ಇಂದು ಹಣ ಗಳಿಸಲು ಅನೇಕ ಮಾರ್ಗಗಳಿವೆ. ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತವಿದ್ದರೆ ಸುಲಭವಾಗಿ ಹಣ ಸಂಪಾದಿಸಬಹುದು. ನೀವು ಸೋಷಿಯಲ್ ಮೀಡಿಯಾ ಹಬ್ ಆಗಿ ಲಕ್ಷ ಲಕ್ಷ ಹಣ ಗಳಿಸಬಹುದು. ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮೂಲಕ ಈಗಾಗಲೇ ಅನೇಕ ಜನರು ಹಣ ಗಳಿಸುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಇದೀಗ ಎಕ್ಸ್ (Twitter) ಮೂಲಕವೂ ಹಣ ಸಂಪಾದಿಸಬಹುದು. ಟ್ವಿಟ್ಟರ್ ತನ್ನ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಒದಗಿಸಿದೆ. ಅನೇಕರು ಹಣವನ್ನು ಸಂಪಾದಿಸಿದ್ದಾರೆ ಕೂಡ. ತಮ್ಮ ಆದಾಯದ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಜನರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಟ್ವಿಟ್ಟರ್ (X) ಬಳಕೆದಾರರು ಹಣ ಪಡೆದುಕೊಳ್ಳುತ್ತಿದ್ದಾರೆ. ನೀವು ಕೂಡ ಟ್ವಿಟ್ಟರ್ನಿಂದ ಹಣ ಗಳಿಸುವ ಯೋಚನೆಯಲ್ಲಿದ್ದರೆ, ಈ ಸರಳ ವಿಧಾನವನ್ನು ಅನುಸರಿಸಿದರೆ ಆಯಿತು. ಆದರೆ, ಇದಕ್ಕಾಗಿ ನೀವು ಕಂಪನಿಯ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕು.
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಝಡ್ಟಿಇ ಬ್ಲೇಡ್ A73 5G ಸ್ಮಾರ್ಟ್ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?
ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಜಾಹೀರಾತುಗಳ ಆದಾಯ ಕಾರ್ಯಕ್ರಮದಲ್ಲಿ, ಅರ್ಹ ಬಳಕೆದಾರರು ಟ್ವಿಟ್ಟರ್ ಜಾಹೀರಾತು ಆದಾಯದ ಪಾಲನ್ನು ಪಡೆಯುತ್ತಾರೆ ಎಂದಿದ್ದಾರೆ. ಅದರಂತೆ ನೀವು ಕೂಡ ಟ್ವಿಟ್ಟರ್ನಿಂದ ಹಣ ಗಳಿಸಲು ಬಯಸಿದರೆ ಇದಕ್ಕಾಗಿ ನೀವು 500 ಕ್ಕಿಂತ ಫಾಲೋವರ್ಸ್ ಹೊಂದಿರಬೇಕು. ಇದಲ್ಲದೇ.. ನಿಮ್ಮ ಖಾತೆಯು ಕಳೆದ 3 ತಿಂಗಳಲ್ಲಿ 15 ಮಿಲಿಯನ್ ಟ್ವೀಟ್ ಇಂಪ್ರೆಶನ್‌ಗಳನ್ನು ಹೊಂದಿರಬೇಕು. ನೀವು ಈ ಷರತ್ತುಗಳನ್ನು ಪೂರೈಸಿದರೆ, ನಂತರ ಎಲಾನ್ ಮಸ್ಕ್ ಜಾಹೀರಾತುಗಳ ಆದಾಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.
Blue tick ke paise vasool pic.twitter.com/pVrX5hTYWo
— Gabbar (@GabbbarSingh) August 8, 2023
Blue tick ke paise vasool pic.twitter.com/pVrX5hTYWo
— Gabbar (@GabbbarSingh) August 8, 2023
Ye toh aapne apne saare followers ke blue tick ke paise wasool liye ?
Mai toh itne mein hi khush hoon. pic.twitter.com/TWVKbyIfwv— Nitin Gupta (@asknitingupta) August 8, 2023
ಇತ್ತೀಚಿನ ದಿನಗಳಲ್ಲಿ ಅನೇಕ ಬಳಕೆದಾರರು ತಮ್ಮ ಗಳಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮ ಟ್ವಿಟ್ಟರ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸ್ಕ್ರೀನ್‌ಶಾಟ್‌ಗಳ ಪ್ರಕಾರ.. ಕ್ರಿಯೇಟರ್‌ಗಳು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ನಂತೆಯೆ ಟ್ವಿಟ್ಟರ್ನಿಂದ ಹಣವನ್ನು ಪಡೆಯಲು ಪ್ರಾರಂಭಿಸಿದ್ದಾರೆ.
ನೀವು ಮೊದಲು ಟ್ವಿಟ್ಟರ್ X ಚಂದಾದಾರಿಕೆಯ ಬಗ್ಗೆ ತಿಳಿದುಕೊಳ್ಳಬೇಕು. ಭಾರತದಲ್ಲಿನ ವೆಬ್ ಬಳಕೆದಾರರ ಮಾಸಿಕ ಚಂದಾದಾರಿಕೆ ಯೋಜನೆಯನ್ನು ರೂ. 650 ರಿಂದ ಆರಂಭವಾಗುತ್ತದೆ. ಅಂತೆಯೆ ಮೊಬೈಲ್ ಬಳಕೆದಾರರಿಗೆ 900 ರೂ. ಮಾಸಿಕ ಚಂದಾದಾರಿಕೆ ಯೋಜನೆ ಇದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್ನ ವಾರ್ಷಿಕ ಯೋಜನೆಯನ್ನು ನೀವು ತೆಗೆದುಕೊಳ್ಳಬೇಕಾದರೆ ಇದಕ್ಕಾಗಿ ನೀವು ಪ್ರತಿ ವರ್ಷ 6,800 ರೂ. ಪಾವತಿಸಬೇಕು. ಈ ಯೋಜನೆಯನ್ನು ತೆಗೆದುಕೊಂಡರೆ ಇದು ಮಾಸಿಕ ಚಂದಾದಾರಿಕೆ ಯೋಜನೆಗಿಂತ ಅಗ್ಗವಾಗಿರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ