Tech Tips: ಸಿಲಿಂಡರ್ ಸಿಡಿಯುತ್ತೆ: ಗ್ಯಾಸ್ ಪೈಪ್‌ನ ಎಕ್ಸ್​ಪೈರ್ ಡೇಟ್ ಅನ್ನು ಹೇಗೆ ಪರಿಶೀಲಿಸುವುದು?

|

Updated on: Mar 02, 2024 | 1:24 PM

LPG Gas Cylinder Safety Tips: ಸಿಲಿಂಡರ್​ನ ಗ್ಯಾಸ್ ಪೈಪ್ ಹಾನಿಗೊಳಗಾದರೆ ಅಥವಾ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಬಹುದು. ಆದ್ದರಿಂದ, ಗ್ಯಾಸ್ ಸಿಲಿಂಡರ್​ನ ಸುರಕ್ಷತೆಗಾಗಿ ಗ್ಯಾಸ್ ಪೈಪ್​ನ ಮುಕ್ತಾಯ ದಿನಾಂಕವನ್ನು ಪರಿಶೀಲಿಸುವುದು ಮುಖ್ಯ. ಬಿಐಎಸ್ ಕೇರ್ ಅಪ್ಲಿಕೇಶನ್ ಬಳಸಿಕೊಂಡು ಗ್ಯಾಸ್ ಪೈಪ್‌ನ ಮುಕ್ತಾಯ ದಿನಾಂಕವನ್ನು ನೀವು ಸುಲಭವಾಗಿ ನೋಡಬಹುದು.

Tech Tips: ಸಿಲಿಂಡರ್ ಸಿಡಿಯುತ್ತೆ: ಗ್ಯಾಸ್ ಪೈಪ್‌ನ ಎಕ್ಸ್​ಪೈರ್ ಡೇಟ್ ಅನ್ನು ಹೇಗೆ ಪರಿಶೀಲಿಸುವುದು?
gas cylinder pipe
Follow us on

ಗ್ಯಾಸ್ ಸಿಲಿಂಡರ್ (Gas Cylinder) ನಮ್ಮ ಮನೆಗಳಲ್ಲಿ ಅಡುಗೆ ಮಾಡಲು ಬಳಸುವ ಪ್ರಮುಖ ಸಾಧನವಾಗಿದೆ. ಆದರೆ, ಗ್ಯಾಸ್ ಸಿಲಿಂಡರ್ ಬಳಸುವಾಗ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಗ್ಯಾಸ್ ಸಿಲಿಂಡರ್​ನ ಸುರಕ್ಷತೆಗಾಗಿ, ಗ್ಯಾಸ್ ಪೈಪ್​ನ ಮುಕ್ತಾಯದ ದಿನಾಂಕವನ್ನು ಪರಿಶೀಲಿಸುವುದು ಕೂಡ ಮುಖ್ಯವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಿಲಿಂಡರ್ ಸಿಡಿಯುವ ಅಪಾಯವಿದೆ. ಈ ಲೇಖನದಲ್ಲಿ ನಾವು ಗ್ಯಾಸ್ ಪೈಪ್​ನ ಮುಕ್ತಾಯದ ದಿನಾಂಕವನ್ನು ಹೇಗೆ ಸುಲಭವಾಗಿ ಪರಿಶೀಲಿಸಬಹುದು ಎಂದು ಹೇಳುತ್ತೇವೆ.

ಗ್ಯಾಸ್ ಪೈಪ್ ಅನ್ನು ರಬ್ಬರ್​ನಿಂದ ತಯಾರಿಸಲಾಗುತ್ತದೆ. ಆದರೆ, ಸಮಯ ಕಳೆದಂತೆ ರಬ್ಬರ್ ಹದಗೆಡುವ ಸಾಧ್ಯತೆ ಇರುತ್ತದೆ, ಇದರಿಂದ ಅನಿಲ ಸೋರಿಕೆಯ ಅಪಾಯವು ಹೆಚ್ಚು. ಗ್ಯಾಸ್ ಲೀಕ್ ಬೆಂಕಿ ಮತ್ತು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ಈರೀತಿಯ ಸುದ್ದಿ ನೀವು ಓದುತ್ತಲೇ ಇರುತ್ತೀರಿ. ಇದರಲ್ಲಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಬಹುದು.

50MP ಡ್ಯುಯಲ್ ಕ್ಯಾಮೆರಾ, 6000mAh ಬ್ಯಾಟರಿ: 6,999 ರೂ. ವಿನ ಈ ಫೋನ್ ಖರೀದಿಗೆ ಕ್ಯೂ ಗ್ಯಾರಂಟಿ

ಆದ್ದರಿಂದ, ಗ್ಯಾಸ್ ಪೈಪ್ ಅನ್ನು ಸಮಯಕ್ಕೆ ಸರಿಯಾಗಿ ಬದಲಾಯಿಸಬೇಕು. ಪೈಪ್‌ನ ಎಕ್ಸ್​ಪೈರ್ ಡೇಟ್ ಮುಗಿದಿದೆಯೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಇಲ್ಲಿ ಉಲ್ಲೇಖಿಸಲಾದ ಆನ್‌ಲೈನ್ ವಿಧಾನವನ್ನು ಬಳಸಿಕೊಂಡು ಪರಿಶೀಲಿಸಬಹುದು.

ಗ್ಯಾಸ್ ಪೈಪ್‌ನ ಎಕ್ಸ್​ಪೈರ್ ಡೇಟ್ ಅನ್ನು ಹೇಗೆ ಪರಿಶೀಲಿಸುವುದು?

ಭಾರತ ಸರ್ಕಾರದ BIS ಕೇರ್ ಅಪ್ಲಿಕೇಶನ್‌ನ ಮೂಲಕ ಗ್ಯಾಸ್ ಪೈಪ್‌ನ ಎಕ್ಸ್​ಪೈರ್ ಡೇಟ್ ಅನ್ನು ಪರಿಶೀಲಿಸಬಹುದು. BIS ಕೇರ್ ಅಪ್ಲಿಕೇಶನ್ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

  • ಮೊದಲಿಗೆ ಬಿಐಎಸ್ ಕೇರ್ ಆ್ಯಪ್ ತೆರೆಯಿರಿ.
  • ಇದರಲ್ಲಿ ವೆರಿಫೈ ಲೈಸೆನ್ಸ್ ವಿವರಗಳ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಈಗ ಪೈಪ್‌ನಲ್ಲಿ ಬರೆದ CM/L ಕೋಡ್ ಅನ್ನು ನಮೂದಿಸಿ.
  • ಕೋಡ್ ನಮೂದಿಸಿದ ನಂತರ, ಗೋ ಬಟನ್ ಕ್ಲಿಕ್ ಮಾಡಿ.

ನೋಕಿಯಾದ ಸ್ಟೈಲಿಶ್ ಸ್ಮಾರ್ಟ್​ಫೋನ್ G42 5G ಹೊಸ ವೇರಿಯೆಂಟ್​ನಲ್ಲಿ ರಿಲೀಸ್: ಬೆಲೆ 9999 ರೂ.

ನಂತರ ನೀವು ಗ್ಯಾಸ್ ಫೈಪ್​ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೋಡುತ್ತೀರಿ. ಇದರಲ್ಲಿ ಮಾನ್ಯತೆ ಇರುವವರೆಗೆ ಅಂದರೆ ಮುಕ್ತಾಯ ದಿನಾಂಕವನ್ನು ಸಹ ಬರೆಯಲಾಗುತ್ತದೆ. ಪೈಪ್ ಅವಧಿ ಮುಗಿದಿದ್ದರೆ ತಕ್ಷಣ ಹೊಸ ಪೈಪ್ ಖರೀದಿಸಬೇಕು.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ