AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಆನ್​ಲೈನ್​ನಲ್ಲಿ ವೋಟಾರ್ ಐಡಿ ವಿಳಾಸ ಬದಲಾಯಿಸುವುದು ಹೇಗೆ?: ಇಲ್ಲಿದೆ ಸರಳ ವಿಧಾನ

Voter ID: ನಿಮ್ಮ ವೋಟರ್ ಐಡಿಯಲ್ಲಿ ಹಳೆಯ ವಿಳಾಸ ಇದ್ದರೆ ಅದನ್ನು ಬದಲಾಯಿಸಬಹುದು. ಆನ್‌ಲೈನ್‌ ಮೂಲಕವೇ ಬದಲಾವಣೆ ಮಾಡಬಹುದು. ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್‌ಸೈಟ್ ಮೂಲಕ ಹೊಸ ವಿಳಾಸವನ್ನು ನವೀಕರಿಸಬಹುದು. ಇದಕ್ಕಾಗಿ ಈ ಸರಳ ಹಂತಗಳನ್ನು ಅನುಸರಿಸಿ.

Tech Tips: ಆನ್​ಲೈನ್​ನಲ್ಲಿ ವೋಟಾರ್ ಐಡಿ ವಿಳಾಸ ಬದಲಾಯಿಸುವುದು ಹೇಗೆ?: ಇಲ್ಲಿದೆ ಸರಳ ವಿಧಾನ
Voter ID
Vinay Bhat
|

Updated on: Feb 01, 2024 | 11:57 AM

Share

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದೆ. ಲೋಕಸಭೆಯೊಂದಿಗೆ ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮತದಾನ ಮಾಡಲು ನೀವು ಮತದಾರರ ಗುರುತಿನ ಚೀಟಿಯನ್ನು (Voter ID) ಹೊಂದಿರಲೇಬೇಕು. ಈಗ ನಿಮ್ಮ ವೋಟರ್ ಐಡಿಯಲ್ಲಿ ಹಳೆಯ ವಿಳಾಸ ಇದ್ದರೆ ಅದನ್ನು ಬದಲಾಯಿಸಬಹುದು. ಆನ್‌ಲೈನ್‌ ಮೂಲಕವೇ ಬದಲಾವಣೆ ಮಾಡಬಹುದು. ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್‌ಸೈಟ್ ಮೂಲಕ ಹೊಸ ವಿಳಾಸವನ್ನು ನವೀಕರಿಸಬಹುದು. ಇದಕ್ಕಾಗಿ ಈ ಸರಳ ಹಂತಗಳನ್ನು ಅನುಸರಿಸಿ.

ಫಾರ್ಮ್-8 ಭರ್ತಿ ಮಾಡಬೇಕು:

  • ಮೊದಲು ನೀವು ಆನ್‌ಲೈನ್‌ಗೆ ಹೋಗಿ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ವೆಬ್‌ಸೈಟ್ ತೆರೆಯಬೇಕು. ಇದನ್ನು ಫಾರ್ಮ್ 8 ಎಂದು ಹೇಳಲಾಗುತ್ತದೆ. ಮತದಾರರು ತಮ್ಮ ಗುರುತಿನ ಚೀಟಿಯಲ್ಲಿ ಬದಲಾವಣೆ ಮತ್ತು ಹೊಸ ಸೇರ್ಪಡೆಗಳನ್ನು ಈ ಫಾರ್ಮ್ 8 ಮೂಲಕ ಮಾತ್ರ ಮಾಡಬೇಕು. ಮನೆ ವಿಳಾಸ, ಪ್ರಸ್ತುತ ಕಾರ್ಡ್‌ನಲ್ಲಿನ ವಿವರಗಳಲ್ಲಿ ಬದಲಾವಣೆ, ಹೊಸ ಮತದಾರರ ಗುರುತಿನ ಚೀಟಿಗಾಗಿ ಅದೇ ಫಾರ್ಮ್ ಅನ್ನು ಸಲ್ಲಿಸಬೇಕು.
  • ಅದಕ್ಕಾಗಿ ಮೊದಲು https://voters.eci.gov.in/ ಗೆ ಹೋಗಿ ಲಾಗಿನ್ ಮಾಡಿ. ನೀವು ಖಾತೆಯನ್ನು ಹೊಂದಿಲ್ಲದಿದ್ದರೆ, ಸೈನ್ ಅಪ್ ಮಾಡಬೇಕಾಗುತ್ತದೆ. ಫೋನ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಕ್ಯಾಪ್ಚಾವನ್ನು ನಮೂದಿಸುವ ಮೂಲಕ ಖಾತೆಯನ್ನು ರಚಿಸಬಹುದು. ನಂತರ ಲಾಗಿನ್ ಮಾಡಿ.
  • ಈಗ ಹೋಮ್ ಸ್ಕ್ರೀನ್ ಮೆನುವಿನಿಂದ ಫಾರ್ಮ್-8 ಅನ್ನು ಕ್ಲಿಕ್ ಮಾಡಿ. ನಿವಾಸ/ತಿದ್ದುಪಡಿ/ಇಪಿಐಸಿಯ ಬದಲಿ/ಪಿಡಬ್ಲ್ಯೂಡಿ ಸೇರಿದಂತೆ ಕೆಲ ಆಯ್ಕೆ ಇರುತ್ತದೆ. ಇಲ್ಲಿ ಫಾರ್ಮ್ 8 ರಂತೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
  • ಈಗ ಇನ್ನೊಂದು ಪೇಜ್ ತೆರೆಯುತ್ತದೆ. ಅರ್ಜಿ ಯಾರಿಗೆ ಎಂದು ಕೇಳುತ್ತದೆ. ‘ಸ್ವಯಂ’ ಮತ್ತು ‘ಇತರ ಮತದಾರರ’ ಆಯ್ಕೆಗಳ ನಡುವೆ ಆಯ್ಕೆಮಾಡಿ. ಅಪ್ಲಿಕೇಶನ್ ನಿಮಗಾಗಿ ಆಗಿದ್ದರೆ, ಸೆಲ್ಪ್ ಅನ್ನು ಆಯ್ಕೆ ಮಾಡಿ ಮತ್ತು ಬೇರೆಯವರಿಗಾಗಿದ್ದರೆ, ಇತರ ಮತದಾರರನ್ನು ಆಯ್ಕೆಮಾಡಿ ಮತ್ತು ಸಲ್ಲಿಸಿ.
  • ನಂತರ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಲು ಕೇಳುತ್ತದೆ. ಅದನ್ನು ನಮೂದಿಸಬೇಕು. ನಂತರ ನೀವು ಇನ್ನೊಂದು ಡೈಲಾಗ್ ಬಾಕ್ಸ್ ಅನ್ನು ನೋಡುತ್ತೀರಿ. ಅದರಲ್ಲಿ ನೀವು ಹೆಸರು ಮತ್ತು ಇತರ ವಿವರಗಳನ್ನು ನೋಡುತ್ತೀರಿ. ಅವೆಲ್ಲವೂ ನಿಮ್ಮದೇ ಎಂದು ಖಚಿತಪಡಿಸಲು OK ಬಟನ್ ಮೇಲೆ ಕ್ಲಿಕ್ ಮಾಡಿ.
  • ಬಳಿಕ ಶಿಫ್ಟಿಂಗ್ ಆಫ್ ರೆಸಿಡೆನ್ಸ್ ಆಯ್ಕೆಯನ್ನು ಆರಿಸಿ. ನಂತರ ಕ್ಷೇತ್ರದ ಒಳಗೆ ಅಥವಾ ಹೊರಗೆ ವಾಸಿಸುತ್ತಿದ್ದಾರೆಯೇ ಎಂದು ಕೇಳುತ್ತದೆ. ನಿಮ್ಮ ವಸತಿ ಸ್ಥಳವನ್ನು ಅವಲಂಬಿಸಿ ಇದನ್ನು ಆಯ್ಕೆ ಮಾಡಬಹುದು.
  • ಈಗ ಕಾಣುವ ಫಾರ್ಮ್ 8 ನಲ್ಲಿ ಮೂರು ಭಾಗಗಳನ್ನು ಕಾಣುತ್ತೀರಿ. ಸೆಕ್ಷನ್ ಎ ನಲ್ಲಿ ರಾಜ್ಯ, ಜಿಲ್ಲೆ, ವಿಧಾನಸಭೆ/ಸಂಸತ್ತು ಕ್ಷೇತ್ರವನ್ನು ಆಯ್ಕೆ ಮಾಡಬೇಕು.
  • ವಿಭಾಗ B ಯಲ್ಲಿ ವೈಯಕ್ತಿಕ ವಿವರಗಳೊಂದಿಗೆ ಪೂರ್ಣಗೊಳಿಸಬೇಕು. ಸೆಕ್ಷನ್ C ನಲ್ಲಿ ನೀವು ಬದಲಾಯಿಸಲು ಬಯಸುವ ವಿಳಾಸವನ್ನು ಭರ್ತಿ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಬೇಕು. ವಿಭಾಗ ಡಿ ಯಲ್ಲಿಲ್ಲಿ ಪರಿಶೀಲನೆ ಮತ್ತು ಸಲ್ಲಿಕೆಯನ್ನು ಮಾಡಬೇಕು.
  • ಇಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಭಾರತೀಯ ಪಾಸ್‌ಪೋರ್ಟ್, ಕಂದಾಯ ಇಲಾಖೆಯ ಭೂ ಮಾಲೀಕತ್ವದ ದಾಖಲೆ, ನೋಂದಾಯಿತ ಬಾಡಿಗೆ ಗುತ್ತಿಗೆ ಪತ್ರ, ನೋಂದಾಯಿತ ಮಾರಾಟ ಪತ್ರ ಇತ್ಯಾದಿಗಳನ್ನು ಸಲ್ಲಿಸಬೇಕಾಗುತ್ತದೆ.
  • ಇವೆಲ್ಲವನ್ನೂ ಪೂರ್ಣಗೊಳಿಸಿದ ನಂತರ ಅಪ್ಲಿಕೇಶನ್ ಅನ್ನು ಒಮ್ಮೆ ಪೂರ್ವವೀಕ್ಷಿಸಿ ಮತ್ತು ಎಲ್ಲವೂ ಸರಿಯಾಗಿದ್ದರೆ ಸಲ್ಲಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ