Voter ID Card: ನಿಮ್ಮ ವೋಟಾರ್ ಐಡಿ ಕಳೆದುಹೋಯಿತೇ?: ಮರಳಿ ಪಡೆಯುವುದು ಹೇಗೆ?

ಮಹತ್ವದ ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಗತಿ?. ಹೀಗೆ ಕಳೆದುಹೋದ ಕಾರ್ಡ್ ಅನ್ನು ಹಿಂಪಡೆಯಲು ಒಂದು ಮಾರ್ಗವಿದೆ. ನೀವು ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯ ಪ್ರತಿಯನ್ನು ಪಡೆಯಬಹುದು. ಅದು ಹೇಗೆ ಎಂದು ಇಲ್ಲಿ ತಿಳಿಯಿರಿ.

Voter ID Card: ನಿಮ್ಮ ವೋಟಾರ್ ಐಡಿ ಕಳೆದುಹೋಯಿತೇ?: ಮರಳಿ ಪಡೆಯುವುದು ಹೇಗೆ?
voter id card
Follow us
Vinay Bhat
|

Updated on: Jan 19, 2024 | 12:50 PM

ಮತದಾರರ ಗುರುತಿನ ಚೀಟಿಯ (Voter ID Card) ಮಹತ್ವವನ್ನು ಹೆಚ್ಚಾಗಿ ಹೇಳಬೇಕಿಲ್ಲ. ಎಲ್ಲರಿಗೂ ಇದರ ಅಗತ್ಯದ ಬಗ್ಗೆ ಗೊತ್ತು. ಇದನ್ನು ಭಾರತದ ಚುನಾವಣಾ ಆಯೋಗ ಹೊರಡಿಸಿದೆ. ಮತದಾರರ ಗುರುತಿನ ಚೀಟಿಯಲ್ಲಿ ಮತದಾರರ ಹೆಸರು, ಮತದಾರರ ಭಾವಚಿತ್ರ, ವಿಳಾಸ, ಜನ್ಮ ದಿನಾಂಕ ಇತ್ಯಾದಿಗಳು ಇರುತ್ತವೆ. ಅದನ್ನು ಬಳಸಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಬಹುದು. ಒಬ್ಬರು ಯಾವುದೇ ಸರ್ಕಾರಿ ಯೋಜನೆಯನ್ನು ಪಡೆಯಬಹುದು, ಬ್ಯಾಂಕ್ ಖಾತೆ ತೆರೆಯಬಹುದು, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಪಡೆಯಬಹುದು.

ಆದರೆ, ಈ ಮಹತ್ವದ ಮತದಾರರ ಗುರುತಿನ ಚೀಟಿ ಕಳೆದು ಹೋದರೆ ಏನು ಗತಿ?. ಹೀಗೆ ಕಳೆದುಹೋದ ಕಾರ್ಡ್ ಅನ್ನು ಹಿಂಪಡೆಯಲು ಒಂದು ಮಾರ್ಗವಿದೆ. ನೀವು ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯ ಪ್ರತಿಯನ್ನು ಪಡೆಯಬಹುದು. ಅದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಬಜೆಟ್ ಪ್ರಿಯರಿಗಾಗಿ ವಿಶೇಷ ಸ್ಮಾರ್ಟ್​ಫೋನ್ ಮೋಟೋ G ಪ್ಲೇ (2024) ಬಿಡುಗಡೆ: ಬೆಲೆ ಎಷ್ಟು?

ಇದನ್ನೂ ಓದಿ
Image
ಯೂಟ್ಯೂಬ್ ಚಾನಲ್​ಗೆ ಚಂದಾದಾರರನ್ನು ಹೆಚ್ಚಿಸೋದು ಹೇಗೆ?
Image
ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗದಿರಲು ಈ ಸಲಹೆ ತಪ್ಪದೆ ಪಾಲಿಸಿ
Image
ಸ್ಮಾರ್ಟ್​ಫೋನ್​ಗೆ ಸ್ಕ್ರೀನ್ ಗಾರ್ಡ್ ಹಾಕಿಸಿದ್ದೀರಾ?
Image
ಸ್ಯಾಮ್​ಸಂಗ್​ನ ಮತ್ತೆರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ: ಯಾವ ಫೋನ್

ಅರ್ಜಿಯ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

  • ಪಾಸ್ಪೋರ್ಟ್ ಅಳತೆಯ ಫೋಟೋ
  • ಗುರುತಿನ ಚೀಟಿಯ ಪ್ರತಿ (ಉದಾ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್)
  • ವಿಳಾಸದ ದಾಖಲೆ (ಉದಾ ವಿದ್ಯುತ್ ಬಿಲ್, ದೂರವಾಣಿ ಬಿಲ್, ಬ್ಯಾಂಕ್ ಪಾಸ್​ಬುಕ್)

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲು ನೀವು ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಹೋಗಬೇಕು. ಅದಕ್ಕಾಗಿ ಗೂಗಲ್‌ಗೆ ಹೋಗಿ ಮತ್ತು ಭಾರತೀಯ ಚುನಾವಣಾ ಆಯೋಗ ಎಂದು ಟೈಪ್ ಮಾಡಿ.
  • ಈಗ “ಆನ್‌ಲೈನ್ ಸೇವೆಗಳು” ಕ್ಲಿಕ್ ಮಾಡಿ.
  • “ಮತದಾರರ ಗುರುತಿನ ಚೀಟಿಗಾಗಿ ಅರ್ಜಿ” ಕ್ಲಿಕ್ ಮಾಡಿ.
  • ಇಲ್ಲಿ ಹಲವಾರು ಆಯ್ಕೆಗಳಿವೆ, ಅದರಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆಮಾಡಿ.
  • ನಿಮ್ಮ ಮತದಾರರ ನೋಂದಣಿ ಸಂಖ್ಯೆಯನ್ನು (VID) ನಮೂದಿಸಿ.
  • ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು.
  • ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಆ OTP ಅನ್ನು ನಮೂದಿಸಿ.
  • ನಿಮ್ಮ ಅಪ್ಲಿಕೇಶನ್‌ನಲ್ಲಿ ಅಗತ್ಯವಿರುವ ಎಲ್ಲಾ ಇತರ ಮಾಹಿತಿಯನ್ನು ಭರ್ತಿ ಮಾಡಿ.
  • ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
  • ನಂತರ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಶುಲ್ಕ ಎಷ್ಟು?

ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ನೀವು ಅದನ್ನು ಉಚಿತವಾಗಿ ಪಡೆಯಬಹುದು. ಮತದಾರರ ಗುರುತಿನ ಚೀಟಿ ಸಾಮಾನ್ಯವಾಗಿ 15-20 ದಿನಗಳಲ್ಲಿ ನಿಮ್ಮ ವಿಳಾಸಕ್ಕೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್