ಇಂದು ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ಫೋನ್ಗಳಿಗೆ (Smartphone) ಎಲ್ಲಿಲ್ಲದ ಬೇಡಿಕೆ ಇದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಗೆ ತಿಂಗಳಿಗೆ ಕಡಿಮೆ ಎಂದರೂ 5 ರಿಂದ 8 ಬಜೆಟ್ ಫೋನುಗಳು ಲಗ್ಗೆಯಿಡುತ್ತವೆ. ಇವುಗಳಲ್ಲಿ ಯಶಸ್ಸು ಸಾಧಿಸುವುದು ಕೆಲವೇ ಕೆಲವು ಮೊಬೈಲ್ಗಳು ಮಾತ್ರ. ಇವು ಕಡಿಮೆ ಬೆಲೆಯದ್ದಾಗಿದ್ದರೂ ಆಕರ್ಷಕ ಬ್ಯಾಟರಿ, ಕ್ಯಾಮೆರಾ, ಪ್ರೊಸೆಸರ್ಗಳಿಂದ ಆವೃತ್ತವಾಗಿರುತ್ತವೆ. ಇವುಗಳು ಬೆಲೆಗೆ ತಕ್ಕಂತಹ ಫೀಚರ್ಗಳಿಂದ ಕೂಡಿವೆ. ಹಾಗಾದರೆ 10,000 ರೂ. ಅಡಿಯಲ್ಲಿ ನೀವು ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.
ಪೋಕೋ M6 ಪ್ರೊ 5G:
ಪೋಕೋ M6 ಪ್ರೊ 5G ಸ್ಮಾರ್ಟ್‌ಫೋನ್ 6.79-ಇಂಚಿನ FHD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 4 Gen 2 SoC ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 13-ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ, ಇದು 50-ಮೆಗಾಪಿಕ್ಸೆಲ್ AI ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇರಿಸಲಾಗಿದೆ. ಫ್ಲಿಪ್ಕಾರ್ಟ್ನಲ್ಲಿ ಇದನ್ನು ಆಫರ್ ಮೂಲಕ 10,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
ಕಳೆದ 6 ತಿಂಗಳಲ್ಲಿ ನೀವು ಕಾಲ್ನಲ್ಲಿ ಯಾರೊಂದಿಗೆ ಎಷ್ಟು ಮಾತನಾಡಿದ್ದೀರಿ?: ಈ ಆ್ಯಪ್ ಎಲ್ಲಾ ಸತ್ಯ ತಿಳಿಸುತ್ತೆ
ರೆಡ್ಮಿ 13C:
ರೆಡ್ಮಿ 13C 6.74-ಇಂಚಿನ HD+ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G85 ಚಿಪ್‌ಸೆಟ್ ಅನ್ನು MP2 GPUG7 ನೊಂದಿಗೆ ಜೋಡಿಸಲಾಗಿದೆ. ಈ ಬಜೆಟ್ ಸ್ಮಾರ್ಟ್‌ಫೋನ್ 8GB ಯ RAM ಜೊತೆಗೆ 8GB ವರ್ಚುವಲ್ RAM ಮತ್ತು 256GB ವರೆಗಿನ UFS 2.2 ಸಂಗ್ರಹಣೆಯ ಬೆಂಬಲದೊಂದಿಗೆ ಬರುತ್ತದೆ. ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಪ್ರಾಥಮಿಕ ಸಂವೇದಕ, 2MP ಮ್ಯಾಕ್ರೋ ಲೆನ್ಸ್ ಮತ್ತು ಇನ್ನೊಂದು 2MP ಲೆನ್ಸ್‌ನೊಂದಿಗೆ ಬರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ.
ರಿಯಲ್ ಮಿ C53:
ರಿಯಲ್ ಮಿ C53 ಸ್ಮಾರ್ಟ್‌ಫೋನ್ 6.74-ಇಂಚಿನ 90Hz ಡಿಸ್ಪ್ಲೇಯೊಂದಿಗೆ ARM Mali-G57 GPU ಮತ್ತು 12nm ಜೊತೆಗೆ 1.82GHz CPU ವರೆಗೆ ಆಕ್ಟಾ-ಕೋರ್ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಈ ಸ್ಮಾರ್ಟ್ಫೋನ್ನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಇದೆ. ಇದು 108MP ಅಲ್ಟ್ರಾ ಕ್ಲಿಯರ್ ಕ್ಯಾಮೆರಾದೊಂದಿಗೆ 1080P/30fps, 720P/30fps ಮತ್ತು 480P/30fps ವರೆಗಿನ ವಿಡಿಯೋ ರೆಕಾರ್ಡಿಂಗ್ ಬೆಂಬಲವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, 8MP AI ಸೆಲ್ಫಿ ಕ್ಯಾಮೆರಾ ಇದೆ. ಮುಂಭಾಗದ ಕ್ಯಾಮೆರಾ 720P/30fps ವಿಡಿಯೋ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.
ಲಾವಾ ಬ್ಲೇಜ್ 5G:
ಲಾವಾ ಬ್ಲೇಜ್ 5G ಫೋನ್ 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ HD+ IPS ಡಿಸ್ಪ್ಲೇಯನ್ನು ಹೊಂದಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ನಿಂದ ಚಾಲಿತವಾಗಿದೆ. LPDDR4X ಮೆಮೊರಿ ಮತ್ತು UFS 2.2 ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಹೊಸ ರೂಪಾಂತರವು 1TB ವರೆಗೆ ಮೆಮೊರಿಯನ್ನು ವಿಸ್ತರಿಸಲು ಮೆಮೊರಿ ಕಾರ್ಡ್ ಸ್ಲಾಟ್ ಅನ್ನು ಸಹ ಪಡೆಯುತ್ತದೆ. ಬ್ಯಾಟರಿ ಬಾಳಿಕೆಗೆ ಸಂಬಂಧಿಸಿದಂತೆ, ಸಾಧನವು 7nm SoC ಮೂಲಕ ಆಪ್ಟಿಮೈಸ್ ಮಾಡಲಾದ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಅನ್‌ಲಾಕ್ ಮಾಡಲು/ಲಾಕ್ ಮಾಡಲು ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M13:
ಈ ಸ್ಮಾರ್ಟ್‌ಫೋನ್ 6.6-ಇಂಚಿನ FHD+ LCD ಇನ್ಫಿನಿಟಿ O ಡಿಸ್ಪ್ಲೇ ಜೊತೆಗೆ 1080 x 2408 ಪಿಕ್ಸೆಲ್ಗಳ ರೆಸಲ್ಯೂಶನ್ ಹೊಂದಿದೆ. ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಮ್ ಆಧಾರಿತ One UI ನಲ್ಲಿ ರನ್ ಆಗುತ್ತದೆ. ಈ ಫೋನ್ ಮುಂಭಾಗದಲ್ಲಿ f/2.2 ದ್ಯುತಿರಂಧ್ರದೊಂದಿಗೆ 8MP ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ, 50MP ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ