Tech Tips: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆಗಳನ್ನು ಹೇಗೆ ಬಳಸುವುದು?: ಇಲ್ಲಿದೆ ಟ್ರಿಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 25, 2024 | 10:28 AM

ಒಂದೇ ಫೋನ್‌ನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಈ ರೀತಿಯಾಗಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿ ಇರಿಸಬಹುದು. ನಾವು ನಿಮಗೆ ಹೇಳಲಿರುವ ಟ್ರಿಕ್‌ನ ವಿಶೇಷವೆಂದರೆ ನೀವು ಅದರಲ್ಲಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ.

Tech Tips: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆಗಳನ್ನು ಹೇಗೆ ಬಳಸುವುದು?: ಇಲ್ಲಿದೆ ಟ್ರಿಕ್
ಸಾಂದರ್ಭಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ಸಿಮ್‌ಗಳನ್ನು ಏಕಕಾಲದಲ್ಲಿ ಬಳಸಬಹುದು. ಆದರೆ ನೀವು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ಸಂಖ್ಯೆಗಳಿಂದ ವಾಟ್ಸ್​ಆ್ಯಪ್ ಅನ್ನು ಬಳಸಲು ಸಾಧ್ಯವಾಗುತ್ತದೆಯೇ?. ಈ ಹಿಂದೆ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ಅಂತಹ ಯಾವುದೇ ಸೌಲಭ್ಯವನ್ನು ಒದಗಿಸಿರಲಿಲ್ಲ. ಆದರೆ, ಇತ್ತೀಚಗೆಷ್ಟೆ ಹೊಸ ಫೀಚರ್ ಮೂಲಕ ಈ ಆಯ್ಕೆಯಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಕಲ್ಪಿಸಲಾಗಿದೆ. ಈ ಟ್ರಿಕ್ ಮೂಲಕ ನೀವು ಒಂದೇ ಫೋನ್‌ನಲ್ಲಿ ಎರಡು ವಿಭಿನ್ನ ವಾಟ್ಸ್​ಆ್ಯಪ್ ಖಾತೆಗಳನ್ನು ಬಳಸಲು ಸಾಧ್ಯವಾಗುತ್ತದೆ.

ಒಂದೇ ಫೋನ್‌ನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆಗಳನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಈ ರೀತಿಯಾಗಿ ನೀವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿ ಇರಿಸಬಹುದು. ನಾವು ನಿಮಗೆ ಹೇಳಲಿರುವ ಟ್ರಿಕ್‌ನ ವಿಶೇಷವೆಂದರೆ ನೀವು ಅದರಲ್ಲಿ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗಿಲ್ಲ. ನೀವು ಮಾಡಬೇಕಾಗಿರುವುದು ನಿಮ್ಮ ವಾಟ್ಸ್​ಆ್ಯಪ್​ನಲ್ಲಿರುವ ಈ ವಿಶೇಷ ವೈಶಿಷ್ಟ್ಯವನ್ನು ಬಳಸಬೇಕಷ್ಟೆ.

  • ಮೊದಲು ನೀವು ಫೋನ್‌ನಲ್ಲಿ ನಿಮ್ಮ ವಾಟ್ಸ್​ಆ್ಯಪ್​ ಖಾತೆಯನ್ನು ತೆರೆಯಿರಿ. ಅದಕ್ಕೂ ಮುನ್ನ ಇತ್ತೀಚಿನ ವರ್ಷನ್​​ಗೆ ಆ್ಯಪ್ ಅಪ್ಡೇಟ್ ಆಗಿದೆಯೆ ಎಂಬುದನ್ನು ಪರಿಶೀಲಿಸಿ.
  • ಬಳಿಕ ಫೋನ್‌ನ ಮೇಲಿನ ಬಲಭಾಗದಲ್ಲಿರುವ 3 ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
  • ನಂತರ ಕೆಳಗೆ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ.
  • ಅದರ ನಂತರ ಅಕೌಂಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ಕೆಳಗಿನಿಂದ ಎರಡನೇ ಆಯ್ಕೆಯಲ್ಲಿರುವ ಆ್ಯಡ್ ಅಕೌಂಟ್ ಎಂಬ ಹೊಸ ಆಯ್ಕೆಯನ್ನು ನೀವು ನೋಡುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ ನಿಮ್ಮ ಈಗಿನ ವಾಟ್ಸ್​ಆ್ಯಪ್ ಖಾತೆ ಕೂಡ ಕಾಣಿಸಿಕೊಳ್ಳುತ್ತದೆ. ಅಲ್ಲೆ ಕೆಳಗಡೆ ಎರಡನೇ ಸಂಖ್ಯೆಯಲ್ಲಿ + ಚಿಹ್ನೆಯೊಂದಿಗೆ ಖಾತೆಯನ್ನು ಸೇರಿಸಿ ಆಯ್ಕೆಯು ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಈಗ ಫೋನ್ ನಂಬರ್ ನಮೋದಿಸಿ ಮತ್ತು ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ.
  • ನಂತರ ಓಟಿಪಿ ಬರುತ್ತದೆ. ಇದನ್ನು ಹಾಖಿದ ನಂತರ ನಿಮ್ಮ ಫೋನ್‌ನಲ್ಲಿ ಇನ್ನೊಂದು ವಾಟ್ಸ್​ಆ್ಯಪ್​ ಅನ್ನು ಬಳಸಬಹುದು.
  • ಈ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಿದ ನಂತರ, ನಿಮಗೆ ಯಾವ ವಾಟ್ಸ್​ಆ್ಯಪ್ ಖಾತೆ ಬೇಕು ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಎರಡು ಖಾತೆಗಳಲ್ಲಿ ಒಂದನ್ನು ಬಳಸಬಹುದು.
  • ಇದು ಒಂದೇ ಫೋನ್‌ನಲ್ಲಿ ಎರಡು ಅಥವಾ ಹೆಚ್ಚಿನ ಫೇಸ್​ಬುಕ್ ಅಥವಾ ಇನ್​ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ.

ಹಾಗೆಯೆ ಮತ್ತೊಂದು ಆಯ್ಕೆ ಕೂಡ ಇದೆ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿನ ಸೆಟ್ಟಿಂಗ್ಸ್​ನಲ್ಲಿ ಕೆಲವು ಬದಲಾವಣೆ ಮಾಡಬೇಕು. ನಿಮ್ಮ ಫೋನ್​ನಲ್ಲಿ ಡ್ಯುಯಲ್ ಅಪ್ಲಿಕೇಶನ್‌ಗಳು ಅಥವಾ ಅಪ್ಲಿಕೇಶನ್ ಕ್ಲೋನ್ ಇರುತ್ತದೆ. ಇದು ವಿವಿಧ ಕಂಪನಿಗಳ ಫೋನ್‌ಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಬರುತ್ತದೆ. ಯಾವುದೇ ಅಪ್ಲಿಕೇಶನ್‌ನ ಕ್ಲೋನ್ ಅಥವಾ ನಕಲು ರಚಿಸುವುದು ಈ ವೈಶಿಷ್ಟ್ಯದ ಕೆಲಸವಾಗಿದೆ. ನೀವು ನಕಲಿ ಅಪ್ಲಿಕೇಶನ್‌ನಲ್ಲಿ ಹೊಸ ಖಾತೆಯನ್ನು ಬಳಸಬಹುದು.

ಇದನ್ನೂ ಓದಿ: ಆಂಡ್ರಾಯ್ಡ್‌ನ ಈ 3 ರಹಸ್ಯ ಫೀಚರ್ಸ್ ಬಗ್ಗೆ ನಿಮಗೆ ಗೊತ್ತೇ?:ನಿಮ್ಮ ಫೋನ್ ಐಫೋನ್‌ನಂತೆ ರನ್ ಆಗುತ್ತೆ

ಇದಕ್ಕಾಗಿ ನೀವು ನಿಮ್ಮ ಫೋನ್‌ನ ಡ್ಯುಯಲ್ ಅಪ್ಲಿಕೇಶನ್ ಅಥವಾ ಆಪ್ ಕ್ಲೋನ್ ವೈಶಿಷ್ಟ್ಯಕ್ಕೆ ಹೋಗಬೇಕು. ಇಲ್ಲಿ ನೀವು ಹಲವಾರು ಅಪ್ಲಿಕೇಶನ್‌ಗಳ ಪಟ್ಟಿಯನ್ನು ನೋಡುತ್ತೀರಿ. ಈ ಪಟ್ಟಿಯಿಂದ ವಾಟ್ಸ್​ಆ್ಯಪ್​ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಕ್ಲೋನ್ ಮಾಡಿ. ಇದರ ನಂತರ ಅದನ್ನು ಇನ್​ಸ್ಟಾಲ್ ಮಾಡಿ. ಎರಡನೇ ವಾಟ್ಸ್​ಆ್ಯಪ್​ ಅನ್ನು ಸ್ಥಾಪಿಸಿದ ನಂತರ, ಅದರ ಮೇಲೆ ಕ್ಲಿಕ್ ಮಾಡಿ. ನಿಮ್ಮ ಎರಡನೇ ಸಂಖ್ಯೆಯೊಂದಿಗೆ ಖಾತೆಯನ್ನು ರಚಿಸಿ. ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ, ನೀವು ಲಾಗಿನ್ ಮಾಡಬೇಕಾಗುತ್ತದೆ. ಈ ರೀತಿಯಾಗಿ, ಫೋನ್‌ನಲ್ಲಿರುವ ಎರಡೂ ಸಂಖ್ಯೆಗಳಿಂದ ವಾಟ್ಸ್​ಆ್ಯಪ್​ ಖಾತೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ