Kannada News Technology Holi 2022 Here is the simple Tricks to Download and Share WhatsApp Stickers on Android iPhone
Holi 2022: ವಾಟ್ಸ್ಆ್ಯಪ್ನಲ್ಲಿ ಹೋಳಿ ಸ್ಟಿಕ್ಕರ್ ಡೌನ್‌ಲೋಡ್ ಮತ್ತು ಕಳುಹಿಸುವುದು ಹೇಗೆ?: ಇಲ್ಲಿದೆ ನೋಡಿ
WhatsApp Holi Stickers: ವಾಟ್ಸ್ಆ್ಯಪ್ ಮೂಲಕ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ? ಇತರರರಿಗೆ ಸೆಂಡ್ ಮಾಡುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳೋಣ.
ನೋವು, ದುಃಖಗಳನ್ನು ಮರೆಸಿ, ಬಣ್ಣವೆಂಬ ಓಕುಳಿಯಲ್ಲಿ ಜಾತಿ – ಧರ್ಮದ ಭೇದವಿಲ್ಲದೆ, ಕಿರಿಯ – ಹಿರಿಯರೆನ್ನುವ ಮೇಲು ಕೀಳುಗಳಿಲ್ಲದೆ ಸರ್ವ ಮನುಕುಲವು ಸಡಗರದಿಂದ ಆಚರಿಸುವ ಹಬ್ಬ ಈ ಹೋಳಿ (Holi 2022). ಈ ಬಾರಿ ಹೋಳಿ ಹಬ್ಬವನ್ನು ಮಾರ್ಚ್ 18 ರಂದು ಶುಕ್ರವಾರ ದೇಶದ ಮೂಲೆ ಮೂಲೆಯಲ್ಲೂ ಆಚರಿಸಲಾಗುತ್ತದೆ. ಹೋಳಿ ಹಬ್ಬವನ್ನು ಪ್ರತೀವರ್ಷ ಫಾಲ್ಗುಣ ಮಾಸದ ಪ್ರತಿಪಾದ ತಿಥಿಯ, ಕೃಷ್ಣ ಪಕ್ಷದಲ್ಲಿ ಆಚರಿಸಲಾಗುತ್ತದೆ. ಹೀಗೆ ಹೋಳಿ ಹಬ್ಬಕ್ಕೆ ಶುಭಾಶಯಗಳನ್ನು ಕೋರುವುದಕ್ಕೆ ಹೆಚ್ಚಿನ ಜನರು ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ತಮ್ಮ ಭಾವನೆಗಳನ್ನ ತಮ್ಮ ಸ್ನೇಹಿತರ ಜೊತೆ ಕುಟುಂಬದ ಸದಸ್ಯರ ಜೊತೆಗೆ ಹಂಚಿಕೊಳ್ಳುವುದಕ್ಕೆ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಸಹಾಯಕವಾಗಿದೆ. ಅದರಲ್ಲೂ ಸ್ಟಿಕ್ಕರ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಈ ನಿಟ್ಟಿನಲ್ಲಿ ವಾಟ್ಸ್ಆ್ಯಪ್ (WhatsApp) ಮೂಲಕ ಹೋಳಿ ಹಬ್ಬದ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ (Download) ಮಾಡುವುದು ಹೇಗೆ? ಇತರರರಿಗೆ ಸೆಂಡ್ ಮಾಡುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳೋಣ.
ವಾಟ್ಸ್ಆ್ಯಪ್ನಲ್ಲಿ ಹೋಳಿ ಹಬ್ಬದ ಸ್ಟಿಕ್ಕರ್ ಡೌನ್‌ಲೋಡ್ ಮಾಡುವುದು ಹೇಗೆ?:
ನಿಮ್ಮ ಪರದೆಯ ಚಾಟ್ ಬಾರ್‌ನ ಎಡಭಾಗದಲ್ಲಿರುವ ಎಮೋಜಿಯನ್ನು ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಸ್ಟಿಕ್ಕರ್‌ಗಳ ವಿಭಾಗಕ್ಕೆ ಹೋಗಿ. ಬಲ ಕೆಳಭಾಗದಲ್ಲಿ ಸ್ಟಿಕ್ಕರ್‌ಗಳ ಆಯ್ಕೆಯನ್ನು ತೆರೆಯಿರಿ.
ಈಗ ನಿಮ್ಮ ಚಾಟ್ ಪರದೆಯ ಬಲ ಮೂಲೆಯಲ್ಲಿರುವ + ಐಕಾನ್ ಮೇಲೆ ಒತ್ತಿರಿ ಅದು ನಿಮಗೆ ಸ್ಟಿಕ್ಕರ್ ಲೈಬ್ರರಿಗೆ ಮಾರ್ಗದರ್ಶನ ನೀಡುತ್ತದೆ. ನೀವು ‘ಹೆಚ್ಚು ಸ್ಟಿಕ್ಕರ್‌ಗಳನ್ನು ಪಡೆಯಿರಿ’ ಆಯ್ಕೆಯನ್ನು ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದನ್ನು ತೆರೆಯಲು ಟ್ಯಾಪ್ ಮಾಡಿ.
ಇಲ್ಲಿ ನಿಮಗೆ ಹೋಳಿ ಸ್ಟಿಕ್ಕರ್‌ಗಳನ್ನು ಹುಡುಕಲು ಸಾಧ್ಯವಾಗದಿದ್ದರೆ, ಹೆಚ್ಚಿನ ಸ್ಟಿಕ್ಕರ್‌ಗಳನ್ನು ಪಡೆಯಲು ಪ್ಲೇಸ್ಟೋರ್ಗೆ ಹೋಗಬೇಕು.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಹೋಳಿ ವಾಟ್ಸ್ಆ್ಯಪ್ ಸ್ಟಿಕ್ಕರ್‌ಗಳಿಗಾಗಿ ಸರ್ಚ್ ಮಾಡಿ.
ನೀವು ಇಷ್ಟಪಡುವ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ತೆರೆಯಿರಿ.
ಆಡ್ ಟು ವಾಟ್ಸ್ಆ್ಯಪ್ ಬಟನ್ ಅಥವಾ ಸ್ಟಿಕರ್ಸ್ ಪ್ಯಾಕ್ ಮುಂದೆ ಇರಿಸಲಾಗಿರುವ ‘+’ ಐಕಾನ್ ಟ್ಯಾಪ್ ಮಾಡಿ.
ನಂತರ, ವಾಟ್ಸ್ಆ್ಯಪ್ಗೆ ಹೋಗಿ ಮತ್ತು ಸ್ಟಿಕ್ಕರ್‌ಗಳನ್ನು ಸೆಂಡ್ ಮಾಡಿರಿ.
ಐಫೋನ್‌ನಲ್ಲಿ ಸ್ಟಿಕ್ಕರ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?:
ವಾಟ್ಸ್ಆ್ಯಪ್ತೆರೆಯಿರಿ. ನೀವು ಸ್ಟಿಕ್ಕರ್ ಕಳುಹಿಸಬೇಕಾದ ವ್ಯಕ್ತಿಯ ಚಾಟ್ ವಿಂಡೋವನ್ನು ಓಪನ್ ಮಾಡಿ.
ಟೆಕ್ಸ್ಟ್ ಬಾರ್ ಮೇಲೆ ಟ್ಯಾಪ್ ಮಾಡಿ ಮತ್ತು ಬಲಭಾಗದಲ್ಲಿರುವ ಸ್ಟಿಕ್ಕರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ವಾಟ್ಸ್ಆ್ಯಪ್ನಲ್ಲಿ ಲಭ್ಯವಿರುವ ಎಲ್ಲಾ ಸ್ಟಿಕ್ಕರ್ ಆಯ್ಕೆಗಳು ತೆರೆದುಕೊಳ್ಳುತ್ತವೆ.
ಸ್ಟಿಕ್ಕರ್ ಪ್ಯಾಕ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಡೌನ್‌ಲೋಡ್ ಮಾಡಿ. ಒಮ್ಮೆ ಮಾಡಿದ ನಂತರ, ಸ್ಟಿಕ್ಕರ್‌ಗಳು ಲೈಬ್ರರಿಯಲ್ಲಿ ಲಭ್ಯವಿರುತ್ತವೆ.