Parliament Winter Session: ಲೋಕಸಭಾ ಸದಸ್ಯರ ಹಾಜರಾತಿಗೆ ಡಿಜಿಟಲ್‌ ಟಚ್, ಎಲೆಕ್ಟ್ರಾನಿಕ್‌ ಟ್ಯಾಬ್‌ನಲ್ಲಿ ಡಿಜಿಟಲ್‌ ಪೆನ್‌ ಬಳಸಿ ಸಹಿ

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್​ 20ರವರೆಗೆ ನಡೆಯಲಿದೆ. ಈ ಬಾರಿಯ ಸದನದಲ್ಲಿ ಸದಸ್ಯರಿಗೆ ಮಾಡಲಾಗಿದ್ದ ಡಿಜಿಟಲ್ ಹಾಜರಾತಿ ವ್ಯವಸ್ಥೆಯೂ ಎಲ್ಲರ ಗಮನ ಸೆಳೆದಿದೆ. ಹೌದು, ಲೋಕಸಭಾ ಸದಸ್ಯರು ಎಲೆಕ್ಟ್ರಾನಿಕ್‌ ಟ್ಯಾಬ್‌ನಲ್ಲಿ ಡಿಜಿಟಲ್‌ ಪೆನ್‌ ಬಳಸಿ ತಮ ಹಾಜರಾತಿ ಸಹಿ ಮಾಡುವ ಮೂಲಕ ಲೋಕಸಭಾ ಸ್ಪೀಕರ್ ಅವರ ಈ ಉಪಕ್ರಮವನ್ನು ಖುಷಿಯಿಂದಲೇ ಸ್ವಾಗತಿಸಿದ್ದಾರೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 25, 2024 | 5:33 PM

ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದು ಕೆಲಸ ಕಾರ್ಯಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿಕೊಂಡಿದ್ದಾರೆ. ಅದಲ್ಲದೇ, ಈ ಡಿಜಿಟಲ್ ಇಂಡಿಯಾ ಎನ್ನುವುದು ಕೇಂದ್ರ ಸರಕಾರದ ಬಹು ದೊಡ್ಡ ಕನಸಾಗಿದ್ದು, ಈ ನಿಟ್ಟಿನಲ್ಲಿ ಭಾರತದಾದಂತ್ಯ ಎಲ್ಲಾ ಕೆಲಸ ಕಾರ್ಯಗಳು ಡಿಜಿಟಲ್ ಆಗಿಯೇ ನಡೆಯುತ್ತಿದೆ. ಆದರೆ ಇಂದಿನಿಂದ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದಸ್ಯರು ಎಲೆಕ್ಟ್ರಾನಿಕ್‌ ಟ್ಯಾಬ್‌ಲ್ಲಿ ಡಿಜಿಟಲ್ ಆಗಿ ಸಹಿ ಹಾಕಿದ್ದಾರೆ.

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್​ 20ರವರೆಗೆ ನಡೆಯಲಿದ್ದು, ಮೊದಲ ದಿನವೇ ಲೋಕಸಭಾ ಸದಸ್ಯರು ಎಲೆಕ್ಟ್ರಾನಿಕ್‌ ಟ್ಯಾಬ್‌ನಲ್ಲಿ ಡಿಜಿಟಲ್‌ ಪೆನ್‌ ಬಳಸಿ ಡಿಜಿಟಲ್ ಹಾಜರಾತಿ ಹಾಕುವ ಮೂಲಕ ಅಧಿವೇಶನದಲ್ಲಿ ಡಿಜಿಟಲ್ ಟಚ್ ನೀಡಿದ್ದಾರೆ.

ಸ್ಪೀಕರ್ ಓಂ ಬಿರ್ಲಾ ಅವರ ಸಂಸತ್ತನ್ನು ಪೇಪರ್‌ಲೆಸ್ ಮಾಡುವ ಉಪಕ್ರಮದ ಭಾಗವಾಗಿ ಲೋಕಸಭೆಯ ಸಭಾಂಗಣದ ಲಾಬಿಯಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್‌ಗಳು ಇರಿಸಲಾಗಿದೆ. ಈ ಡಿಜಿಟಲ್ ಹಾಜರಾತಿ ಮೂಲಕ ಲೋಕಸಭಾ ಸ್ಪೀಕರ್ ಅವರ ಈ ಉಪಕ್ರಮವನ್ನು ಸಂಸದರು ಖುಷಿಯಿಂದಲೇ ಸ್ವಾಗತಿಸಿದ್ದಾರೆ. ಅದಲ್ಲದೇ, ಈ ವ್ಯವಸ್ಥೆಯೂ ಸರಳ, ಅನುಕೂಲಕರ ಮತ್ತು ಸ್ನೇಹಪರ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್​ಆ್ಯಪ್ ಖಾತೆಗಳನ್ನು ಹೇಗೆ ಬಳಸುವುದು?: ಇಲ್ಲಿದೆ ಟ್ರಿಕ್

ಡಿಜಿಟಲ್ ಹಾಜರಾತಿಗಾಗಿ ಲೋಕಸಭೆಯ ಸಭಾಂಗಣದ ಲಾಬಿಯಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಎಲೆಕ್ಟ್ರಾನಿಕ್‌ ಟ್ಯಾಬ್‌ಗಳನ್ನು ಇರಿಸಲಾಗಿದೆ. ಡಿಜಿಟಲ್ ಹಾಜರಾತಿಯ ವೇಳೆ ತಾಂತ್ರಿಕ ಸಹಾಯಕ್ಕಾಗಿ ಪ್ರತಿ ಕೌಂಟರ್‌ನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಇಂಜಿನಿಯರ್‌ಗಳ ತಂಡವನ್ನು ನಿಯೋಜಿಸಲಾಗಿದೆ. ಅದಲ್ಲದೇ, ದೈಹಿಕ ಹಾಜರಾತಿ ರಿಜಿಸ್ಟರ್‌ಗಳನ್ನು ಇಡಲಾಗಿದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?