.75 Ton) ​ಈ ಏರ್​ಕಂಡೀಷನರ್​ ನಿಜಕ್ಕೂ ಆಹ್ಲಾದಕರ ತಂಪನ್ನು ನೀಡುತ್ತದೆ. ಇದು ಕೂಡ ಜಾಸ್ತಿ ವಿದ್ಯುತ್ ವ್ಯಯ ಮಾಡುವುದಿಲ್ಲ. ಖಂಡಿತ ಕೊಟ್ಟ ಹಣ ವ್ಯರ್ಥವಾಗುವುದಿಲ್ಲ. ಇದರಲ್ಲಿನ ಕಂಪ್ರೆಸ್ಸರ್​ಗಳು ಸ್ವಚ್ಛ, ತಂಪು ಗಾಳಿಯನ್ನು ಸೂಸುತ್ತವೆ. ಇದು ಗ್ರಾಹಕ ಸ್ನೇಹಿ ಎಸಿಯಾಗಿದ್ದು, ಬೆಲೆ 25,369 ರೂಪಾಯಿ.

ಇದನ್ನೂ ಓದಿ: Corona Curfew Guidelines: ನಾಳೆಯಿಂದಲೇ ನೈಟ್ ಕರ್ಫ್ಯೂ; ಏನಿರುತ್ತೆ ಏನಿರಲ್ಲ?

Ugadi Rashi Bhavishya: ಯುಗಾದಿ ಭವಿಷ್ಯ 2021- ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ದ್ವಾದಶ ರಾಶಿಗಳ ಭವಿಷ್ಯ

(Here is a list of Air Conditioners Under Rs 25,000 RS)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ