Tech Tips: ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗದಿರಲು ಈ ಸಲಹೆ ತಪ್ಪದೆ ಪಾಲಿಸಿ

Smartphone Tips: ಕೆಲವು ಬಾರಿ ನಮ್ಮದೇ ಆದ ಕೆಲವು ತಪ್ಪುಗಳಿಂದಾಗಿ ತೊಂದರೆ ಉಂಟಾಗುತ್ತದೆ. ಇದರಲ್ಲಿ ವೈರಸ್‌ ಅಟ್ಯಾಕ್ ಕೂಡ ಒಂದು. ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್​ಫೋನ್​ಗಳಿಗೆ ವೈರಸ್ ಪ್ರವೇಶಿಸುತ್ತವೆ. ಸ್ಮಾರ್ಟ್‌ಫೋನ್‌ಗೆ ವೈರಸ್‌ಗಳು ಪ್ರವೇಶಿಸುವ ಐದು ವಿಧಾನಗಳ ಕುರಿತು ನಾವು ಇಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

|

Updated on: Jan 19, 2024 | 6:55 AM

ನಿಮ್ಮ ಮೊಬೈಲ್‌ನಲ್ಲಿ ವೈರಸ್ ಇದ್ದರೆ, ನೀವು ಆ್ಯಂಟಿ ವೈರಸ್ ಸಹಾಯದಿಂದ ಆ ವೈರಸ್ ಅನ್ನು ತೆಗೆದುಹಾಕಬಹುದು. ಕೆಳಗೆ ತಿಳಿಸಲಾದ ಈ ಐದು ತಪ್ಪುಗಳಿಂದ ದೂರವಿದ್ದರೆ ನಿಮ್ಮ ಫೋನ್ ಅನ್ನು ವೈರಸ್‌ಗಳಿಂದ ಕಾಪಾಡಿಕೊಳ್ಳಬಹುದು.

1 / 6
ಹೆಚ್ಚಿನವರು ಕೆಲವೊಮ್ಮೆ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಈ ತಪ್ಪು ದೊಡ್ಡ ತೊಂದರೆಗೆ ಕಾರಣವಾಗಬಹುದು. ಇಂತಹ ಕೆಲವು ಲಿಂಕ್ ಅಪಾಯಕಾರಿಯಾಗಿರುತ್ತದೆ. ಈ ಲಿಂಕ್‌ಗಳು ನಿಮ್ಮ ಸ್ಮಾರ್ಟ್​ಫೋನ್​ಗಳ ಒಳಗೆ ವೈರಸ್‌ಗಳನ್ನು ಸ್ಥಾಪಿಸಬಹುದು. ಆದ್ದರಿಂದ ಮುಂದಿನ ಬಾರಿ ತಪ್ಪಿಯೂ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

2 / 6
ಅಂತೆಯೆ ನೀವು ಯಾವುದೇ ಅಪರಿಚಿತ ಇಮೇಲ್, ಮೆಸೇಜ್ ಸ್ವೀಕರಿಸಿದರೆ ಅಥವಾ ಯಾವುದೇ ವ್ಯಕ್ತಿಯು ವಾಟ್ಸ್​ಆ್ಯಪ್​ನಲ್ಲಿ ಲಿಂಕ್ ಅನ್ನು ಹಂಚಿಕೊಂಡರೆ, ಇದೇನು ಎಂದು ನೋಡುವ ಕುತೂಹಲದಲ್ಲಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರೆಯದಿರಿ. ಈಗೀಗ ಈರೀತಿಯ ಫೇಕ್ ಲಿಂಕ್​ಗಳ ಹಾವಳಿ ಹೆಚ್ಚಾಗಿದೆ.

3 / 6
ಯಾವುದೇ ಅನುಮಾನಾಸ್ಪದ ವೆಬ್​ಸೈಟ್‌ಗೆ ಭೇಟಿ ನೀಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಫೋನಿಗೆ ವೈರಸ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸೈಟ್‌ಗೆ ಭೇಟಿ ನೀಡಿದ ನಂತರ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್​ಗೆ ವೈರಸ್ ಬರಬಹುದು.

4 / 6
ಆಂಡ್ರಾಯ್ಡ್ ಸ್ಮಾರ್ಟ್​ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಐಫೋನ್​ನಲ್ಲಿ ಆ್ಯಪ್ ಸ್ಟೋರ್ ಇದೆ. ಇವುಗಳಲ್ಲಿ ಕೆಲವು ಫೇಕ್ ಆ್ಯಪ್​ಗಳು ಇರುತ್ತವೆ. ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಅನ್ನು ಇನ್​ಸ್ಟಾಲ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ. ಆ ಆ್ಯಪ್​ನ ಹಿನ್ನಲೆ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ.

5 / 6
ಇಂದು ಹೋಟೆಲ್ ಅಥವಾ ರೆಸ್ಟೋರೆಂಟ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತ ವೈ-ಫೈ ಲಭ್ಯವಿರುತ್ತದೆ. ಹಾಗಂತ ಇದನ್ನು ಬಳಸಿದರೆ ನಿಮಗೆ ದುಬಾರಿಯಾಗಬಹುದು. ನಿಮ್ಮ ಸ್ಮಾರ್ಟ್​ಫೋನ್ ಉಚಿತ ವೈ-ಫೈಗೆ ಸಂಪರ್ಕಿಸಿದ ತಕ್ಷಣ, ವೈರಸ್‌ಗಳು ಪ್ರವೇಶಿಸುವ ಅಪಾಯವು ಹೆಚ್ಚಿರುತ್ತದೆ. ಇವುಗಳ ಬಗ್ಗೆ ಎಚ್ಚರ ವಹಿಸಿ.

6 / 6
Follow us